ರಜಾದಿನಗಳು ಮತ್ತೆ ಬಂದಿದೆ. ಮಾರುಕಟ್ಟೆ ಮತ್ತು ಜನರಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಮೋಜು ಮಸ್ತಿಯ ಸಮಯ ಸನಿಹದಲ್ಲೇ ಇದೆ. ಜನರು ಬೇರೆ ಬೇರೆ ಸಮಾರಂಭಗಳಿಗೆ ಸಿಹಿತಿನಿಸುಗಳನ್ನು ಕೊಂಡುಕೊಳ್ಳುವುದರಲ್ಲೇ ಬ್ಯೂಸಿಯಾಗಿದ್ದಾರೆ. ಅಂತಹ ಸಂದರ್ಭಗಳಿಗಾಗಿ ಕಡಿಮೆ ಕ್ಯಾಲೋರಿ ಹೊಂದಿರುವ ಕೆಲವು ಸಿಹಿ ತಿನಿಸನ್ನು ಕಡಿಮೆ ಸಮಯದಲ್ಲಿ ನಾವೇ ತಯಾರಿಸಿಕೊಳ್ಳಬಹುದು ಆ ಸಿಹಿ ತಿನಿಸುಗಳ ಪಟ್ಟಿ ಇಲ್ಲಿದೆ.
ವಾಲ್ನೇಟ್ ಬರ್ಫಿ
ಬೇಕಾಗುವ ಪದಾರ್ಥಗಳು:
ಒಂದು ಕಪ್ ವಾಲ್ನಟ್
ಅರ್ಧ ಕೆಜಿ ಖೋಯಾ
ಒಂದು ಕಪ್ ಬೆಲ್ಲದ ಪುಡಿ
ಅರ್ಧ ಟೀಚಮಚ ಏಲಕ್ಕಿ ಪುಡಿ
ತುಪ್ಪ
ವಿಧಾನ
ಮೊದಲು ವಾಲ್ನಟ್ನ್ನು ಒರಟಾದ ಹದಕ್ಕೆ ಬರುವ ಹಾಗೇ ಪುಡಿ ಮಾಡಿಕೊಳ್ಳಿ ನಂತರ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಖೋಯಾವನ್ನು 7-8 ನಿಮಿಷಗಳ ಕಾಲ ಹುರಿಯಿರಿ ಮತ್ತು ಅದಕ್ಕೆ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ವಾಲ್ನಟ್ ಪುಡಿಯನ್ನು ಖೋವಾದೊಂದಿಗೆ ಮಿಶ್ರಣ ಮಾಡಿ ಮತ್ತೆ ಅದಕ್ಕೆ ಬಾದಾಮಿ ಪೇಸ್ಟ್ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಸ್ವಲ್ಪ ಬೇಯಿಸಿ .
ಚೆನ್ನಾಗಿ ಬೆಂದ ಬಳಿಕ ಒಂದು ತಟ್ಟೆಗೆ ಎಣ್ಣೆ ಸವರಿ ಆದರ ಮೇಲೆ ವಾಲ್ನಟ್ ಮಿಶ್ರಣವನ್ನು ಹಾಕಿ ಬರ್ಫಿಯ ರೀತಿ ಚೌಕಾಕಾರವಾಗಿ ಕತ್ತರಿಸಿ ತಣ್ಣಗೆ ಆಗಲು ಬಿಡಿ. ಮಿಶ್ರಣ ಸಂಪೂರ್ಣ ತಣ್ಣಗೆ ಆದರೆ ಆರೋಗ್ಯಕರ ಬರ್ಫಿ ಸವಿಯಲು ಸಿದ್ದ.
ಅಂಜೀರ್ ಮೌಸ್ಸ್
ಬೇಕಾಗುವ ಪದಾರ್ಥಗಳು:
ಒಂದು ಕಪ್ ಅಂಜೀರ್, (ನೀರಿನಲ್ಲಿ ನೆನೆಸಿದ)
ಅರ್ಧ ಟೀಚಮಚ ದಾಲ್ಚಿನಿ
ಅರ್ಧ ಕಪ್ ಹಾಲಿನ ಪುಡಿ
ಕತ್ತರಿಸಿದ ವಾಲ್ನಟ್ಸ್
ಎರಡು ಟೇಬಲ್ ಸ್ಪೂನ್ ಕೋಕೋ ಪೌಡರ್ ಕತ್ತರಿಸಿದ ಡ್ರೈಪ್ರೂಡ್ಸ್
ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಅಂಜೀರ್ ಸೇರಿಸಿ ಅದು ಮೆತ್ತನಾಗುವವರೆಗೂ ಬೇಯಿಸಿ. ನಂತರ ಬಿಸಿ ಆರಲು ಬಿಡಿ. ಅಂಜೀರ ತಣ್ಣಗೆ ಆದ ನಂತರ ಅದಕ್ಕೆ ದಾಲ್ಚಿನ್ನಿ, ಹಾಲು ಮತ್ತು ಕೋಕೋ ಪೌಡರ್ ಅನ್ನು ಸೇರಿಸಿ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ಕತ್ತರಿಸಿದ ಡ್ರೈಪ್ರೂಡ್ಸ್ನಿಂದ ಅಲಂಕಾರ ಮಾಡಿ ಬಡಿಸಿ.
ಓಟ್ಸ್ ಫಿರ್ನಿ
ಬೇಕಾಗುವ ಪದಾರ್ಥಗಳು:
ಐದು ಕಪ್ ಕೆನೆರಹಿತ ಹಾಲು
೬೦ ಗ್ರಾಂ ಅಕ್ಕಿ (ಅರ್ಧಗಂಟೆ ಬಿಸಿ ನೀರಿನಲ್ಲಿ ನೆನೆಸಿಡಿ)
ಒಂದು ಟೀ ಚಮಚ ಏಲಕ್ಕಿ ಪುಡಿ
ಒಂದು ಕಪ್ ಬೆಲ್ಲದ ಪುಡಿ
ಒಂದುಕಪ್ ಓಟ್ಸ್
ಕತ್ತರಿಸಿದ ಎರಡು ಟೇಬಲ್ ಸ್ಪೂನ್ ಪಿಸ್ತಾ
ಕತ್ತರಿಸಿದ ಹತ್ತು ಬಾದಾಮಿ
ವಿಧಾನ
ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಓಟ್ಸ್ ಮತ್ತು ಅಕ್ಕಿ ಸೇರಿಸಿ ಹಾಕಿ ಕುದಿಯಲು ಬಿಡಿ. ಓಟ್ಸ್ ಮತ್ತು ಸಂಪೂರ್ಣ ಬೆಂದು ಗಂಜಿಯ ಹದಕ್ಕೆ ಬರಬೇಕು ನಂತರ ಇದಕ್ಕೆ ಬೆಲ್ಲದ ಪುಡಿಯನ್ನು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಹಾಗೂ ಉರಿಯನ್ನು ಆಫ್ ಮಾಡಿ ತಣ್ಣಗೆ ಆಗಲು ಬಿಡಿ ನಂತರ ಇದಕ್ಕೆ ಕತ್ತರಿಸಿದ ಪಿಸ್ತಾ ಮತ್ತು ಬಾದಾಮಿ ಸೇರಿಸಿ ಸರ್ವ್ ಮಾಡಿ.
ಅಗಸೆಬೀಜದ ಲಡ್ಡೂ
ಬೇಕಾಗುವ ಪದಾರ್ಥಗಳು:
೪೦೦ ಗ್ರಾಂ ಸಂಪೂರ್ಣ
ಒಂದು ಕಪ್ ಅಗಸೆ ಬೀಜದ ಪುಡಿ
ಒಂದು ಕಪ್ ಕತ್ತರಿಸಿದ ಮಿಶ್ರ ನಟ್ಸ್ ,
ಆಗತ್ಯಕ್ಕೆ ತಕ್ಕಷ್ಟು ಬೆಲ್ಲದ ಪುಡಿ
ಅರ್ಧ ಕಪ್ ತುಪ್ಪ
ಹುರಿದ ಅಗಸೆ ಬೀಜಗಳು
ಅರ್ಧ ಟೀಚಮಚ ಏಲಕ್ಕಿ ಪುಡಿ
ವಿಧಾನ
ಒಂದು ಬಾಣಲೆ ತೆಗೆದುಕೊಂಡು ಅದರಲ್ಲಿ ಗೋಧಿ ಹಿಟ್ಟನ್ನು ಹಾಕಿ ಹುರಿಯಿರಿ. ಗೋಧಿ ಹಿಟ್ಟು ಸೀದುಹೋಗದಂತೆ ಕೈಯಾಡಿಸುತ್ತಿರಬೇಕು. ಹಾಗೇ ಒಂದು ಹಂತದ ವರೆಗೆ ಹುರಿದು ನಂತರ ಅದನ್ನು ತಣ್ಣಗಾಗಲು ಪಕ್ಕಕ್ಕೆ ಇರಿಸಿ.
ಗೋಧಿಹಿಟ್ಟು ತಣ್ಣಗೆ ಆದ ನಂತರ ಅದಕ್ಕೆ ತುಪ್ಪದೊಂದಿಗೆ ಸಕ್ಕರೆ, ಏಲಕ್ಕಿ ಪುಡಿ ಮತ್ತು ಬೀಜಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ನಿಮ್ಮ ಅಂಗೈಗಳಿಗೆ ಸ್ವಲ್ಪ ತುಪ್ಪವನ್ನು ಸವರಿಕೊಂಡು ಮಿಶ್ರಣದಿಂದ ಸಣ್ಣ ಲಡ್ಡೂ ತರಹದ ಆಕಾರಗಳನ್ನು ಮಾಡಿದರೆ ಅಗಸೆಬೀಜದ ಲಡ್ಡೂಸವಿಯಲು ಸಿದ್ಧ.