ಹೊಸದಿಲ್ಲಿ: ಬೇಸಿಗೆಯ ಬಿಸಿಯು ನಿಮ್ಮ ಚರ್ಮ ಮತ್ತು ಕೂದಲಿಗೆ ಕೆಟ್ಟದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಯಾವುದೇ ವೆಚ್ಚದಲ್ಲಿ ಅದನ್ನು ರಕ್ಷಿಸುವುದು ಅತ್ಯಗತ್ಯ.
ಒಝಿವ ನ ಸಹ-ಸಂಸ್ಥಾಪಕರಾದ ಮಿಹಿರ್ ಗದಾನಿ , ಸುಡುವ ಬೇಸಿಗೆಯ ಶಾಖದಿಂದ ನಿಮ್ಮ ಕೂದಲನ್ನು ಯಶಸ್ವಿಯಾಗಿ ರಕ್ಷಿಸಲು ಹತ್ತು ಮಾರ್ಗಗಳನ್ನು ಹಂಚಿಕೊಂಡಿದ್ದಾರೆ.
1. ಬೇಸಿಗೆಯಲ್ಲಿ ನಿಮ್ಮ ಕೂದಲಿಗೆ ಹೆಚ್ಚು ಕಾಸ್ಮೆಟಿಕ್ ಅಥವಾ ಬಣ್ಣ ಹಚ್ಚಬೇಡಿ. ಬೇಸಿಗೆಯಲ್ಲಿ ನಿಮ್ಮ ಕೂದಲಿಗೆ ರಾಸಾಯನಿಕ ಉತ್ಪನ್ನಗಳನ್ನು ಬಳಸದೆ, ಬಣ್ಣ ಹಚ್ಚಲು ನೀವು ಬಯಸುವುದೆ ಆದರೆ, ನೀವು ನೈಸರ್ಗಿಕವಾಗಿ ಸಿಗುವ ಪದಾರ್ಥಗಳನ್ನು ಬಳಸುವುದು ಉತ್ತಮ.
2. ಬಿಸಿಲಿನಿಂದ ಕೂದಲು ತುಂಬಾ ಒಣಗುತ್ತಿದೆಯೇ? ಸೂರ್ಯನ ಶಾಖದಿಂದ ನಿಮ್ಮ ಕೂದಲನ್ನು ಸುರಕ್ಷಿತವಾಗಿರಿಸಲು ಸೂಕ್ತವಾದ ಮಾರ್ಗವೆಂದರೆ ಕ್ಯಾಪ್ ಅಥವಾ ಸ್ಕಾರ್ಫ್ ಧರಿಸುವುದು.
3. ಶಾಂಪೂವಿನ ಅತಿಯಾದ ಬಳಕೆ ನಿಮ್ಮ ಕೂದಲಿಗೆ ಹಾನಿಕಾರಕ. ಪ್ರತಿದಿನ ಶಾಂಪೂವನ್ನು ಬಳಸಿದರೆ ಅದು ನಿಮ್ಮ ನೆತ್ತಿಯನ್ನು ಒಣಗಿಸುತ್ತದೆ. ಶಾಂಪೂವನ್ನು ಹಾಕುವುದಿದ್ದರೆ, ನೆತ್ತಿಯ ಮಧ್ಯಭಾಗದಲ್ಲಿ ಮಾತ್ರ ಹಾಕಿ ಕೂದಲಿಗೆ ಹಾಕಬೇಡಿ.
4. ಬೇಸಿಗೆಯಲ್ಲಿ ಈಜುಕೊಳಕ್ಕೆ ಹೋಗುವುದಿದ್ದರೆ ಲೀವ್ – ಇನ್ – ಕಂಡೀಷನರ್ ಅನ್ನು ಬಳಸಿ ಮತ್ತು ಈಜು ಕ್ಯಾಪ್ ಅನ್ನು ಧರಿಸುವುದರಿಂದ ಈಜುಕೊಳದಲ್ಲಿರುವ ಕ್ಲೋರಿನೆಟೆಡ್ ನೀರಿನಿಂದ ಕೂದಲಿಗೆ ಆಗುವ ಹಾನಿಯನ್ನು ತಪ್ಪಿಸಬಹುದು.
5. ನಿಮ್ಮ ಕೂದಲನ್ನು ಒಣಗಿಸಲು ಬ್ಲೋ ಡ್ರೈಯರ್ ಅನ್ನು ಬಳಸಿ. ಸ್ಟೈಲಿಂಗ್ ಐರನ್ಗಳು ಮತ್ತು ಕರ್ಲರ್ಗಳಿಂದ ದೂರವಿರಿ.
6. ಬೇಸಿಗೆಯ ಶಾಖದ ಸಮಯದಲ್ಲಿ ನಿಮ್ಮ ಕೂದಲಿನ ತುದಿಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ. ಆದ್ದರಿಂದ, ಸಲೂನ್ ಗೆ ಹೋಗಲು ಇದು ಉತ್ತಮ ಸಮಯ. ನಿಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಲು ನೀವು ಬಯಸದಿದ್ದರೆ, ನೀವು ಸಣ್ಣ ಟ್ರಿಮ್ ಮಾಡಿ ಅದರ ತುದಿಗಳನ್ನು ಚೆನ್ನಾಗಿ ಪೋಷಣೆ ಮಾಡಿ, ಇದು ನಿಮ್ಮ ಕೂದಲನ್ನು ಪುನಶ್ಚೇತನಗೊಳಿಸುತ್ತದೆ.
7. ಬೇಸಿಗೆಯಲ್ಲಿ ವೀಪರಿತವಾದ ಬೆವರು ಮತ್ತು ಕೊಳಕಾಗುವುದರಿಂದ ನಿಯಮಿತವಾಗಿ ಕೂದಲನ್ನು ಸ್ವಚ್ಛಗೊಳಿಸುತ್ತಾ ಇರಬೇಕು. ಆ ಸಮಯದಲ್ಲಿ ಉತ್ತಮ ಗುಣಮಟ್ಟದ ಶಾಂಪೂ ಮತ್ತು ಕಂಡೀಷನರ್ ಗಳನ್ನು ಬಳಸಿ.
8. ನಿಮ್ಮ ಕೂದಲು ಎಣ್ಣೆಯುಕ್ತ ಕೂದಲಲಾಗಿದ್ದರೆ, ಡ್ರೈ ಶ್ಯಾಂಪೂ ಬಳಸಿ. ನಿಮ್ಮ ನೆತ್ತಿ ಮತ್ತು ಕೂದಲಿಗೆ ಬೇಬಿ ಟಾಲ್ಕ್ ಅನ್ನು ಸ್ವಲ್ಪ ಸಿಂಪಡಿಸಬಹುದು ಮತ್ತು ನಂತರ ಅದನ್ನು ಬಾಚಿಕೊಳ್ಳಬಹುದು.
9. ಸಾಕಷ್ಟು ನೀರು ತಾಜಾ ಹಣ್ಣುಗಳ ಮತ್ತು ಹಸಿರು ತರಕಾರಿಗಳ ಸೇವನೆ ಕೂದಲಿನ ಆರೋಗ್ಯಕ್ಕೆ ಉತ್ತಮ.
10. ಕೂದಲಿನ ಮತ್ತು ತ್ವಚೆಯ ರಕ್ಷಣೆ ಪಡೆಯಲು ನೀವು ನಿಮ್ಮ ದೈನಂದಿನ ದಿನಚರಿಯಲ್ಲಿ ಸಲ್ಫೇಟ್ಗಳು, ಪ್ಯಾರಬೆನ್ಗಳು, ಬಣ್ಣಗಳು ಮತ್ತು ಕೃತಕ ಸುಗಂಧಗಳಂತಹ ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರುವ ಉತ್ಪನ್ನಗಳನ್ನು ಬಳಸಿ.
ಮೇಲೆ ತಿಳಿಸಲಾದ ಸಲಹೆಗಳನ್ನು ಶ್ರದ್ಧೆಯಿಂದ ಅನುಸರಿಸಿ ಮತ್ತು ಶಾಖದ ಸಮಯದಲ್ಲಿ ನಿಮ್ಮನ್ನು ನೀವು ತಂಪಾಗಿರಿಸುವ ನೈಸರ್ಗಿಕ ಮತ್ತು ಸಾವಯವ ಆಹಾರವನ್ನು ಸೇವಿಸುವ ಮೂಲಕ ಮತ್ತು ಸಾಕಷ್ಟು ನೀರು ಕುಡಿಯುವ ಮೂಲಕ, ಆಂತರಿಕವಾಗಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.