ಬೆಂಗಳೂರು : ಸಿಜಿಐ ಅರ್ಪಿಸಿದ, ಸ್ವೀಡನ್ನ ಲಿನ್ನಿಯಸ್ ವಿಶ್ವವಿದ್ಯಾಲಯ ಮತ್ತುಎಸ್ಯುಪಿಎಸ್ಐ (ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ ಆಂಡ್ ಆರ್ಟ್ಸ್ ಆಫ್ ಸದರ್ನ್ ಸ್ವಿಟ್ಜರ್ ಲ್ಯಾಂಡ್) ಸಹಯೋಗದಲ್ಲಿ ಬೆಂಗಳೂರಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಎಎಚ್ಇ- ಮಾಹೆ)ನ ಒಂದು ಘಟಕವಾಗಿರುವಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ತನ್ನ ಬೆಂಗಳೂರಿನ ಕ್ಯಾಂಪಸ್ ನಲ್ಲಿ ಜುಲೈ 3 ಮತ್ತು 4ರಂದುಕೋಡ್-ಎಐ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಜುಲೈ 3 ರಂದು ಎಂಐಟಿಯ ಭಾವನಾ (ಸಂಶೋಧನಾ ವಿದ್ವಾಂಸೆ) ಸ್ವಾಗತಿಸಿದರು ಮತ್ತು ಬೆಂಗಳೂರು ಎಂಐಟಿಯ ಎಚ್ಓಡಿ-ಐಟಿ ಡಾ. ದಯಾನಂದ ಪಿ (ಜನರಲ್ ಚೇರ್) ಸ್ವಾಗತ ಭಾಷಣ ಮಾಡಿದರು. ಭಾಗವಹಿಸಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬೆಂಗಳೂರು ಎಂಐಟಿ ಐಟಿಯ ಅಸೋಸಿಯೇಟ್ ಪ್ರೊಫೆಸರ್ಡಾ. ಗುರುರಾಜ್ ಹೆಚ್ ಎಲ್ (ಪ್ರೋಗ್ರಾಂ ಚೇರ್)ಅವರು ಸಮ್ಮೇಳನದ ಕುರಿತು ಕೆಲವು ಒಳನೋಟವುಳ್ಳ ಆರಂಭಿಕ ಭಾಷಣ ಮಾಡಿದರು.ನಂತರ ಮುಖ್ಯ ಅತಿಥಿಯಾಗಿದ್ದ ಅಶೋಕ್ ಚತುರ್ವೇದುಲಾ, ಹಿರಿಯ ಉಪಾಧ್ಯಕ್ಷರು, ಹಣಕಾಸು ಸೇವೆಗಳು, ಏಷ್ಯಾ ಪೆಸಿಫಿಕ್ ಗ್ಲೋಬಲ್ ಡೆಲಿವರಿ ಸೆಂಟರ್ಸ್ ಆಫ್ ಎಕ್ಸಲೆನ್ಸ್, ಸಿಜಿಐ ಅವರನ್ನು ಬೆಂಗಳೂರಿನ ಎಂಐಟಿ ಐಟಿಸಹ ಪ್ರಾಧ್ಯಾಪಕರಾದ ಡಾ. ಗೋಪಾಲಕೃಷ್ಣನ್ ಟಿ (ಕಾರ್ಯಕ್ರಮದ ಅಧ್ಯಕ್ಷರು) ಪರಿಚಯ ಮಾಡಿದರು. ಐಟಿಸಹಾಯಕ ಪ್ರಾಧ್ಯಾಪಕರಾದ ಡಾ ಯಶಸ್ವಿನಿಸಮಾರಂಭದ ನಿರ್ವಹಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ಚತುರ್ವೇದುಲಾ ಅವರು, “ಕೃತಕ ಬುದ್ಧಿಮತ್ತೆಯು ನಾವು ವಾಸಿಸುವ ಮತ್ತು ಕೆಲಸ ಮಾಡುವ ವಿಧಾನವನ್ನು ತ್ವರಿತವಾಗಿ ಪರಿವರ್ತಿಸುವುದರಿಂದ, ಮುಂಬರುವ ವರ್ಷಗಳಲ್ಲಿ ಪ್ರತಿಭೆಗಳ ಹುಡುಕಾಟಕ್ಕೆ ಉದ್ಯಮ ಮತ್ತು ಶೈಕ್ಷಣಿಕ ನಡುವಿನ ಸಹಯೋಗವು ಮುಖ್ಯವಾಗಿ ಬೇಕಾಗಿದೆ. ಉದ್ಯಮದ ನಾಯಕರಾಗಿ ಎಐಯಲ್ಲಿ ನುರಿತ ಮಾತ್ರವಲ್ಲದೆ ಹೊಸತನವನ್ನು ಅಳವಡಿಸಿಕೊಳ್ಳಲು ಸಿದ್ಧರಾಗಿರುವ ಮುಂದಿನ ಪೀಳಿಗೆಯನ್ನು ಪೋಷಿಸಲು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಕರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಸಿಜಿಐ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಎಂಐಟಿಯೊಂದಿಗೆ ಸಹಯೋಗ ಮಾಡಲು ಸಂತೋಷವಾಗಿದೆ ಮತ್ತು ಈ ಸಮಾವೇಶವು ಮುಂದಿನ ಬದಲಾವಣೆಯ ಅಲೆಯನ್ನು ಉದಾಹರಣೆಯ ಮೂಲಕ ಮುನ್ನಡೆಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳ ಮಾತುಗಳ ನಂತರಡಾ. ಪ್ರೇಮಾ ಕೆ ವಿ (ಸಹ ನಿರ್ದೇಶಕರು ಮತ್ತು ಜನರಲ್ ಚೇರ್), ಸಭಿಕರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಗೌರವಾನ್ವಿತ ಅತಿಥಿಗಳಾದ ಡಾ. ಫ್ರಾನ್ಸೆಸ್ಕೊ ಫ್ಲಾಮಿನಿ (ಪ್ರೊಫೆಸರ್, ಎಸ್ಯುಎಸ್ಪಿಐ, ಸ್ವಿಟ್ಜರ್ಲೆಂಡ್) ಮತ್ತು ಡಾ. ಸಂದೀಪ್ ಚಕ್ರವರ್ತಿ (ಅಸೋಸಿಯೇಟ್ ಪ್ರೊಫೆಸರ್, ಐಐಟಿ ಖರಗ್ಪುರ) ಅವರನ್ನು ಪರಿಚಯಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದಡಾ. ಫ್ರಾನ್ಸೆಸ್ಕೊ ಫ್ಲಾಮಿನಿಸೈಡ್,“ಈ ಕಾರ್ಯಕ್ರಮದ ಪ್ರಾಥಮಿಕ ಗುರಿಯು ಜಾಗತಿಕ ಪ್ರತಿಭೆಯನ್ನು ಪ್ರದರ್ಶಿಸುವುದು ಮತ್ತು ನವೀನ ಮನಸ್ಸುಗಳ ಮೇಲೆ ಬೆಳಕು ಚೆಲ್ಲುವುದು. ಇಂದು ನಾವು ಎದುರಿಸುತ್ತಿರುವ ಅಸಂಖ್ಯಾತ ಸಾಮಾಜಿಕ ಸವಾಲುಗಳನ್ನು ನಿಭಾಯಿಸಲುಎಐ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯವಾಗಿದೆಮತ್ತು ಈ ಸಮ್ಮೇಳನವು ವ್ಯಕ್ತಿಗಳು ತಮ್ಮ ಉತ್ಪನ್ನಗಳಲ್ಲಿ ಎಐ ಅನ್ನು ಚಿಂತನಶೀಲವಾಗಿ ಸಂಯೋಜಿಸಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಈ ಪ್ಲಾಟ್ಫಾರ್ಮ್ ವಿವಿಧ ವಿಭಾಗಗಳ ತಜ್ಞರೊಂದಿಗೆ ಸಂಪರ್ಕಹೊಂದಲು ಮತ್ತು ಅದ್ಭುತ ಪರಿಹಾರಗಳಲ್ಲಿ ಸಹಯೋಗ ಮಾಡಿಕೊಳ್ಳಲು ಅಸಾಧಾರಣ ಅವಕಾಶವನ್ನು ನೀಡುತ್ತದೆ” ಎಂದು ಹೇಳಿದರು.
ಎಂಐಟಿ-ಬಿಯ ನಿರ್ದೇಶಕ ಮತ್ತು ಜನರಲ್ ಚೇರ್ ಡಾ. ಜಗನ್ನಾಥ್ ಕರೋಡಿ ಅವರು ಮಾತನಾಡಿ,“ನಾವು ಬಹಳ ಆಸಕ್ತಿದಾಯಕ ಸಮ್ಮೇಳನವನ್ನು ನಡೆಸಿದ್ದೇವೆ. ಬಿ.ಟೆಕ್. ಇನ್ ಡೇಟಾ ಸೈನ್ಸ್ಮತ್ತು ಎಐಭಾರತದಲ್ಲಿ ಹೊಸ ಮತ್ತು ಹೆಚ್ಚು ಅಗತ್ಯವಿರುವ ಸಂಯೋಜನೆಯಾಗಿದೆ. ಅದಕ್ಕೆ ಅಗತ್ಯವಿರುವ ತಜ್ಞರನ್ನು ಕರೆತರುವ ಮೂಲಕ ಎರಡೂ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಹೊಸ ಒಳನೋಟಗಳನ್ನು ನೀಡುತ್ತದೆ. ಒಗ್ಗಟ್ಟಾಗಿ ನಮ್ಮ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಅಧ್ಯಾಪಕರು ಮತ್ತು ಸಿಜಿಐ ಅನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.
ಡಾ. ಮಧು ವೀರರಾಘವನ್ (ಪ್ರೊ ವೈಸ್ ಚಾನ್ಸೆಲರ್, ಮಾಹೆ ಬೆಂಗಳೂರು) ಮಾತನಾಡಿ,“ನಾನು ಅಧ್ಯಾಪಕರು ಮತ್ತು ಸಿಜಿಐಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಅಭ್ಯಾಸಿಗಳಲ್ಲಿ ಸಹಯೋಗದ ಕೆಲಸದ ಕುರಿತು ಗಮನ ಸೆಳೆಯಲು ಬಯಸುತ್ತೇನೆ. ಕಾಲಕ್ಕೆ ತಕ್ಕಂತೆ ಬದಲಾಗುವುದನ್ನು ನಾವು ನಂಬುತ್ತೇವೆ ಮತ್ತು ಉದ್ಯಮದ ತಜ್ಞರಿಂದ ಕಲಿಯುತ್ತೇವೆ. ಆದ್ದರಿಂದ ನಾವು ನಮ್ಮ ಈ ಕಲಿಕೆಯನ್ನು ನಮ್ಮ ವಿದ್ಯಾರ್ಥಿಗಳಿಗೆ ದಾಟಿಸಬಹುದು” ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ದೀಪಾ ಜಯಣ್ಣ (ಡೈರೆಕ್ಟರ್ ಕನ್ಸಲ್ಟಿಂಗ್ ಡೆಲಿವರಿ, ಸಿಜಿಐ), ಡಾ. ಫ್ರಾನ್ಸೆಸ್ಕೊ ಫ್ಲಾಮಿನಿ (ಪ್ರೊಫೆಸರ್, ಎಸ್ಯುಎಸ್ಪಿಐ, ಸ್ವಿಟ್ಜರ್ಲ್ಯಾಂಡ್), ರಾಘವ್ ಕುಮಾರ್ ಪಿ (ಉಪಾಧ್ಯಕ್ಷ ಕನ್ಸಲ್ಟಿಂಗ್, ಕನ್ಸಲ್ಟಿಂಗ್ಎನರ್ಜಿ ಮತ್ತು ಯುಟಿಲಿಟೀಸ್ ಎಪಿಎಸಿ ಸೊಲ್ಯೂಷನ್ಸ್), . ಬದ್ರಿ ರಾಮಕೃಷ್ಣನ್ (ಎಐ ಎಕ್ಸ್ಪ್ಲೋರರ್, ಟೆಕ್ನಾಲಜಿ ಲೀಡರ್ ಲುಲುಮೆಲಾನ್ ಇಂಡಿಯಾ) ಅವರು“ಜೆನ್ ಎಐ ವರ್ಲ್ಡ್ನಲ್ಲಿ ಭವಿಷ್ಯಕ್ಕೆ ಸಿದ್ಧವಾಗುವುದು” ಎಂಬ ವಿಷಯದ ಕುರಿತು ಚರ್ಚೆನಡೆಸಿದರುಮತ್ತು ಹರಿಕೃಷ್ಣನ್ ಕೆಎಸ್ (ಉಪ-ಅಧ್ಯಕ್ಷ ಮತ್ತು ಡೈರೆಕ್ಟರ್ ಕನ್ಸಲ್ಟಿಂಗ್ ಮತ್ತು ಸಬ್ ಬಿಯು ಲೀಡ್ ಮ್ಯಾನುಫ್ಯಾಕ್ಚರಿಂಗ್, ಸಿಜಿಐ) ಗೋಷ್ಠಿ ನಿರ್ವಹಣೆ ಮಾಡಿದರು. ಎಐಮತ್ತು ಡೇಟಾ ಸೈನ್ಸ್ ನ ವಿವಿಧ ಅಂಶಗಳನ್ನು ಚರ್ಚಿಸಲಾಯಿತುಮತ್ತು ಭವಿಷ್ಯದಲ್ಲಿ ತಮ್ಮ ಅತ್ಯುತ್ತಮ ಸಾಮರ್ಥ್ಯ ಹೊಂದಲು ಎಐ ಜೊತೆ ಕೆಲಸ ಮಾಡಲು ವಿದ್ಯಾರ್ಥಿಗಳು ಮತ್ತು ಪ್ರಶಿಕ್ಷಣಾರ್ಥಿಗಳನ್ನು ಸಿದ್ಧಪಡಿಸುವ ಸಾಧ್ಯತೆಯ ಕುರಿತು ಪ್ಯಾನೆಲಿಸ್ಟ್ಗಳು ಮತನಾಡಿದರು.
ಡೇಟಾ ಸೈನ್ಸ್ ವಿಷಯಗಳ ಮೇಲೆ ಸರಣಿ ಕಾರ್ಯಕ್ರಮಗಳು ನಡೆದವು (ಎಂಸಿಇ ಹಾಸನ, ಸಿಎಸ್ಇ ವಿಭಾಗದ ಪ್ರಾಧ್ಯಾಪಕರಾದ ಡಾ. ರಮೇಶ್ ಬಿಅಧ್ಯಕ್ಷತೆ ವಹಿಸಿದ್ದರು ಮತ್ತು ಡಾ. ಸಂದೀಪ್ ಚೌರಾಸಿಯಾ, ಮಣಿಪಾಲ್ ವಿಶ್ವವಿದ್ಯಾಲಯ, ಜೈಪುರ ಮತ್ತು ಡಾ. ಸೌಮ್ಯಲತಾ ನವೀನ್ ಸಂಯೋಜಕರಾಗಿದ್ದರು). ಈ ಕೆಳಗಿನ ವಿಚಾರಗಳ ಗೋಷ್ಠಿಗಳು ನಡೆದವು-ಇಂಡಸ್ಟ್ರಿಯಲ್ ಅಪ್ಲಿಕೇಶನ್ (ಅಧ್ಯಕ್ಷತೆ ಡಾ. ಚಂದ್ರಿಕಾ ಜೆ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಸಿಎಸ್ಇ ವಿಭಾಗ, ಎಂಸಿಇ ಹಾಸನ ಮತ್ತುಸಂಯೋಜಕರು ಭಾರತಿ ಮೇಕಲಾ, ನಿರ್ದೇಶಕ ಕನ್ಸಲ್ಟಿಂಗ್ ಎಕ್ಸ್ಪರ್ಟ್, ಸಿಜಿಐ ಮತ್ತು ಡಾ. ರಾಕೇಶ್ ಕುಮಾರ್ ಗೋಡಿ), ಐಓಟಿ, ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್, ನೆಟ್ವರ್ಕ್ಸ್ (ಅಧ್ಯಕ್ಷತೆ- ಡಾ. ಸುನಿತಾ ಎನ್ ಆರ್, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಸಿಎಸ್ಇ, ಎಸ್ಐಟಿ, ತುಮಕೂರು ಮತ್ತು ಸಂಯೋಜಕರು- ಮನೋಹರ್ ರೆಡ್ಡಿ ಗಾಲಿ, ನಿರ್ದೇಶಕ ಕನ್ಸಲ್ಟಿಂಗ್ ಎಕ್ಸ್ಪರ್ಟ್, ಸಿಜಿಐ ಮತ್ತು ಡಾ. ಎಸ್. ವೈಷ್ಣವಿ), ಚಿತ್ರ, ವಿಡಿಯೋ ಮತ್ತು ಸಿಗ್ನಲ್ ಪ್ರೊಸೆಸಿಂಗ್ (ಅಧ್ಯಕ್ಷತೆ- ಡಾ.ಸೌಮ್ಯರಾಣಿ ಸಿ.ಎನ್., ಅಸೋಸಿಯೇಟ್ ಪ್ರೊಫೆಸರ್, ಆರ್.ವಿ.ಸಿ.ಇ ಬೆಂಗಳೂರು ಸಿಎಸ್ಇ, ವಿವಿಸಿಇ, ಮೈಸೂರು ಮತ್ತು ಸಂಯೋಜನೆ- ಶ್ರೀರಾಮ್ ಪದ್ಮನಾಭನ್, ಮ್ಯಾನೇಜರ್ ಕನ್ಸಲ್ಟಿಂಗ್ ಎಕ್ಸ್ಪರ್ಟ್, ಸಿಜಿಐ ಮತ್ತು ಡಾ. ಅನಿತಾ ಪ್ರೇಮ್ಕುಮಾರ್), ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ (ಅಧ್ಯಕ್ಷತೆ- ಡಾ. ಪ್ರಕಾಶ್ ಕೆ ಸೋನ್ವಾಲ್ಕರ್, ಪ್ರೊಫೆಸರ್ ಮತ್ತು ಹೆಡ್, ವಿಭಾಗ, ಸಿಎಸ್ಇ (ಎಐಎಂಎಲ್), ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ರಿಸರ್ಚ್, ಬೆಳಗಾವಿ ಮತ್ತು ಸಂಯೋಜನೆ- ಸುದೇವ್ ಭಟ್, ಮ್ಯಾನೇಜರ್ ಕನ್ಸಲ್ಟಿಂಗ್ ಡೆಲಿವರಿ, ಸಿಜಿಐ ಮತ್ತು ಡಾ. ಅಮರೀನ್ ಆಯೇಷಾ) ಡೇಟಾ ಸೈನ್ಸ್ (ಅಧ್ಯಕ್ಷತೆ- ಡಾ. ಎಂ ವಿ ಸುಧಾಮಣಿ, ಪ್ರೊಫೆಸರ್, ಐಎಸ್ಇ, ಬಿಎಂಎಸ್ಸಿ ಬೆಂಗಳೂರು & ಡಾ. ಮೋಹನ ಕುಮಾರ್ ಎಸ್, ಎಂಎಸ್ಆರ್ಐಟಿ ಬೆಂಗಳೂರು ಮತ್ತು ಡಾ. ಅನಿಲ್ ಕುಮಾರ್ ಅವರಿಂದ ಸಂಯೋಜಿತ), ಇಂಡಸ್ಟ್ರಿಯಲ್ ಅಪ್ಲಿಕೇಶನ್ (ಅಧ್ಯಕ್ಷತೆ- ಡಾ. ಸಂಜೀವ್ ಎಸ್. ಸಣ್ಣಕ್ಕಿ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ವಿಭಾಗ. ಸಿಎಸ್ & ಇ, ಗೋಗ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿ ಡಾ. ವಿಂಧ್ಯಾ ಮಾಳಗಿ, ಪ್ರೊಫೆಸರ್, ಎಐ&ಎಂಎಲ್, ಡಿ ಎಸ್ ಸಿ ಇಮತ್ತು ಸಂಯೋಜನೆ- ಡಾ. ಪಿ. ದೇವಿಶಿವಶಂಕರಿ), ಐಓಟಿ, ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್, ನೆಟ್ವರ್ಕ್ಗಳು (ಅಧ್ಯಕ್ಷತೆ- ಡಾ. ರಾಜೇಂದ್ರ ಎ ಬಿ, ಪ್ರೊಫೆಸರ್, ಐಎಸ್ಇ ವಿಭಾಗ, ವಿವಿಸಿಇ, ಮೈಸೂರು & ಡಾ. ಎಸ್ ಶ್ರೀವಿದ್ಯಾ , ಪ್ರೊಫೆಸರ್ ಮತ್ತು ಮುಖ್ಯಸ್ಥರು, ಐಎಸ್ಇವಿಭಾಗ, ಬಿಎನ್ಎಂಐಟಿ, ಬೆಂಗಳೂರು ಮತ್ತು ಡಾ. ಅಭಿಜಿತ್ ದಾಸ್ ಅವರು ಸಂಯೋಜನೆ), ಚಿತ್ರ, ವಿಡಿಯೋ ಮತ್ತು ಸಿಗ್ನಲ್ ಪ್ರೊಸೆಸಿಂಗ್ (ಅಧ್ಯಕ್ಷತೆ ಡಾ. ಪಿ ವಿ ಭಾಸ್ಕರ್ ರೆಡ್ಡಿ, ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ರೇವಾ ವಿಶ್ವವಿದ್ಯಾಲಯ & ಸಜಿ ಗೋಪಿ, ಡೈರೆಕ್ಟರ್ ಕನ್ಸಲ್ಟಿಂಗ್ ಡೆಲಿವರಿ, ಸಿಜಿಐ ಮತ್ತು ಪ್ರಕಾಶ್ ಬಿ ಮೆಟ್ರೆ ಅವರಿಂದ ಸಂಯೋಜನೆ) ಬೆಂಗಳೂರು ಎಂಐಟಿ ಐಟಿಯ ಸಹ ಪ್ರಾಧ್ಯಾಪಕರಾದ ಡಾ. ಶ್ರೇಯಸ್ ಮೊದಲ ದಿನದ ಸಮ್ಮೇಳನವನ್ನು ಮುಕ್ತಾಯಗೊಳಿಸಿ ಧನ್ಯವಾದ ಸಮರ್ಪಿಸಿದರು.
ಜುಲೈ 4 ರಂದು 2 ನೇ ದಿನದ ಸಮ್ಮೇಳನವು ಡಾ.ಗೋಪಾಲಕೃಷ್ಣನ್ ಟಿ (ಕಾರ್ಯಕ್ರಮದ ಅಧ್ಯಕ್ಷರು), ಸಹ ಪ್ರಾಧ್ಯಾಪಕರು, ಐಟಿ, ಎಂಐಟಿ ಬೆಂಗಳೂರು ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು. ನಂತರ ಡಾ. ಶ್ರೇಯಸ್ ಜೆ (ಕಾರ್ಯಕ್ರಮದ ಸಹ-ಅಧ್ಯಕ್ಷ) ಸಮ್ಮೇಳನದ ಕುರಿತು ವರದಿ ಮಾಡಿದರು. ನಂತರ ಸಮ್ಮೇಳನದ ಸಮಾರೋಪವನ್ನು ಡಾ.ದಯಾನಂದ ಪಿ (ಜನರಲ್ ಚೇರ್)ಎಚ್ಓಡಿ – ಐಟಿ, ಎಂಐಟಿ -ಬೆಂಗಳೂರುಮತ್ತು ಸಮ್ಮೇಳನದಲ್ಲಿ ಭಾಗವಹಿಸಿದವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದರು.ನಂತರ ಪ್ರಶಸ್ತಿ ಪುರಸ್ಕೃತರಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ವಿತರಿಸಲಾಯಿತು ಮತ್ತುಡಾ. ಜಗನ್ನಾಥ ಕರೋಡಿ (ನಿರ್ದೇಶಕರು ಮತ್ತು ಜನರಲ್ ಚೇರ್, ಎಂಐಟಿ-ಬಿ) ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
ದಿನದ ಕಾರ್ಯಕ್ರಮಗಳ ಆರಂಭಕ್ಕೂ ಮುನ್ನ ಡೇಟಾ ಸೈನ್ಸ್ (ಡಾ. ಗೀತಾ ಆರ್ ಭರಮಗೌಡರ ಅಧ್ಯಕ್ಷತೆಯಲ್ಲಿ, ಸಿಎಸ್ಇ ವಿಭಾಗ, ಕೆಎಲ್ಇಐಟಿ, ಹುಬ್ಬಳ್ಳಿ. ಡಾ. ಮಮತಾ ಟಿ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಎಂಸಿಎವಿಭಾಗ, ಏಟ್ರಿಯಾಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಡಾ. ಪ್ರೀತಿ ಅವರಿಂದ ಸಂಯೋಜಿತ) ಇಂಡಸ್ಟ್ರಿಯಲ್ ಅಪ್ಲಿಕೇಶನ್ (ಅಧ್ಯಕ್ಷರಾದ ಡಾ. ಸುಪ್ರೀತ್ ಎಸ್, ಅಸೋಸಿಯೇಟ್ ಪ್ರೊಫೆಸರ್, ಸಿಎಸ್ಇ, ರೇವಾ ವಿಶ್ವವಿದ್ಯಾಲಯ ಮತ್ತು ದಿಲೀಪ್ ಕೆ ಪುಲಮತಿ, ಮ್ಯಾನೇಜರ್ ಕನ್ಸಲ್ಟಿಂಗ್ ಡೆಲಿವರಿ, ಸಿಜಿಐ ಮತ್ತು ಡಾ. ಕ್ಷಮಾ ಎಸ್ ಬಿ) ಐಒಟಿ, ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್, ನೆಟ್ವರ್ಕ್ಸ್ (ಅಧ್ಯಕ್ಷತೆ ಡಾ. ಶಶಿಕುಮಾರ್ ಜಿ ತೋಟದ್, ಪ್ರೊಫೆಸರ್, ರೊಬೊಟಿಕ್ಸ್ ಮತ್ತು ಆಟೊಮೇಷನ್, ಹುಬ್ಬಳ್ಳಿ, ಡಾ. ಜಯಂತಿ, ಅಸೋಸಿಯೇಟ್ ಪ್ರೊಫೆಸರ್, ಐಎಸ್ಇ, ಸಿಟೆಕ್ ಮತ್ತು ಸಹ. ಡಾ. ರುಹುಲ್ ಅಮೀನ್ ಹಜಾರಿಕಾ ಅವರಿಂದ ನಿರ್ದೇಶಿತ) ಡಾಟಾ ಸೈನ್ಸ್ (ಅಧ್ಯಕ್ಷರು ಡಾ. ನವೀನ್ ಕುಮಾರ್ ಸಿ ಎಂ, ಸಿಎಸ್ಬಿಎಸ್ ವಿಭಾಗದ ಸಹ ಪ್ರಾಧ್ಯಾಪಕರು, ಎಂಸಿಇ ಹಾಸನ ಡಾ ರೇಖಾ ಕೆ ಎಸ್, ಸಿಎಸ್ಇ ವಿಭಾಗ, ಎನ್ಐಇ ಮೈಸೂರು ಮತ್ತು ಸಹಕಾರಿ ಡಾ. ಸುಮಂತ್ ವಿ) ಡಾಟಾ ಸೈನ್ಸ್ (ಅಧ್ಯಕ್ಷ ಡಾ. ಕೃಷ್ಣ ಪ್ರಕಾಶ ಕೆ, ಅಸೋಸಿಯೇಟ್ ಪ್ರೊಫೆಸರ್, ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ ವಿಭಾಗ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ಮತ್ತು ಡಾ. ಮಂಜು ಎನ್, ಅಸೋಸಿಯೇಟ್ ಪ್ರೊಫೆಸರ್, ಐಎಸ್ಇ ವಿಭಾಗ, ಜೆಎಸ್ಎಸ್ಟಿಯು, ಮೈಸೂರು ಮತ್ತು ಡಾ. ಯಶಸ್ವಿನಿ ಕೆ ಎ) ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನದಿಂದ ಸಂಯೋಜಿತ(ಅಧ್ಯಕ್ಷತೆ ಡಾ. ಮಂಜುಳಾ ಆರ್ ಭರಮಗೌಡರ್, ಪ್ರೊಫೆಸರ್ ಮತ್ತು ಐಕ್ಯೂಎಸಿ ವರ್ಟಿಕಲ್ ಹೆಡ್, ಸ್ಕೂಲ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್, ರೇವಾ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಡಾ. ರಮೇಶ್ ಜಿ, ಸಹ ಪ್ರಾಧ್ಯಾಪಕರು. ಮೂಡುಬಿದಿರೆ ಮತ್ತು ಡಾ. ಸಂಗೀತಾ ಸಂಗನಿ ಅವರಿಂದ ಸಂಯೋಜಿತ) ಡಾಟಾ ಸೈನ್ಸ್ (ಅಧ್ಯಕ್ಷ ಡಾ. ಸುರೇಶ್ ಎಲ್, ಪ್ರೊಫೆಸರ್, ಐಎಸ್ಇ, ಆರ್ಎನ್ಎಸ್ಐಟಿ, ಬೆಂಗಳೂರು ವಿಭಾಗ, ಡಾ. ನಿರಂಜನಮೂರ್ತಿ ಎಂ, ಸಹ ಪ್ರಾಧ್ಯಾಪಕ, ಎಐ ಎಂಎಲ್ ವಿಭಾಗ, ಬಿಎಂಎಸ್ಐಟಿ ಬೆಂಗಳೂರು ಮತ್ತು ಸಹಕಾರ ಡಾ. ಅಮರೀನ್ ಆಯೇಶಾ ಅವರಿಂದ) ಕೈಗಾರಿಕಾ ಅಪ್ಲಿಕೇಶನ್ (ಡಾ. ಮಾಲತಿ ಎಸ್ ವೈ, ಸಹಾಯಕ ಪ್ರಾಧ್ಯಾಪಕರು, ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗ, ಕೆಎಲ್ಇಐಟಿ, ಹುಬ್ಬಳ್ಳಿ ಮತ್ತು ಡಾ. ಎಸ್ ಕೆ ಲಕ್ಷ್ಮಣಪ್ರಭು, ಸಹಾಯಕ ವ್ಯವಸ್ಥಾಪಕರು, ಟೆಕ್ ಲೀಡ್ ಮತ್ತು ಸಂಘಟಿತ ಡಾ. ಕಾರ್ತಿಕ್ ಎಸ್ ಎ) ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ (ಅಧ್ಯಕ್ಷ ಡಾ. ಜಯಣ್ಣ ಎಚ್ಎಸ್, ಡೀನ್-ಅಕಾಡೆಮಿಕ್ಸ್, ಎಸ್ಐಟಿ ತುಮಕೂರು ಮತ್ತು ಅಪುರ್ಬಾ ಕಲಿತಾ, ಡೈರೆಕ್ಟರ್ ಕನ್ಸಲ್ಟಿಂಗ್ ಡೆಲಿವರಿ, ಸಿಜಿಐ ಮತ್ತು ಡಾ. ಎಸ್. ವೈಷ್ಣವಿ ಅವರಿಂದ ಸಂಯೋಜಿತ) ಚಿತ್ರ, ವಿಡಿಯೋ ಮತ್ತು ಸಿಗ್ನಲ್ ಪ್ರೊಸೆಸಿಂಗ್ (ಅಧ್ಯಕ್ಷ ಡಾ. ಬಿ ಎಂ ಸಾಗರ್, ಪ್ರೊಫೆಸರ್ ಮತ್ತು ಹೆಡ್, ವಿಭಾಗ. ISE, RVCE, ಬೆಂಗಳೂರು ಮತ್ತು ಪ್ರೊ. ಮಂಜುನಾಥ್ಟಿಕೆಸಹ ಪ್ರಾಧ್ಯಾಪಕರು ಮತ್ತು ಎಚ್ಓಡಿ, ಎಐ&ಡಿಎಸ್ವಿಭಾಗ, KS ಸ್ಕೂಲ್ ಆಫ್ ENG. ಮತ್ತು ನಿರ್ವಹಣೆ ಮತ್ತು ಶ್ರೀಮತಿ ಸ್ನಿಗ್ಧಾ ಸೇನ್ ಅವರಿಂದ ಸಂಯೋಜಿತ) ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ (ಅಧ್ಯಕ್ಷತೆ ಡಾ. ಪ್ರೀತಿ, ಪ್ರೊ. & ಮುಖ್ಯಸ್ಥರು, ಐಎಸ್ಇ, ಸಿಟೆಕ್, ಬೆಂಗಳೂರು ವಿಭಾಗ ಮತ್ತು ಅನಿಂಧ್ಯಾ ಘೋಷ್, ಡೈರೆಕ್ಟರ್ ಕನ್ಸಲ್ಟಿಂಗ್ ಡೆಲಿವರಿ, ಸಿಜಿಐ ಮತ್ತು ಸಂಘಟಿತರು ಶ್ರೀಮತಿ ಸಪ್ನಾ ಆರ್) ಡೇಟಾ ಸೈನ್ಸ್ (ಅಧ್ಯಕ್ಷತೆ ವೆಂಕಟ ಎಸ್ ಎಂ, ಮ್ಯಾನೇಜರ್ ಕನ್ಸಲ್ಟಿಂಗ್ ಎಕ್ಸ್ಪರ್ಟ್, ಸಿಜಿಐ ಮತ್ತು ಡಾ. ಎಂ ಎಸ್ ಭಾರ್ಗವಿ, ಅಸೋಸಿಯೇಟ್ ಪ್ರೊಫೆಸರ್, ಸಿಎಸ್ಇ ವಿಭಾಗ, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಮತ್ತು ಸಂಘಟಿತ ಡಾ. ಮಧುರಾ ಕೆ) ಐಓಟಿ, ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್, ನೆಟ್ವರ್ಕ್ಸ್ (ಅಧ್ಯಕ್ಷತೆ ಡಾ. ಎಸ್. ಮೀನಾಕ್ಷಿ ಸುಂದರಂ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಎಐ ಮತ್ತು ಡಿಎಸ್ ವಿಭಾಗ, ಎನ್ಎಂಐಟಿ, ಬೆಂಗಳೂರು ಮತ್ತು ಮಂಜುನಾಥ ಮಲ್ಲೇಶ್, ಮ್ಯಾನೇಜರ್ ಕನ್ಸಲ್ಟಿಂಗ್ ಡೆಲಿವರಿ, ಸಿಜಿಐ ಮತ್ತು ಡಾ. ಸೌಮ್ಯಲತಾ ನವೀನ್ ಅವರಿಂದ ಸಂಯೋಜಿತ) ಕುರಿತು ಸಂವಾದ ನಡೆದುವು.
2-ದಿನದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಡಾ. ಗುರುರಾಜ್ ಹೆಚ್ ಎಲ್ (ಕಾರ್ಯಕ್ರಮದ ಅಧ್ಯಕ್ಷ) ಸಹ ಪ್ರಾಧ್ಯಾಪಕರು, ಐಟಿ, ಎಂಐಟಿ ಬೆಂಗಳೂರುಸಂಘಟಕರು ಮತ್ತು ಸ್ವಯಂಸೇವಕರಿಗೆ ಧನ್ಯವಾದ ಸಲ್ಲಿಸಿದರು.