೧. ಮಾನಸಿಕ ಆರೋಗ್ಯ
ಮಹಿಳೆಯರಿಗೆ ಸಹಜವಾಗಿಯೇ ಹಾರ್ಮೋನುಗಳ ಏರುಪೇರಿನಿಂದಾಗಿ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. 40 ರ ನಂತರ, ಮುಟ್ಟು ನಿಲ್ಲುವ ಸಮಯ ಹತ್ತಿರ ಬಂದರಂತೂ ಇದು ಇನ್ನಷ್ಟು ಹೆಚ್ಚಾಗುವ ಕಾರಣ ಮೊದಲಿನಿಂದಲೇ ಧ್ಯಾನ ಯೋಗ ಪ್ರಾಣಾಯಾಮ ಆಧ್ಯಾತ್ಮಿಕತೆಯನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡ ಷ್ಟು ಉತ್ತಮ
೨ . ಪೋಷಕಾಂಶಯುಕ್ತ ಹಾಗೂ ಆರೋಗ್ಯಕರ ಆಹಾರ ಸೇವನೆ-
ಹಣ್ಣು ತರಕಾರಿ ಧಾನ್ಯಗಳು ಆರೋಗ್ಯಕರ ಕೊಬ್ಬು , ಪ್ರೊಟೀನ್ ಗಳ ನ್ನು ಒಳಗೊಂಡ ಸಮತೋಲಿತ ಆಹಾರ ಸೇವನೆ ಒಳ್ಳೆಯದು
ನಿಯಮಿತ ವ್ಯಾಯಾಮ- ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ನಡಿಗೆ, ಈಜು ಅಥವಾ ತೋಟಗಾರಿಕೆ ಹೀಗೆ ಯಾವುದೇ ವ್ಯಾಯಾಮ ಇಷ್ಟಪಟ್ಟು ಮಾಡಿದಲ್ಲಿ ದೇಹ ಹಾಗೂ ಮನಸ್ಸು ಎರಡರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ನಿಯಮಿತ ಆರೋಗ್ಯ ತಪಾಸಣೆ – Mammogram, pelvic examination , pap test ಇತ್ಯಾದಿ ಪರೀಕ್ಷೆಗಳನ್ನು ವೈದ್ಯರ ಸಲಹೆ ಮೇರೆಗೆ ಮಾಡುವುದು ಒಳಿತು.
ಒಳ್ಳೆಯ ನಿದ್ರೆ / ಸುಖ ನಿದ್ರೆ
ಉತ್ತಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ದಿನನಿತ್ಯ 7 ರಿಂದ 8 ಗಂಟೆಗಳ ನಿದ್ದೆ ಅಗತ್ಯ.
ಇದೆಲ್ಲದರ ಜೊತೆಗೆ ಪದೇ ಪದೇ ತಿನ್ನುವ ಅಭ್ಯಾಸ, ಅತಿಯಾಗಿ ಪೋಷಕಾಂಶ ರಹಿತ ಆಹಾರ ಸೇವನೆ (junk food),
ಕಾರ್ಬೊನೇಟ್ ಪಾನೀಯ, ಅತಿಯಾದ ಉಪ್ಪು ಬಳಕೆಯನ್ನು ಕಡಿಮೆ ಮಾಡಿದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.