ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಉನ್ನತ ಹುದ್ದೆಯಲ್ಲಿದ್ದವರು ಕೆಲಸಕ್ಕೆ ರಾಜೀನಾಮ ನೀಡಿ ರಾಜಕೀಯ ಸೇರುತ್ತಿರುವುದು ಸಾಮಾನ್ಯವಾಗಿದೆ. ಅಂತವರ ಪಟ್ಟಿಯಲ್ಲಿ ಈಗ ಮತ್ತೊಬ್ಬ ಅಧಿಕಾರಿ ಸೇರ್ಪಡೆಗೊಂಡಿದ್ದಾರೆ. ಬ್ಯಾಡಗಿಯ ಉಪ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಗವಿಸಿದ್ದಪ್ಪ ದ್ಯಾಮಣ್ಣ ಈ ಬಾರಿಯ ವಿಧಾನಸಭಾ ಚುನಾವಣೆಯ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾವೇರಿ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದು, ಎಲ್ಲರಲ್ಲಿ ಅಚ್ಚರಿಯನ್ನ ಮೂಡುಸಿದ್ದಾರೆ.
ಮೂಲತಃ ಗದಗ ತಾಲೂಕಿನ ಲಿಂಗದಾಳ ಗ್ರಾಮದ ಗವಿಸಿದ್ದಪ್ಪನವರು ಜನಸೇವೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಕಟ ಸಂಪರ್ಕವನ್ನು ಹೊಂದಿದ್ದರು. ಕಚೇರಿಗೆ ಬರುವ ಬಡ ಮಧ್ಯಮ ವರ್ಗದ ಜನರಿಗೆ ಅಗತ್ಯವಾದ ಎಲ್ಲ ಕೆಲಸವನ್ನು ತ್ವರಿತವಾಗಿ ಮಾಡಿಕೊಡುತ್ತಿದ್ದರು. ಅವರ ಜನಸೇವಾ ಮನೋಭಾವದಿಂದ ಜನರಿಗೆ ಹತ್ತಿರವಾಗಿದ್ದರು. ಹಾವೇರಿಯಿಂದ ಬ್ಯಾಡಗಿಗೆ ವರ್ಗವಣೆಯಾದರೂ ಕೂಡ ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು.
ಧಾರವಾಢ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಅಗ್ರಿ ಸ್ನಾತಕೋತರ ಪದವಿಯನ್ನು ಪಡೆದಿರುವ ಇವರು ಪಿಎಚ್ಡಿ ವ್ಯಾಸಾಂಗ ಮಾಡುತ್ರತಿರುವಾಗ ಉಪ ತಹಸೀಲ್ದಾರ್ ಹುದ್ದೆಯನ್ನು ಪಡೆದುಕೊಂಡರು. ೨೦೦೫ರಲ್ಲಿ ಹಾವೇರಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೨೦೦೫ರಿಂದ ೨೦೧೩ರವರೆಗೆ ಉಪವಿಭಾಗಾಧಿಕಾರಿಯಾಗಿ ಕಚೇರಿ ಗ್ರೇಡ್ ೨ ತಹಸೀಲ್ದಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ನಂತರ ೨೦೧೩ರಿಂದ ೨೦೨೧ರವರೆಗೆ ಹಾವೇರಿ ಮತ್ತು ಗುತ್ತಲ ವಿಭಾಗದಲ್ಲಿ ಉಪ ತಹಸೀಲ್ದಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ೨೦೨೧ರಲ್ಲಿ ಹಾವೇರಿಯಿಂದ ಬ್ಯಾಡಗಿ ಉಪ ತಹಸೀಲ್ದಾರಾಗಿ ವರ್ಗವಣೆಗೊಂಡರು.
ಈ ಬಾರಿ ಟಿಕೆಟ್ ಗಾಗಿ ನೆಹರು ಓಲೇಕಾರ್, ವೆಂಕಟೇಶ್ ನಾರಾಯಣಿ, ಪರಮೇಶ್ವರ ಮೇಗಳಮನಿ, ಕೆ.ಬಿ ಮಲ್ಲಿಕಾರ್ಜುನ, ಡಿಎಸ್ ಮಾಳಗಿ, ಶ್ರೀಪಾದ ಬೆಟಗೇರೆ ಸೇರಿದಂತೆ ಹಲವಾರು ಜನ ಪೈಪೋಟಿಯಲ್ಲಿದ್ದರೂ ಕೂಡ ಪಕ್ಷ ಗವಿಸಿದ್ದಪ್ಪ ಅವರಿಗೆ ಅವಕಾಶವನ್ನು ನೀಡಿದೆ