ಸಿಯೋಲ್: ಜಪಾನ್ ದೇಶ ದುರ್ಬಲವಾಗಿರುವ ಪರಮಾಣ ಸ್ಥಾವರದ ಕಲುಷಿತ ನೀರನ್ನು ಸಮುದ್ರಕ್ಕೆ ಬಿಡುತ್ತಿದ್ದು, ಅಮದು ಮಾಡಿಕೊಳ್ಳುವ ಸಾಗರೋತ್ಪನ್ನ ಆಹಾರಗಳ ಮೂಲ ದೇಶ ಯಾವುದು ಎಂದು ಗುರುತಿಸಲು ದಕ್ಷಿಣ ಕೋರಿಯಾ ವಿಶೇಷ ತಪಾಸಣೆಯನ್ನು ಮಾಡಲಿದೆ ಎಂದು ದಕ್ಷಿಣ ಕೋರಿಯಾದ ಸಾಗರ ಸಚಿವಾಲಯ ತಿಳಿಸಿದೆ.
ಕಡಲಾಚೆಯಿಂದ ಬರುವ ಸಾಗರೋತ್ಪನ್ನ ಆಹಾರವನ್ನು ಪರೀಶಿಲಿಸಲು ಕೋಸ್ಟ್ ಗಾರ್ಡ್ಗೆ ಅಮದುದಾರರು, ವಿತರಕರು, ಚಿಲ್ಲರೆ ವ್ಯಾಪಾರಿಗಳು ಇನ್ನೂ ಮುಂದಿನ ಎರಡು ತಿಂಗಳು ಕಾಲ ಸಹಕಾರ ನೀಡಬೇಕು. ಅದರಲ್ಲಿ ಮುಖ್ಯವಾಗಿ ಸಮುದ್ರದಲ್ಲಿ ದೊರೆಯುವ ಪದಾರ್ಥಗಳಾದ ಸ್ಕಲ್ಲೊಪ್ಸ್, ಸೀ ಬ್ರೀಮ್ ಮತ್ತು ಸೀ ಸ್ಕ್ವಿರ್ಟ್ಗಳನ್ನು ರಫ್ತು ಮಾಡುವ ಮೂಲ ದೇಶವನ್ನು ಪತ್ತೆಹಚ್ಚಬೇಕು ಎಂದು ಸಚಿವಾಲಯ ಹೇಳಿದೆ.
ಟೋಕಿಯೊ ಮತ್ತು ಫುಕುಶಿಮಾ ಪರಮಾಣು ಸ್ಥಾವರಗಳ ಕಲುಶಿತ ನೀರನ್ನು ಸಮುದ್ರಕ್ಕೆ ಬೀಡಲು ಜಪಾನ್ ನಿರ್ಧರಿಸುವುದರಿಂದ ಅಮದು ಮಾಡಿಕೊಳ್ಳುವ ಸಮುದ್ರಹಾರದ ಬಗ್ಗೆ ಸುರಕ್ಷತ ದೃಷ್ಟಿಯಿಂದ ಮುಂಜಾಗೃತೆಯನ್ನು ತೆಗೆದುಕೊಳ್ಳುವು ಅನಿವಾರ್ಯವಾಗಿದೆ ಎಂದು ಹೇಳಿದರು.
೨೦೧೧ ರ ಅನಾಹುತದಿಂದ ಉಂಟಾದ ವಿಕಿರಣ ಸೋರಿಕೆಯ ಆತಂಕದಿಂದಾಗಿ ದಕ್ಷಿಣ ಕೊರಿಯಾವು ಜಪಾನಿನ ಎಂಟು ಕೇಂದ್ರಗಳಿಂದ ಸಾಗರೋತ್ಪನ್ನ ಆಹಾರಗಳ ಆಮದನ್ನು ನಿಷೇಧಿಸಿತ್ತು
ಜನರ ಸುರಕ್ಷತೆ ಮತ್ತು ಆರೋಗ್ಯವನ್ನು ಎಂದಿಗೂ ರಾಜಿ ಮಾಡಿಕೊಳ್ಳಲಾಗದ ಆದರಿಂದ ಆಮದು ನಿರ್ಬಂಧಗಳನ್ನು ಎಂದಿಗೂ ತೆಗೆದುಹಾಕುವುದಿಲ್ಲ ಎಂದು ಸಿಯೋಲ್ ಸರ್ಕಾರ ಹೇಳಿದೆ.
ಮೂಲ ದೇಶವನ್ನು ಗುರುತಿಸುವಲ್ಲಿ ವಿಫಲರಾದವರು 10 ಮಿಲಿಯನ್ ವೋನ್ ದಂಡವನ್ನು ಪಾವತಿಸಬೇಕು ಹಾಗೂ ಮಾರ್ಕ್ ಅನ್ನು ನಕಲಿ ಮಾಡುವವರು ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅಥವಾ 100 ಮಿಲಿಯನ್ ವರೆಗೆ ದಂಡವನ್ನು ಕಟ್ಟಬೇಕು