ಇತ್ತೀಚಿನ ಮಹಿಳೆಯಾರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಪಿ ಸಿ ಓ ಡಿ ಮತ್ತು ಪಿ ಸಿ ಓ ಎಸ್. ಈ ಸಮಸ್ಯೆಯ ಆಳವನ್ನು ಕೆದಕಿದಾಗ ಸಾಕಷ್ಟು ಅಂಶಗಳು ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣ ಇಂದಿನ ನಮ್ಮ ಜೀವನ ಶೈಲಿ ಹಾಗೂ ಬದಲಾದ ಆಹಾರ ಪದ್ಧತಿ ಮೇಲ್ನೋಟಕ್ಕೆ ಕಂಡು ಬಂದರೂ ಇದನ್ನ ಹೊರತಾಗಿ ಸಾಕಷ್ಟು ಕಾರಣ ನಾವಿಲ್ಲಿ ನೋಡಬಹುದು.
ಪಿ ಸಿ ಓ ಡಿ ಎಂದರೆ ಪಾಲಿಸಿಸ್ಟಿಕ್ ಓವರಿ ಡಿಸೋರ್ಡರ್ ಎಂದು ಅರ್ಥೈಸಲಾಗಿದೆ.
ಸಾಮಾನ್ಯವಾಗಿ 13 ರಿಂದ 40 ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವಂಥ ಒಂದು ಸ್ಥಿತಿಯಿದ್ದಾಗಿರುತ್ತದೆ. ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಗಳ ಅಸಮತೋಲನದಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ಸುಮಾರು 9% ರಿಂದ 22% ಭಾರತೀಯ ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ.
ಪಿಸಿಓಡಿ ಉಂಟಾಗಲು ಕಾರಣಗಳು:
* ಪೌಷ್ಟಿಕ ಆಹಾರದ ಕೊರತೆ ಅಂದರೆ ಕೊಬ್ಬಿನ.
ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು
* ದೇಹದ ತೂಕದ ಪರಿಶೀಲನೆ
* ವ್ಯಾಯಾಮದ ಕೊರತೆ
* ಅಧಿಕ ಮಾನಸಿಕ ಒತ್ತಡ
* ಅನುವಂಶತೆಯ ಪ್ರಭಾವ ಕೂಡ ಇರಬಹುದು
ಸಮಸ್ಯೆಗಳು :
ಪಿಸಿಓಡಿ ಸಮಸ್ಯೆ ಇರುವವರಿಗೆ ಪ್ರತಿ ತಿಂಗಳು ಋತುಚಕ್ರದಲ್ಲಿ ಏರುಪೇರು ಆಗುತ್ತದೆ. ಋತುಚಕ್ರ ಸರಿಯಾಗಿ ಆದರೂ ಅಂಡಾಣುಗಳು ಅಂಡಕೋಶದಿಂದ ಬಿಡುಗಡೆಯಾಗುವುದಿಲ್ಲ ಅಲ್ಲದೆ ಈ ಸಮಯದಲ್ಲಿ ಹೆಚ್ಚಿನ ರಕ್ತಸ್ರಾವ, ತೀವ್ರ ಹೊಟ್ಟೆ ನೋವು, ಕೂದಲು ಉದುರುವುದು,ಮುಖದ ಮೇಲೆ ಮತ್ತು ಶರೀರದ ಮೇಲೆ ಅಧಿಕವಾಗಿ ಕೂದಲು ಕಾಣಿಸಿಕೊಳ್ಳುವುದು ಅಲ್ಲದೆ ಸೊಂಟದ ಭಾಗದಲ್ಲಿ ಕೆಲವೊಮ್ಮೆ ಬೊಜ್ಜು ಶೇಖರಣೆಯಾಗಿ ತೂಕ ನಿಯಂತ್ರಣ ಮೀರಿ ಹೆಚ್ಚಾಗುತ್ತದೆ. ಈ ರೀತಿ ಎಲ್ಲಾ ಆಗುವುದರಿಂದ ಮಹಿಳೆಯರು ಚಿಕ್ಕದಾದ ಈ ಸಮಸ್ಯೆಗೆ ದೊಡ್ಡದಾಗಿ ಯೋಚಿಸುತ್ತ ಮಾನಸಿಕ ಒತ್ತಡವನ್ನು ತಂದುಕೊಳ್ಳುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಪರಿಹಾರ :
ಒಳ್ಳೆಯ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾ ಅದರೊಟ್ಟಿಗೆ ಉತ್ತಮ ಪೌಷ್ಟಿಕಾಂಶವಿರುವ ಆಹಾರವನ್ನು ಸೇವಿಸುವುದು ಮತ್ತು ದಿನನಿತ್ಯದ ಆಹಾರದಲ್ಲಿ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಉಪಯೋಗಿಸಬೇಕು. ಸರಿಯಾದ ವ್ಯಾಯಾಮಗಳನ್ನು ಅಳವಡಿಸಿಕೊಂಡು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಬೇಕು . ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಾಗಿ ತಿನ್ನಬೇಕು ಮತ್ತು ಕೆಂಪಕ್ಕಿಯ ಜೊತೆಗೆ ಹೆಚ್ಚಿನ ನಾರಿನ ಅಂಶವುಳ್ಳ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಕೊನೆಯದಾಗಿ ಮಾನಸಿಕ ಒತ್ತಡವಿರುವ ಕೆಲಸದಿಂದ ದೂರ ಇರಬೇಕು.