ಹೆಚ್ಚಾಗಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿರುವ ಈ ಖಾದ್ಯ ಇತ್ತೀಚೆಗೆ ಕರ್ನಾಟಕದಲ್ಲೂ ಈ ಖಾದ್ಯವನ್ನು ಸವಿಯುವವರ ಸಂಖ್ಯೆ ಹೆಚ್ಚಾಗಿದೆ. ವಿಭಿನ್ನವಾದ ಈ ರುಚಿಯನ್ನು ನೀವು ಒಮ್ಮೆ ಟ್ರೈ ಮಾಡಿ ನೋಡಿ.
ಮಾಡುವ ವಿಧಾನ :
ದಪ್ಪ ಹಾಲಿನಿಂದ ಮಾಡಿದ ಅರ್ಧ ಲೀಟರ್ ಸಿಹಿ ಮೊಸರನ್ನು ಮೂರು ತಾಸು ತೆಳ್ಳಗಿರುವ ಕಾಟನ್ ಬಟ್ಟೆಯಲ್ಲಿ ಕಟ್ಟಿ ಹಾಕಿ ಗಟ್ಟಿ ಮೊಸರನ್ನಾಗಿ ಮಾಡಿಕೊಳ್ಳಬೇಕು. ಇನ್ನೂ ಚೆನ್ನಾಗಿ ಹಣ್ಣಾದ ನಾಲ್ಕೈದು ಮಾವಿನ ಹಣ್ಣುಗಳ ಪಲ್ಪನ್ನು ತೆಗೆದುಕೊಂಡು ಮಿಕ್ಸರ್ ನಲ್ಲಿ ಸ್ಮೂತ್ ಆಗಿ ಗ್ರಾಂಡ್ ಮಾಡಿಕೊಳ್ಳಬೇಕು. ನಂತರ ಗಟ್ಟಿ ಮೊಸರು ಮತ್ತು ಮಾವಿನ ಹಣ್ಣಿನ ಪಲ್ಪ್, ಮತ್ತು ಒಂದು ಲೋಟ ಸಕ್ಕರೆ ಸೇರಿಸಿ ದೊಡ್ಡ ಪರಾತ ದಲ್ಲಿ ಹಾಕಿಕೊಂಡು ದಪ್ಪನೆಯ ಲೋಟ ತೆಗೆದುಕೊಂಡು ಚೆನ್ನಾಗಿ ತಿಕ್ಕಬೇಕು. ಸಕ್ಕರೆ ಸಮೇತ ಮಿಕ್ಸರ್ ನಲ್ಲಿ ಹಾಕಿದರೆ ಅದು ಪಾಯಸದಂತೆ ಆಗುತ್ತದೆ .ಅದು ಐಸ್ ಕ್ರೀಮ್ ನಂತೆ ಆಗಬೇಕು. ಸಕ್ಕರೆ ಹಾಕುವುದು ಮೊಸರಿನ ಸಿಹಿ ಮತ್ತು ಹಣ್ಣಿನ ಸಿಹಿಯ ಮೇಲೆ ಅವಲಂಬಿತವಾಗಿರುತ್ತದೆ. ನಂತರ ಡ್ರೈ ಫ್ರೂಟ್ಸ್ ಹಾಕಿ ಯಾಲಕ್ಕಿ ಹಾಕಿ ಕೈಯಾಡಿಸಿದರೆ ಆಮ್ರ ಖಂಡ ರೆಡಿ ಟು ಈಟ್. ಫ್ರೀಜಿನಲ್ಲಿ ಇಟ್ಟು ತಿಂದರೆ ಸೇಮ್ ಐಸ್ ಕ್ರೀಮ್. ಇದನ್ನು ಮಾಡಿಟ್ಟುಕೊಂಡು ಫ್ರಿಜ್ಜಿನಲ್ಲಿಟ್ಟು ಎರಡು ಮೂರು ದಿನ ಬಳಸಬಹುದು