ಬೂದು ಕುಂಬಳಕಾಯಿಯ ವೈಜ್ಞಾನಿಕ ಹೆಸರು ಬೆನಿಕಾಸ ಇಸ್ ಪೀಡಾ. ಬೂದ ಕುಂಬಳಕಾಯಿ
ಜ್ಯೂಸ್ ಗೆ ಬೇಕಾಗುವ ಸಾಮಗ್ರಿಗಳು :
ಬೂದುಕುಂಬಳಕಾಯಿ
ಬೆಲ್ಲ
ಏಲಕ್ಕಿ ಪುಡಿ
ನೀರು
ನೆನೆಸಿಟ್ಟ ಕಾಮ ಕಸ್ತೂರಿ ಬೀಜ
ವಿಧಾನ : ಒಂದು ಬೂದಕುಂಬಳಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ವಾಶ್ ಮಾಡಿಕೊಂಡು ಅದರ ಸಿಪ್ಪೆಯನ್ನು ಮತ್ತು ಬೀಜವನ್ನು ತೆಗೆಯಬೇಕು. ಆಮೇಲೆ ಅದನ್ನು ಚಿಕ್ಕ ಚಿಕ್ಕ ಹೋಳುಗಳಾಗಿ ಕತ್ತರಿಸಿಕೊಂಡು ಒಂದು ಮಿಕ್ಸಿ ಜ್ಯೂಸರಿಗೆ ಹಾಕಬೇಕು ಆಮೇಲೆ ಸ್ವಲ್ಪ ಬೆಲ್ಲ ಒಂದು ಚಿಟಿಕೆ ಏಲಕ್ಕಿಯನ್ನು ಸೇರಿಸಿ ಎರಡು ನಿಮಿಷ ಗ್ರಾಂಡ್ ಮಾಡಿಕೊಳ್ಳಬೇಕು. ಅದರ ನಂತರ ಅದನ್ನು ಜರಡಿಯ ಸಹಾಯದಿಂದ ಸೋಸಿಸಬೇಕು ಆಮೇಲೆ ಅದನ್ನು ಒಂದು ಸರ್ವಿಂಗ್ ಗ್ಲಾಸ್ ಗೆ ಹಾಕಿಕೊಂಡು ಮೇಲಿಂದ ಎರಡು ಚಮಚ ಮುಂಚೆ ನೆನೆಸಿಟ್ಟುಕೊಂಡ ಕಾಮ ಕಸ್ತೂರಿ ಬೀಜವನ್ನು ಸೇರಿಸಿ ಒಂದು ಐಸ್ ಕ್ಯೂಬ್ ಸೇರಿಸಿದರೆ ಬೂದುಕುಂಬಳಕಾಯಿ ಜ್ಯೂಸ್ ಸವಿಯಲು ಸಿದ್ದ.
ಬೂದ ಕುಂಬಳಕಾಯಿಂದ ಸಿಗುವಂತ ಉಪಯೋಗಗಳು:
ಇದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
96 ಶೇಕಡ ನೀರಿನಾಂಶ ಹೊಂದಿರುವ
100 ಗ್ರಾಂ ಬೂದುಕುಂಬಳಕಾಯಿಯಲ್ಲಿ 13% ಕ್ಯಾಲೋರಿ ಎನರ್ಜಿ
ಕೊಬ್ಬು 0.2 ಗ್ರಾಂ
ಪ್ರೋಟೀನ್ 0.4 ಗ್ರಾಂ ಇವೆ
ಉತ್ತಮ ಪ್ರಮಾಣದ ಕಬ್ಬಿಣಾಂಶ
ಕರಗುವ ನಾರಿನಾಂಶ
ಹೊಟ್ಟೆ ಹುಣ್ಣಿನ ಕಾಯಿಲೆ ಇದ್ದರೆ ಇದರ ಸೇವನೆ ಉತ್ತಮ.
ಮಹಿಳೆಯರಿಗೆ ಸಂಭವಿಸಬಹುದಾದ ಮುಟ್ಟಿನ ನಂತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.ಉಷ್ಣ ಆರೋಗ್ಯ ಇರುವವರು ವಾರಕ್ಕೆರಡು ಬಾರಿ ಕುಡಿದರೆ ದೇಹದ ಸ್ಥಿತಿ ಉತ್ತಮಗೊಳ್ಳುತ್ತದೆ.