ಮಾವಿನ ಶುಂಠಿ ಹೆಸರು ಕೇಳಿದ್ದರೆ ಇದರ ಗುಣಗಳನ್ನು ತಿಳಿಯುವುದು ಅಗತ್ಯ. ಆಯುರ್ವೇದ ಮತ್ತು ಯುನಾನಿ ಔಷಧೀಯಲ್ಲಿ ಬಹಳ ಉಪಕಾರಿ ಎನಿಸಿರುವ ಮಾವಿನ ಶುಂಠಿ ಸಿಗುವುದು ಕೂಡ ಬಹಳ ವಿರಳ.
ನೋಡಲು ನಿತ್ಯ ಬಳಕೆಯ ಶುಂಠಿಯAತೆ ಇದ್ದು ರೆಂಬೆಕೊAಬೆಯನ್ನು ಒಳಗೊಂಡಿದೆ. ಆದರೆ ನಾರಿನ ತರ ಇರದೆ, ಮೃದುವಾಗಿ ಇದ್ದು ಮಾವಿನ ಪರಿಮಳದಿಂದ ಕೂಡಿದೆ.
ಮಾವಿನ ಶುಂಠಿಯು ಹಸಿವು ನಿವಾರಕ, ಪಿತ್ತರಸ, ತುರಿಕೆ, ಚರ್ಮದ ಸಮಸ್ಯೆಗಳಿಗೆ ಅಸ್ತಮಾ, ಬಿಕ್ಕಳಿಕೆ ಮತ್ತು ಗಾಯದಿಂದ ಉಂಟಾಗುವ ಉರಿಯೂತವನ್ನು ಗುಣಪಡಿಸಲು ಸಹಕಾರಿ.ಜೀರ್ಣಕ್ರೀಯೆಗೂ ಉತ್ತಮ. ಮಾವಿನ ಶುಂಠಿ ಮೂರು ದೋಷವನ್ನು ನಿವಾರಿಸುತ್ತದೆ.ಉಸಿರಾಟದ ಸಮಸ್ಯೆ, ಕೂದಲಿನ ಸಮಸ್ಯೆಗಳಾದ ತಲೆಹೊಟ್ಟು ಸಮಸ್ಯೆಗೂ ಸೂಕ್ತ ಪರಿಹಾರ ಒದಗಿಸುವಲ್ಲಿ ಸಹಕಾರಿ.
ಭಾರತದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರಿಂದ ಕರೆಯಲ್ಪಡುವ ಮಾವಿನ ಶುಂಠಿಯನ್ನು ಹೆಚ್ಚಾಗಿ ಗುಜರಾತ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕರ್ನಾಟಕ ಹಾಗೂ ತಮಿಳ್ನಾಡು ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಸಾಮನ್ಯವಾಗಿ ಎಪ್ರೀಲ್ ತಿಂಗಳಲ್ಲಿ ಬೆಳೆಸಲು ಆರಂಬಿಸಿದ್ದಾರೆ ಎಳರಿಂದ ಎಂಟು ತಿಂಗಳು ಸಮಯ ಬೇಕಾಗುತ್ತದೆ.
ಮಾವಿನ ಶುಂಠಿಯನ್ನು ಉಪ್ಪಿನ ಕಾಯಿ, ಚಟ್ನಿ, ಮತ್ತು ಸಾಸ್ ಗಳನ್ನು ಮಾಡಲು ಬಳಸಬಹುದಾಗಿದೆ. ಮಜ್ಜಿಗೆ ತಯಾರಿಸುವಾಗ ಮಾಮೂಲಿನ ಶುಂಠಿಯ ಬದಲು ಮಾವಿನ ಶುಂಠಿಯನ್ನು ಬಳಸಿದಲ್ಲಿ ಮಜ್ಜಿಗೆಯ ರುಚಿಯು ಭಿನ್ನವಾಗಿರುತ್ತದೆ ಜೋತೆಗೆ ಮಾವಿನ ಪರಿಮಳವನ್ನು ನೀಡುತ್ತದೆ. ಜಿಂಜರ್ ಲೆಮನ್ ಜ್ಯೂಸ್ ಗಳಲ್ಲಿ ಮಾವಿನ ಶುಂಠಿಯನ್ನು ಬೆರೆಸಿದಲ್ಲಿ ಅದ್ಭುತ ರುಚಿಯನ್ನು ನೀಡುತ್ತದೆ.
ಒಟ್ಟಿನಲ್ಲಿ ಔಷದಕ್ಕೂ ಸೈ ಆಹಾರ ಪದಾರ್ಥಗಳಿಗೂ ಸೈ ಎನ್ನುವ ಈ ಮಾವಿನ ಶುಂಠಿ ಯಾವ ವಿಧದಲ್ಲೂ ಬಳಸಬಹುದು ಮತ್ತು ಬಲು ಉಪಯುಕ್ತಕಾರಿ. ತನ್ನ ಯಾವುದರಲ್ಲೂ ತನ್ನ ಮೂಲ ಗುಣವನ್ನು ಬಿಟ್ಟು ಕೊಡದು ಈ ಮಾವಿನ ಶುಂಠಿ.