ಬೆಂಗಳೂರು: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ಇಂದು ಗುವಾಹತಿಯಲ್ಲಿ ತನ್ನ ಹೊಸ ವಾಣಿಜ್ಯ ವಾಹನಗಳ ಬಿಡಿಭಾಗಗಳ ಗೋದಾಮು(ವೇರ್ ಹೌಸ್) ಅನ್ನು ಆರಂಭಿಸಿದೆ. ಇದು ಸಂಪೂರ್ಣವಾಗಿ ಡಿಜಿಟಲೈಸ್ಡ್ ಗೋದಾಮು ಆಗಿದ್ದು, ಒಟ್ಟು 1 ಲಕ್ಷ ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಎಲ್ಲಾ ವಾಣಿಜ್ಯ ವಾಹನಗಳಿಗೆ ಅಗತ್ಯವಿರುವ ಎಲ್ಲಾ ಬಗೆಯ ಬಿಡಿ ಭಾಗಗಳನ್ನು ಇಲ್ಲಿ ದಾಸ್ತಾನು ಮಾಡಲಾಗುತ್ತದೆ. ಈಶಾನ್ಯ ಭಾರತದ ಟಾಟಾದ ಅಧಿಕೃತ ಡೀಲರ್ ಗಳಿಗೆ ಸುಲಭವಾಗಿ ಇಲ್ಲಿಂದಲೇ ಬಿಡಿ ಭಾಗಗಳನ್ನು ಪೂರೈಕೆ ಮಾಡುವ ಮೂಲಕ ಬಿಡಿ ಭಾಗಗಳ ಸಮಸ್ಯೆಯನ್ನು ಹೋಗಲಾಡಿಸಲಿದೆ.
ವಿಶ್ವದರ್ಜೆಯ ಮೂಲಸೌಕರ್ಯದಿಂದ ಸುಸಜ್ಜಿತವಾಗಿದ್ದು, ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ಡಿಜಿಟಲೈಸ್ಡ್ ಪ್ರಕ್ರಿಯೆಗಳ ಮೂಲಕ ಗ್ರಾಹಕರಿಗೆ ಅತ್ಯದ್ಭುತವಾದ ಮೌಲ್ಯವರ್ಧಿತ ಸೇವೆಗಳನ್ನು ನೀಡಲಾಗುತ್ತದೆ. ಸಕಾಲಕ್ಕೆ ಈ ಬಿಡಿ ಭಾಗಗಳನ್ನು ತಲುಪಿಸುವ ನಿಟ್ಟಿನಲ್ಲಿ ಟಾಟಾ ಮೋಟರ್ಸ್ ಭಾರತದ ಅತಿ ದೊಡ್ಡ ಸಮಗ್ರ ಲಾಜಿಸ್ಟಿಕ್ ಸರ್ವೀಸ್ ಪೂರೈಕೆದಾರ ಸಂಸ್ಥೆಯಾಗಿರುವ ಡೆಲಿವರಿ ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಮೂಲಕ ತನ್ನ ತಂತ್ರಜ್ಞಾನ- ಸಕ್ರಿಯಗೊಳಿಸುವ ಗೋದಾಮು ಮತ್ತು ಸಾರಿಗೆ ಪರಿಹಾರಗಳನ್ನು ಬಳಸಿಕೊಂಡು ಡೆಲಿವರಿ ಮೂಲಕ ಬಿಡಿಭಾಗಗಳನ್ನು ರವಾನಿಸಲಿದೆ. ಗ್ರ್ಯಾವಿಟಿ ಸ್ಪೈರಲ್ ಮತ್ತು ವರ್ಟಿಕಲ್ ರೆಸಿಪ್ರೊಕೇಟಿಂಗ್ ಕನ್ವೇಯರ್ಸ್ ಸೇರಿದಂತೆ ಇನ್ನಿತರ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಗೋದಾಮು ಕಟ್ಟಿಂಗ್-ಎಡ್ಜ್ ಸ್ಟೋರೇಜ್ ಸಿಸ್ಟಂಗಳನ್ನು ಒಳಗೊಂಡಿದೆ. ಇದರ ಜೊತೆಗೆ ತಡೆರಹಿತವಾಗಿ ಕಾರ್ಯಾಚರಣೆಗೆ ಪೂರಕವಾಗಿ ಮಧ್ಯಮ ಮತ್ತು ಭಾರೀ ವಾಹನಗಳ ಬಿಡಿ ಭಾಗಗಳಿಗೆಂದೇ ಪ್ರತ್ಯೇಕ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
ಈ ಹೊಸ ಗೋದಾಮು ಆರಂಭದ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಸ್ಪೇರ್ಸ್ & ನಾನ್ ವೆಹಿಕ್ಯುಲರ್ ಬ್ಯುಸಿನೆಸ್ ನ ಮುಖ್ಯಸ್ಥ ವಿಕ್ರಂ ಅಗರ್ವಾಲ್ ಅವರು, “ಗುವಾಹತಿಯಲ್ಲಿ ಆರಂಭವಾಗಿರುವ ಈ ಹೊಸ ಗೋದಾಮು ಟಾಟಾ ಮೋಟರ್ಸ್ ನ ಗ್ರಾಹಕ –ಕೇಂದ್ರಿತ ಸೇವೆಗಳಿಗೆ ಸಾಕ್ಷಿಯಾಗಿದೆ. ಇದರಿಂದ ಸುಲಭವಾಗಿ ಬಿಡಿಭಾಗಗಳು ಲಭ್ಯವಾಗುವ ಮೂಲಕ ವಾಹನಗಳ ಮಾಲೀಕರ ಅನುಭವ ಹೆಚ್ಚಾಗುತ್ತದೆ. ಈ ಹೊಸ ಗೋದಾಮು ಸುತ್ತಮುತ್ತಲಿನ ಪ್ರದೇಶದಲ್ಲಿನ ಟಾಟಾ ಅಧಿಕೃತ ಸೇವಾ ಕೇಂದ್ರಗಳಲ್ಲಿ ಚುರುಕಾದ ದಾಸ್ತಾನು ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ಸೇವೆಯ ಗುಣಮಟ್ಟ ಮತ್ತು ವಾಹನದ ಸಮಯವನ್ನು ಹೆಚ್ಚಿಸುತ್ತದೆ. ಈ ಹೊಸ ಸೌಲಭ್ಯವು ಈಶಾನ್ಯ ಭಾಗದಲ್ಲಿನ ವೇಗವಾಗಿ ಬೆಳೆಯುತ್ತಿರುವ ನಮ್ಮ ಗ್ರಾಹಕರಿಗೆ ನಮ್ಮನ್ನು ಹತ್ತಿರಗೊಳಿಸುತ್ತದೆ ಮತ್ತು ಲಾಜಿಸ್ಟಿಕ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುತ್ತದೆ’’ ಎಂದರು.
ಟಾಟಾ ಮೋಟರ್ಸ್ ಸಬ್-1-ಟನ್ ನಿಂದ 55 ಟನ್ ವರೆಗಿನ ಸರಕು ಸಾಗಣೆ ವಾಹನಗಳು, 10 ಆಸನಗಳಿಂದ 51 ಆಸನಗಳ ಪ್ರಯಾಣಿಕ ಸಾರಿಗೆ ವಾಹನಗಳನ್ನು ತಯಾರಿಸುತ್ತಿದೆ. ಸಣ್ಣ ವಾಣಿಜ್ಯ ವಾಹನಗಳು, ಪಿಕಪ್ಸ್, ಟ್ರಕ್ ಗಳು ಮತ್ತು ಬಸ್ ಗಳನ್ನು ಒದಗಿಸುವ ಮೂಲಕ ಲಾಜಿಸ್ಟಿಕ್ ಮತ್ತು ಸಾರ್ವಜನಿಕ ಸಾರಿಗೆ ವಿಭಾಗಗಳ ಅಗತ್ಯತೆಗಳನ್ನು ಪೂರೈಸುತ್ತಿದೆ. ಕಂಪನಿಯು ದೇಶಾದ್ಯಂತ ನುರಿತ ಪರಿಣಗತರನ್ನೊಳಗೊಂಡ ತನ್ನ 2500+ ಟಚ್ ಪಾಯಿಂಟ್ ಗಳಸರಿಸಾಟಿಯಿಲ್ಲದ ಗುಣಮಟ್ಟ ಮತ್ತು ಸೇವಾ ಬದ್ಧತೆಯನ್ನು ನೀಡುತ್ತಾ ಬಂದಿದೆ. ಇದರ ಜೊತೆಗೆ ಟಾಟಾ ಜೆನ್ಯುನ್ ಪಾರ್ಟ್ಸ್ ಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದೆ.