ವಿಶ್ವದಲ್ಲಿ ಸುಮಾರು 84 ಪ್ರತಿಶತ ಜನರು ಸ್ಮಾಟ್ಪೋðನ್ನ್ನು ಬಳಸುತ್ತಾರೆ. ಸ್ಮಾಟ್ಪೋðನ್ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ವೀಪರಿತವಾಗಿ ಹೆಚ್ಚುತ್ತಿದ್ದು, ಒಂದು ಕ್ಷಣ ಕೂಡ ಮೊಬೈಲ ಫೋನ್ನ್ನು ಬಿಟ್ಟಿರಲಾರದ ಪರಿಸ್ಥಿತಿ ಇಂದು ತಲುಪಿದ್ದೆವೆ. ನಮ್ಮ ದೈನಂದಿನ ಪ್ರತಿಯೊಂದು ಚಟುವಟಿಕೆಯಲ್ಲೂ ನಾವು ಮೊಬೈಲ್ ಫೋನ್ನ್ನು ಅವಲಂಬಿಸಿದ್ದೇವೆ. ಆದರೆ ನಮ್ಮ ಈ ಮೊಬೈಲ್ ಮೇಲಿನ ಅವಲಂಬನೆ ವಂಚಕರಿಗೆ ವರದಾನವಾದಂತಿದೆ.
ವಂಚಕರು ಮೊಬೈಲ್ ಫೋನ್ಗೆ ವೈರಾಸ್ ದಾಳಿ ಮಾಡುವ ಮೂಲಕ ಫೋನ್ನ್ನು ಹ್ಯಾಕ್ ಮಾಡುವಂತಹ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿದೆ. ಮೊಬೈಲ್ ಪೋನ್ಗೆ ವೈರಸ್ ದಾಳಿಯಾಗುತ್ತದೆ ಎಂದರೇ ನಿಮಗೆ ಅಚ್ಚರಿಯಾಗಬಹುದು ಆದರೆ ಇದು ನಿಜ. ಕಂಪ್ಯೂಟರ್ ಮೇಲೆ ವೈರಸ್ ದಾಳಿ ಮಾಡುವಂತೆ ಮೊಬೈಲ್ ಫೋನ್ ಮೇಲೆ ಕೂಡ ವಂಚಕರು ವೈರಸ್ ದಾಳಿಯನ್ನು ಮಾಡುತ್ತಿದ್ದಾರೆ.
ಮೊಬೈಲ್ ವೈರಸ್ ಹೇಗೆ ದಾಳಿ ಮಾಡುತ್ತದೆ:
ಸಾಮಾನ್ಯವಾಗಿ ಮೇಸಜ್ ಅಥವಾ ಇಮೇಲ್ ಮೂಲಕ ನಮ್ಮ ಫೋನ್ಗಳಲ್ಲಿ ನಾವು ಪಡೆಯುವ ಸ್ಪ್ಯಾಮ್ ಮೇಸೆಜ್ಗಳು ಕೆಲವೊಂದು ವೈರಸ್ಗಳಿಗೆ ಲಿಂಕ್ನ್ನು ಹೊಂದಿರುತ್ತವೆ, ಅವು ಒಂದು ರೀತಿಯ ದುರುದ್ದೇಶಹೊಂದಿರುವ ಸಾಫ್ಟ್ವೇರ್ (ಮಾಲ್ವೇರ್). ಹೆಚ್ಚಾಗಿ ಫೋನ್ ವೈರಸ್ ಕಂಪ್ಯೂಟರ್ ವೈರಸ್ನ ಹಾಗೇ ಕಾರ್ಯನಿರ್ವಹಿಸುತ್ತದೆ. ದುರುದ್ದೇಶ ಹೊಂದಿರುವ ಕೋಡ್ ನಿಮ್ಮ ಮೊಬೈಲ್ ಗೆ ವೈರಸ್ನ್ನು ಹರುಡುತ್ತದೆ. ಅಷ್ಟೇ ಅಲ್ಲದೇ ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಇತರರಿಗೆ ಇದು ಸ್ವಯಂ ಸಂದೇಶ ಅಥವಾ ಇಮೇಲ್ ಆಗಿ ಫಾರ್ವರ್ಡ್ ಮಾಡುವ ಮೂಲಕ ಇತರ ಮೊಬೈಲ್ಗಳಿಗೂ ಹರಡುತ್ತದೆ.
ಮೊಬೈಲ್ ವೈರಸ್ ದಾಳಿಯಿಂದ ಆಗುವ ಪರಿಣಾಮವೇನು:
ನಿಮ್ಮ ಮೊಬೈಲನ್ನ ಸ್ಫೀಡನ್ನು ಇದು ಕಡಿಮೆಗೊಳಿಸಬಹದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್ಗಳಿಗೆ ಕಳುಹಿಸಬಹುದು, ಮಾಲ್ವೇರ್ಗೆ ಲಿಂಕ್ ಮಾಡುವ ನಿಮ್ಮ ಸಂಪರ್ಕದಲ್ಲಿರುವವರಿಗೆ ಸ್ಪ್ಯಾಮ್ ಮೇಸೆಜನ್ನು ಕಳುಹಿಸಬಹುದು.
ನಿಮ್ಮ ಮೊಬೈಲ್ ಸ್ಕ್ರೀನ್ ಮತ್ತು ಕೀಬೋರ್ಡ್ ಗಳ ಮಾಹಿತಿಯನ್ನು ಮತ್ತು ನಿಮ್ಮ ಲೋಕೇಶ್ ಅನ್ನು ಟ್ರ್ಯಾಕ್ ಮಾಡುವ ಮೂಲಕ ವೈರಸ್ ಆಪರೇಟರ್ ಗೆ ನಿಮ್ಮ ಮಾಹಿತಿಗಳನ್ನು ನೀಡಬಹುದು. ನಿಮ್ಮ ಬ್ಯಾಂಕಿAಗ್ ಮಾಹಿತಿಯನ್ನು ಕದ್ದು, ಹ್ಯಾಕರ್ಗಳಿಗೆ ಕೊಡಬಹುದು.
ಆಪಲ್ ಅಥವಾ ಆಂಡ್ರಾಯ್ಡ್ ಹೆಚ್ಚು ಸುರಕ್ಷಿತವಾಗಿದೆಯೇ?
ಆಪಲ್ ನ್ನು ಸಾಮಾನ್ಯವಾಗಿ ಆಂಡ್ರಾಯ್ಡ್ ಗಿಂತ ಹೆಚ್ಚು ಸುರಕ್ಷಿತವೆಂದು ಹೇಳಲಾಗುತ್ತದೆ. ಮತ್ತು ವೈರಸ್ ದಾಳಿಗೆ ಕಡಿಮೆ ಗುರಿಯಾಗುತ್ತದೆ, ಆದರೆ ಐಫೋನ್ ಬಳಕೆದಾರರ ಕೆಲವು ನಿರ್ಲಕ್ಯದಿಂದಾಗಿ ವೈರಸ್ ದಾಳಿಗೆ ತುತ್ತಾಗುತ್ತಾರೆ.
ಮೊಬೈಲ್ ವೈರಸ್ಗೆ ತುತ್ತಾಗಿರುವುದನ್ನು ಹೇಗೆ ಪತ್ತೆ ಹಚ್ಚುವುದು:
ಮೊಬೈಲ್ನಲ್ಲಿ ಅಪ್ಲಿಕೇಶನ್ಗಳನ್ನು ತೆರೆಯಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂದರೆ ಅಥವಾ ಹೆಚ್ಚು ಬೇಗನೆ ನಿಮ್ಮ ಮೊಬೈಲ್ ಬ್ಯಾಟರಿ ಕಾಲಿಯಾಗುತ್ತಿದ್ದರೆ ಅದು ವೈರಸ್ ತುತ್ತಾಗಿರುವ ಸಾಧ್ಯತೆಗಳಿವೆ. ಇನ್ನೂ ಮೊಬೈಲ್ ನಲ್ಲಿ ಇಂಟರ್ನೆಟ್ ಡೇಟಾ ಬಳಕೆಗಿಂತ ಹೆಚ್ಚು ಉಪಯೋಗವಾಗುತ್ತಿದ್ದರೆ ಇಲ್ಲವೇ ಮೊಬೈಲ್ ಅನಿರೀಕ್ಷಿತವಾಗಿ ಬಿಸಿಯಾಗುತ್ತಿದ್ದರೆ ಇದು ವೈರಸ್ ದಾಳಿಯಾಗಿರುವ ಸೂಚನೆಯನ್ನು ನೀಡುತ್ತದೆ.
ವೈರಸ್ ದಾಳಿ ಮಾಡದಂತೆ ಮೊಬೈಲನ್ನು ಹೇಗೆ ರಕ್ಷಿಸಬಹುದು:
ಒಂದು ವೇಳೆ ನಿಮ್ಮ ಮೊಬೈಲ್ಗೆ ವೈರಸ್ ದಾಳಿಯಾಗದೆ ಎಂದು ನಿಮಗೆ ಅನುಮಾನ ಬಂದರೆ ನೀವು ತೆಗೆದುಕೊಳ್ಳಬಹುದಾದ ಕೆಲವು ಹಂತಗಳಿವೆ. ಮೊದಲಿಗೆ, ಮತ್ತಷ್ಟು ಹಾನಿಯನ್ನು ತಡೆಗಟ್ಟಲು ನೀವು ಮಾಲ್ವೇರ್ ಅನ್ನು ತೆಗೆದುಹಾಕಬೇಕಾಗುತ್ತದೆ. ಇದಕ್ಕಾಗಿ ಕೆಲವು ಸರಳ ಟ್ರಬಲ್ ಶೂಟ್ ಹಂತಗಳು ಇಲ್ಲಿವೆ.
ನಿಮ್ಮ ಫೋನ್ನ ಕ್ಯಾಶ್ ಮೆಮರಿ, ಬ್ರೌಸಿಂಗ್ ಹಿಸ್ಟರಿ ಮತ್ತು ವೆಬ್ ಸೈಟ್ ಡೇಟಾಗಳನ್ನು ತೆರವುಗೊಳಿಸಿ. ನಿಮ್ಮ ಮೊಬೈಲನ್ನು ರೀಸ್ಟಾರ್ಟ್ ಮಾಡಿ ಸೇಫ್ ಮೋಡ್ನಲ್ಲಿ ಬಳಸಿ. ನಂತರ ವಿಶ್ವಾಸಾರ್ಹ ಆಂಟಿ ವೈರಸ್ ಅಪ್ಲಿಕೇಶನ್ ಬಳಸಿ ಮೊಬೈಲನ್ನು ಸ್ಕಾನ್ ಮಾಡಿ.
ನೀವು ಡೌನ್ಲೋಡ್ ಮಾಡಿದ ಅಪ್ಲಿಕೇಶನ್ಗಳ ಪಟ್ಟಿಯಿಂದ ಯಾವುದೇ ಅನುಮಾನಾಸ್ಪದ ಅಥವಾ ಅಪರಿಚಿತ ಅಪ್ಲಿಕೇಶನ್ಗಳನ್ನು ಅಳಿಸಿ.
ಈ ಹಂತಗಳು ಪರಿಣಾಮಕಾರಿಯಾಗದಿದ್ದಲ್ಲಿ ನೀವು ನಿಮ್ಮ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಬಹುದು ಮತ್ತು ನಿಮ್ಮ ಫೋನ್ ಅನ್ನು ಫ್ಯಾಕ್ಟರಿ ರೀಸೆಟ್ ಮಾಡಬಹುದು. ಇದು ಯಾವುದೇ ರೀತಿಯ ಮಾಲ್ವೇರ್ಗಳನ್ನು ಮೊಬೈಲ್ನಿಂದ ತೆಗೆದುಹಾಕುತ್ತದೆ.
ಸೋಂಕಿನಿದ ನಿಮ್ಮ ಫೋನ್ನ್ನು ರಕ್ಷಿಸುವುದು :
ಅನುಮಾನಾಸ್ಪದ ಪಾಪ್-ಅಪ್ಗಳು, ಮೆಸೇಜ್ಗಳು, ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಅಥವಾ ಇಮೇಲ್ ಗಳಲ್ಲಿನ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ಗೂಗಲ್ ಪ್ಲೇ ಅಥವಾ ಆಪಲ್ ನ ಆಪ್ ಸ್ಟೋರ್ ನಂತಹ ಅಧಿಕೃತ ಅಪ್ಲಿಕೇಶನ್ ಸ್ಟೋರ್ಗಳಿಂದ ಮಾತ್ರ ಅಪ್ಲಿಕೇಶನ್ ಗಳನ್ನು ಇನ್ಸ್ಟಾಲ್ ಮಾಡಿ. ಇನ್ಸ್ಟಾಲ್ ಮಾಡುವ ಮೊದಲು ಅದು ಕೇಳುವ ಅನುಮತಿಗಳು ಅದರ ಕಾರ್ಯನಿರ್ವಗಣೆಗೆ ಅಗತ್ಯವಿದೆಯೇ ಎಂಬುದನ್ನು ಖಾತ್ರಿ ಪಡಿಸಿ. ಇಲ್ಲವೆಂದಾದಲ್ಲಿ ಅಂತಹ ಅನುಮತಿಗಳನ್ನು ನೀಡಬೇಡಿ.