ಇತ್ತೀಚೆಗೆ ನಡೆದ ನಂದಿನಿ ವರ್ಸಸ್ ಅಮುಲ್ ವಿವಾದ ಹಾಗೂ ನಂದಿನಿ ವರ್ಸಸ್ ಮಿಲ್ಮಾ ವಿವಾದದಿಂದ ದೇಶದ ಗಮನ ಸೆಳೆದಿದ್ದ ನಂದಿನ ಈಗ ಬೆಲೆ ಏರಿಕೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಈ ಹೊಸ ದರವು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರತಿ ಲೀಟರ್ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ. ಕೆಎಂಎಫ್ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದೆ.
ಈಗಿರುವ ದರ ಹಾಗೂ ಅಗಸ್ಟ್ 1 ರ ಬಳಿಕ ಜಾರಿಯಾಗಲಿರೋ ದರ
ಲೀ. ಟೋನ್ಡ್ ಹಾಲು – 39ರೂ 42ರೂ.
ಲೀ. ಹೋಮೋಜಿನೈಸ್ಡ್ ಟೋನ್ಡ್ ಹಾಲು- 40ರೂ 43ರೂ.
ಲೀ. ಸ್ಪೆಷಲ್ ಹಾಲು- 45 ರೂ 48ರೂ
ಲೀ. ಶುಭಂ ಹಾಲು- 45ರೂ 48ರೂ
ಲೀ. ಸಮೃದ್ದಿ ಹಾಲು – 50ರೂ 53ರೂ
ಲೀ. ಸಂತೃಪ್ತಿ ಹಾಲು – 52ರೂ 55 ರೂ
ಲೀ. ಡಬ್ಬಲ್ ಟೋನ್ಡ್ ಹಾಲು – 38 ರೂ 41 ರೂ
ಲೀ. ಮೊಸರು ಪ್ರತಿ ಲೀ – 47 ರೂ 51ರೂ
ಹಾಲಿನ ದರ ಜನರ ಆಕ್ರೋಶ:
ಹಾಲಿನದರ ಹೆಚ್ಚಾಳವಾದ ಬೆನ್ನಲ್ಲೇ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಹೀಗೆ ಬೆಲೆ ಜಾಸ್ತಿ ಮಾಡುತ್ತಿದ್ದರೆ, ಮಧ್ಯಮ ವರ್ಗದ ಜನ ಬದುಕುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.