ಫಿಟ್ನೆಸ್ ಪ್ರಿಯರು ನೀವಾಗಿದ್ದರೆ, ಆರೋಗ್ಯದ ಬಗ್ಗೆ ನಿಮ್ಮ ಗಮನ ಹೆಚ್ಚಾಗಿದ್ದರೆ ಸ್ಮಾರ್ಟ್ ವಾಚ್ ನಮ್ಮ ಬೆಸ್ಟ್ ಫ್ರೆಂಡ್ ಅಂದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಇವತ್ತಿನ ದಿನಗಳಲ್ಲಿ ಸ್ಮಾರ್ಟ್ ವಾಚ್ ಒಂದು ಫ್ಯಾಷನ್. ಯಾರ ಕೈಯಲ್ಲಿ ನೋಡಿದರೂ ಈ ಸ್ಮಾರ್ಟ್ ವಾಚ್ ಕಾಣಸಿಗುತ್ತದೆ. ನಿಮ್ಮ ರಕ್ತದ ಒತ್ತಡ, ಹೃದಯ ಬಡಿತ, ಮೊಬೈಲ್ ನೊಂದಿಗೆ ಸಂಯೋಜಿಸುವುದರ ಮೂಲಕ ಕರೆ,ಸಂದೇಶಗಳು ಸಂಗೀತ, ಕ್ಯಾಲೆಂಡರ್ ಗಳನ್ನು ನೋಡಲು ನಿಮ್ಮ ಕೈಯಲ್ಲಿ ಸ್ಮಾರ್ಟ್ ವಾಚ್ ಒಂದಿದ್ದರೆ ಸಾಕು ನೀವು ಇದ್ಯಾವುದಕ್ಕೂ ಮೊಬೈಲ್ ನೋಡುವ ಅವಶ್ಯಕತೆ ಬರುವುದಿಲ್ಲ. ಈ ಸ್ಮಾರ್ಟ್ ವಾಚ್ ಮೂಲಕ ಇವೆಲ್ಲ ಕ್ಷಣಮಾತ್ರದಲ್ಲಿ ಪರಿಶೀಲಿಸಬಹುದು.
ಈ ಸ್ಮಾರ್ಟ್ ವಾಚ್ ಅನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ಧರಿಸಬಹುದು. ಇದರ ಬೆಲೆ 1,500 ರಿಂದ ಲಕ್ಷದವರೆಗೆ ಇದೆ. ಹೆಚ್ಚು ಹಣ ನೀಡಿದಷ್ಟು ಅದರ ಸೌಕರ್ಯಗಳು ಹೆಚ್ಚು ಹೆಚ್ಚು ಸಿಗುತ್ತವೆ.
ಸ್ಮಾರ್ಟ್ ವಾಚ್ ಎಲ್ಲಾ ಬಣ್ಣಗಳಲ್ಲಿ ದೊರೆಯುತ್ತದೆ. ಡಿಸ್ಪ್ಲೇ ಸ್ಕ್ವೇರ್ ಮತ್ತು ರೌಂಡ್ ಶೇಪ್ ನಲ್ಲಿ ಇರುತ್ತದೆ. ಇದನ್ನು ಧರಿಸಲು
ಹಗುರವಾಗಿರುತ್ತದೆ. ಇದರಲ್ಲಿ ವಾಟರ್ ಪ್ರೂಫ್ ಕೂಡ ಇರುತ್ತದೆ. ಇದು ಟಚ್ ಸ್ಕ್ರೀನ್ ಒಳಗೊಂಡಿರುತ್ತದೆ. ಇದನ್ನು ಕೈಯಲ್ಲಿ ಧರಿಸಿದರೆ ಆಕರ್ಷಕವಾಗಿ ಕೂಡ ಕಾಣಿಸುತ್ತದೆ.
ಈ ಸ್ಮಾರ್ಟ್ ವಾಚ್ 1.4, 1.8 ಮುಂತಾದ ಇಂಚುಗಳಸ್ಟಿದು ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 15 ದಿನಗಳ ಕಾಲ ಚಲಿಸುವುದು.ಇದರಲ್ಲಿ ಇನ್ಬಿಲ್ಟ್ ಜಿಪಿಎಸ್ ಕೆಲಸವನ್ನು ಕೂಡ ನಿರ್ವಹಿಸುತ್ತದೆ. ನೀವು ನಿಮ್ಮ ಅಗತ್ಯತೆಗೆ ಅನುಗುಣವಾಗಿ ಕೆಲವು ಸೆಟ್ಟಿಂಗ್ಗಳನ್ನು ಮಾಡಿಕೊಂಡರೆ ನಿಮ್ಮ ಅಗತ್ಯಗಳನ್ನು
ಪೂರೈಸಿಕೊಳ್ಳಬಹುದು.
ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಆಪಲ್ , ಬೋಟ್ , ಕ್ಸಿಮಿ , ರಿಯಲ್ ಮಿ ಮುಂತಾದ ಹಲವು ಕಂಪನಿಗಳ ಸ್ಮಾರ್ಟ್ ವಾಚ್ಗಳು ಲಭ್ಯವಿದೆ. ಕೆಲವೊಮ್ಮೆ ಈ ಸ್ಮಾರ್ಟ್ ವಾಚ್ ಗಳಲ್ಲಿ ಬಳಸುವ ಉತ್ತಮ ಸೆನ್ಸಾರ್ ಗಳಿಂದ ನಮ್ಮ ಆರೋಗ್ಯದ ಟ್ರ್ಯಾಕರ್ ಗಳಾಗಿ ಉತ್ತಮ ಫಲಿತಾಂಶವನ್ನು ಕೂಡ ನೀಡಬಲ್ಲವು.
ಈ ಸ್ಮಾರ್ಟ್ ವಾಚ್ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸಿಗುವುದರಿಂದ ನಮಗೆ ಬೇಕಾದವರಿಗೆ ಇದನ್ನು ಉಡುಗೊರೆಯಾಗಿ ನೀಡಿ ನಮ್ಮವರ ಸಂತೋಷವನ್ನು ಹೆಚ್ಚಿಸಿಕೊಳ್ಳಬಹುದು.
ಒಟ್ಟಿನಲ್ಲಿ ಇಂದಿನ ದುನಿಯಾದಲ್ಲಿ ಸ್ಮಾರ್ಟ್ ವಾಚ್ ತನ್ನದೇ ಹವಾವನ್ನು ಮೇನ್ಟೇನ್ ಮಾಡುತ್ತಿದೆ