ಮಳೆಗಾಲವೆಂಬುವುದು ಪ್ರಕೃತಿ ವಿಕೋಪಗಳ ಸರಮಾಲೆಯ ಕಾಲ. ವಿಪರೀತ ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿ ಬೆಚ್ಚಗೆ ಮಲಗಿದ್ದ ಹಾವುಗಳು ಜನವಸತಿಗಳ ಕಡೆ ಬಂದು ಜನರನ್ನು ಸಾಕು ಪ್ರಾಣಿಗಳನ್ನು ಕಚ್ಚಿ ಸಮಸ್ಯೆಯನ್ನು ಉಂಟುಮಾಡುತ್ತದೆ.
ಹಾವುಗಳು ವಾಸಿಸಲು ಆದಷ್ಟು ಬೆಚ್ಚನೆಯ ಸ್ಥಳವನ್ನು ಆಯ್ಕೆ ಮಾಡಿ ಕೊಳ್ಳುತ್ತವೆ. ಮಳೆಗಾಲದಲ್ಲಿ ಎಲ್ಲಾ ಕಡೆ ನೀರು ತುಂಬಿದಾಗ ಹಾವುಗಳು ಬೆಚ್ಚನೆ ಸ್ಥಳ ಅರಸಿ ಜನವಸತಿ ಇರುವ ಕಡೆ ಬಂದು ನಮ್ಮ ಮನೆ ಪರಿಸರದಲ್ಲಿ ಸೇರಿಕೊಳ್ಳುತ್ತವೆ. ಮನೆಯ ಹೊರಗೆ ಇಟ್ಟಿರುವ ನಮ್ಮ ಶೂ, ಹೂವಿನ ಕುಂಡ , ಹಳೆಯ ಸಾಮಾಗ್ರಿಗಳು ಇರುವ ಕಡೆ ಹೀಗೆ ಎಲ್ಲಿ ಬೇಕಾದರೂ ಅವುಗಳು ಸೇರಿಕೊಳ್ಳಬಹುದು.
ಮೂಕ ಪ್ರಾಣಿಗಳಿಗೆ ನೋವಾದಾಗ ಕಚ್ಚುವುದೊಂದೇ ಗೊತ್ತು ಆದ್ದರಿಂದ ಬುದ್ಧಿವಂತರಾದ ನಾವುಗಳೇ ಈ ಬಗ್ಗೆ ಎಚ್ಚರದಿಂದಿರಬೇಕು. ಆದಷ್ಟು ಮನೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳ ಬೇಕು. ಶೂ ಮೊದಲಾದ ನಿತ್ಯದ ವಸ್ತುಗಳನ್ನು ಬಳಸುವಾಗ ಸರಿಯಾಗಿ ಪರೀಕ್ಷಿಸಿ ಉಪಯೋಗಿಸ ಬೇಕು. ಕತ್ತಲಾದ ನಂತರ ಹೊರಗೆ ಹೋಗುವಾಗ ಟಾರ್ಚ್ ಹಿಡಿದುಕೊಂಡೇ ಹೋಗಬೇಕು. ಹಾಸಿಗೆ, ತಲೆದಿಂಬನ್ನು ಸರಿಯಾಗಿ ನೋಡಿ ಪರೀಕ್ಷಿಸಿದ ನಂತರವೇ ಮಲಗಬೇಕು. ಇಷ್ಟು ಜಾಗ್ರತೆ ಮಾಡಿದ ನಂತರವೂ ಒಂದು ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿತೆಂದರೆ ನಾವು ಏನುಮಾಡಬಹುದು.
ಹಾವು ಕಡಿದ ತಕ್ಷಣ ಕಚ್ಚಿದ ಶರೀರದ ಭಾಗದಿಂದ ಸುಮಾರು 5 ರಿಂದ 10 ಸೆಂಟಿಮೀಟರ್ ಮೇಲಕ್ಕೆ ಅತಿ ಬಿಗಿಯಲ್ಲದ ಎರಡು ಕಟ್ಟಗಳನ್ನು ಹಾಕಬೇಕು.(ಬಟ್ಟೆ, ಹಗ್ಗ) ಆದಷ್ಟೂ ಆಚೆ ಈಚೆ ಓಡಾಡದೆ ಒಂದು ಕಡೆ ಕುಳಿತು ಕೊಳ್ಳಬೇಕು.(ಓಡಾಡುವುದರಿಂದ ಹೃದಯ ಬಡಿತ ಜೋರಾಗಿ ಶರೀರದಲ್ಲಿ ವಿಷ ಹರಡುವ ವೇಗವೂ ಜೋರಾಗುತ್ತದೆ). ಆದಷ್ಟೂ ಕಚ್ಚಿದ ಭಾಗದಿಂದ ರಕ್ತವನ್ನು ಹಿಂಡಿ ಹಿಂಡಿ ತೆಗೆಯ ಬೇಕು. (ಕೆಲವೊಂದು ಹಾವಿನ ವಿಷದಲ್ಲಿ ರಕ್ತ ತೆಳು ಆಗುವುದರಿಂದ ಮತ್ತು ಗಾಯ ಮಾಡುವಾಗ ರಕ್ತ ನಾಳ ತುಂಡಾಗುವ ಸಂಭವ ಇರುವುದರಿಂದ ಗಾಯವನ್ನು ಬ್ಲೆಡ್ ಇಲ್ಲವೆ ಇತರ ಆಯುಧದಿಂದ ದೊಡ್ಡದು ಮಾಡಲು ಹೋಗಬಾರದು.
ಅತ್ಯಂತ ಮುಖ್ಯ ವಿಷಯವೆಂದರೆ ಹಾವು ಕಚ್ಚಿದಾಗ ಆದಷ್ಟೂ ಮನಸ್ಸಿಗೆ ಧೈರ್ಯ ತಂದುಕೊಳ್ಳಬೇಕು. ನಮ್ಮ ಪರಿಸರದಲ್ಲಿ ಕಾಣುವ ಹೆಚ್ಚಿನ ಹಾವುಗಳು ನಿರ್ವಿಷಕಾರಿ ಆಗಿರುತ್ತದೆ. ಕೇವಲ ಬೆರಳೆಣಿಕೆಯಷ್ಟು ಹಾವುಗಳು ಮಾತ್ರವೇ ವಿಷಕಾರಿ ಆಗಿರುತ್ತದೆ. ಆದ್ದರಿಂದ ಹಾವು ಕಚ್ಚಿದ ತಕ್ಷಣ ನನ್ನ ಜೀವನವೇ ಅಂತ್ಯವಾಯಿತು ಎಂಬಂತೆ ಭಾವಿಸದೆ ಧೈರ್ಯವಾಗಿರಬೇಕು.
ಹಾವು ಕಚ್ಚಿದ ತಕ್ಷಣ ಸಮಯ ವಿಳಂಬ ಮಾಡದೆ ಹತ್ತಿರದ ಆಸ್ಪತ್ರೆಗೆ ಅಥವಾ ವಿಶ್ವಾಸಾರ್ಹ ನಾಟಿ ವೈದ್ಯರ ಬಳಿ ಚಿಕಿತ್ಸೆಗೆ ಕರೆದುಕೊಂಡು ಹೋಗುವುದು ಜಾಣತನ.
ವೈದ್ಯರನ್ನು ಸಂಪರ್ಕಿಸಲು ಸಮಯ ಹಿಡಿದರೆ ಅದಕ್ಕಿಂತ ಮೊದಲು ಒಂದು ಹಿಡಿ ತುಳಸಿಯನ್ನು ಏಳೆಂಟು ಕರಿಮೆಣಸಿನೊಂದಿಗೆ ಅಗಿದು ತಿನ್ನಬೇಕು.
ತುಂಬೆ ಗಿಡದ ರಸವನ್ನು ಅರೆದು ಕುಡಿಸಿ
ಎಕ್ಕಮಾಲೆ ಗಿಡದ ತುದಿಯಲ್ಲಿರುವ ಎರಡು ಚಿಗುರೆಯಂತೆ ಒಟ್ಟು 14 ಚಿಗುರೆಲೆ, ಏಳು ಸಣ್ಣ ಗಾತ್ರದ ಬೆಳ್ಳುಳ್ಳಿ ಎಸಳು, ಏಳು ಕರಿಮೆಣಸು ಇವಿಷ್ಟನ್ನು ಅರೆದು ರೋಗಿಗೆ ಕುಡಿಸಿ ಎಂತಹ ಪ್ರಭಾವಿ ವಿಷ ಆದರೂ ಇದರ ಸೇವನೆಯಿಂದ ದೇಹಕ್ಕೆ ತೊಂದರೆ ಆಗುವುದಿಲ್ಲ.
ಲಿಂಬೆ ರಸವನ್ನು ಕುಡಿಸಿ ಹಾಗೂ ನೆತ್ತಿಗೆ ಇದೇ ರಸವನ್ನು ಹಿಂಡಬೇಕು.
ನೀರುಳ್ಳಿಯನ್ನು ಜಜ್ಜಿ ಮೂಗಿನ ಬಳಿ ಹಿಡಿಯಿರಿ ಹಾಗೂ ನೆತ್ತಿಗೆ ಜಜ್ಜಿದ ಈರುಳ್ಳಿಯನ್ನು ಇಡಬೇಕು
ಹಾವಿನ ವಿಷಕ್ಕೆ ಪ್ರಭಾವಿ ಔಷಧಿಗಳಿವೆ. ಆದ್ದರಿಂದ ಹಾವು ಕಚ್ಚಿದ ತಕ್ಷಣ ಹೆದರದೆ ಧೈರ್ಯದಿಂದ ಪರಿಸ್ಥಿಯನ್ನು ಎದುರಿಸಲು ಸಿದ್ಧರಾಗಿ .ಕಾಲ ವಿಳಂಬ ಮಾಡದೆ ಚಿಕಿತ್ಸೆ ಪಡೆದು ಕೊಳ್ಳಬೇಕು.