ಬೆಳೆಯುತ್ತಿರುವ ನಗರಗಳಲ್ಲಿ ಸಮಸ್ಯೆಯಾಗಿ ಪರಿಣಾಮಿಸುತ್ತಿರುವ ಪಾರ್ಕಿಂಗ್ ಸಮಸ್ಯೆ. ತೀವ್ರಗತಿಯಲ್ಲಿ ನಗರಗಳು ಬೆಳೆಯುತ್ತಿದೆ. ಕೆಲವೊಂದು ಕಡೆ ಪಾರ್ಕಿಂಗ್ಮಾಡಲು ಸ್ಥಳಾವಕಾಶವೇ ಇಲ್ಲದಾಗಿದೆ. ಒಂದಿಷ್ಟು ವಾಣಿಜ್ಯ ಕಟ್ಟಡಗಳಿಗೆ ಪಾರ್ಕಿಗಿಂಗ್ ಎರಿಯಾನೇ ಇಲ್ಲದಾಗಿದೆ.
ಸಾರ್ವಜನಿಕರು ತಮ್ಮ ಗಾಡಿಗಳನ್ನು ಎಲ್ಲೆಂದರಲ್ಲಿ ಪಾರ್ಕ್ ಮಾಡಿ ತಮ್ಮ ಕೆಲಸಕ್ಕೆಂದು ಹೋಗಿ ಬರುವಷ್ಟರಲ್ಲಿ ಗಾಡಿ ಮಾಯವಾಗಿ ಟ್ರಾಫಿಕ್ ಪೊಲೀಸರ ಕೈ ಸೇರಿರುತ್ತದೆ.
ನಗರಗಳು ಬೆಳೆಯುವಾಗ ಪಾರ್ಕಿಗಿಂಗ್ ಮಾಡಲು ಸೂಕ್ತ ಸ್ಥಳಾವಕಾಶವನ್ನು ಗುರುತಿಸುವಲ್ಲಿ ವಿಫಲವಾಗಿವೆ. ಅಲ್ಲದೇ ಕೆಲವೊಂದು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುವ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳಾವಕಾಶವನ್ನು ಮಾಡದೇನೇ ಕಟ್ಟಡಗಳು ತಲೆ ಎತ್ತಿವೆ.
ಇಲ್ಲಿ ಆಡಳಿತ ವ್ಯವಸ್ಥೆಯ ಗಮನಕ್ಕೆ ಬಾರದೇ ಇರುವುದೇ ಸೊಜಿಗದ ಸಂಗತಿಯಾಗಿರುತ್ತದೆ. ಸೀಮಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿ ಸಮಯಕ್ಕೆ ಇಂತಿಷ್ಟು ಎಂದು ಹಣವನ್ನು ಸಂಗ್ರಹಿಸುವ ವ್ಯವಸ್ಥೆಯು ಕೆಲವಡೆ ನಡೆಯುತ್ತದೆ.
ಆದರೆ ಇಂತಹ ಪರ್ಯಾಯ ವ್ಯವಸ್ಥೆಗಳು ಎಲ್ಲಾ ನಗರಗಳಲ್ಲಿ ಇಲ್ಲ. ಆದರಿಂದ ಕೆಲವೊಂದು ಕಿರಿದಾದ ಸ್ಥಳಗಳಲ್ಲಿಯು ಸಾರ್ವಜನಿಕರು ತಮ್ಮ ವಾಹನವನ್ನು ನಿಲ್ಲಿಸಿ ಸಂಪೂರ್ಣ ಟ್ರಾಫಿಕ್ ಸಮಸ್ಯೆಯ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ.
ದಿನದಿಂದ ದಿನಕ್ಕೆ ಸಿಟಿ ಸೇರುವ ಜನರ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಾಹನ ದಟ್ಟನೆಗಳು ಕೂಡ ಹೆಚ್ಚುತ್ತಾಲೇ ಇವೆ. ಆದ್ದರಿಂದ ಪರ್ಯಾಯ ವ್ಯವಸ್ಥೆಗಳು ಅಗತ್ಯ.