ಮಂಗಳೂರು ಮೂಲದ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಅವರು ಜುಲೈ 14 ರಂದು ನಡೆಯಲಿರುವ ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಿ ಭಾರತೀಯ ತ್ರಿ-ಸೇವೆಗಳ ಭಾರತೀಯ ನೌಕಾ ತುಕಡಿಯನ್ನು ಮುನ್ನಡೆಸಿದ್ದಾರೆ.
ಮೂರು ಸೇವೆಗಳ ಪಥಸಂಚಲನ ತಂಡವನ್ನು ಕಮಾಂಡರ್ ವ್ರತ್ ಬಘೇಲ್ ಮುನ್ನಡೆಸಿದ್ದು ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್, ಲೆಫ್ಟಿನೆಂಟ್ ಕಮಾಂಡರ್ ರಜತ್ ತ್ರಿಪಾಠಿ ಮತ್ತು ಲೆಫ್ಟಿನೆಂಟ್ ಕಮಾಂಡರ್ ಜಿಟ್ಟಿನ್ ಲಲಿತಾ ಧರ್ಮರಾಜ್ ಅವರ ಪ್ರತಿನಿಧಿಗಳಾಗಿರುತ್ತಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಮೆರವಣಿಗೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದಾರೆ.
ಫೆಟ್ ನ್ಯಾಶನಲ್ ಫ್ರಾಂಕೈಸ್ ಅನ್ನು ಜುಲೈ 14 ರಂದು ಅಥವಾ ಫ್ರಾನ್ಸ್ ನಲ್ಲಿ ರಾಷ್ಟ್ರೀಯ ದಿನದಂದು ಆಚರಿಸಲಾಗುತ್ತದೆ. 1789 ರಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಬಾಸ್ಟಿಲ್ ಮೇಲೆ ದಾಳಿ ಮಾಡಿದ ವಾರ್ಷಿಕೋತ್ಸವವಾಗಿರುವುದರಿಂದ ಇದನ್ನು ಬಾಸ್ಟಿಲ್ ದಿನ ಎಂದೂ ಕರೆಯಲಾಗುತ್ತದೆ.
ಇನ್ನು ಮೂಲತಃ ಮಂಗಳೂರಿನವರಾದ ದಿಶಾ ತಿಲಕ ನಗರ ಬೋಳೂರಿನ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ಅವರ ಮಗಳಾಗಿದ್ದಾರೆ. ಬಾಲ್ಯದಿಂದಲೂ ನವಲ್ ಆಫೀಸರ್ ಆಗಬೇಕೆಂದಿದ್ದ ಇವರು ಮಂಗಳೂರಿನ ಕೆನರಾ ಮತ್ತು ಸಂತ ಅಲೋಶಿಯಸ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ, ಬಿಎಂಸ್ ಇನ್ಸ್ಟಿಟ್ಯೂಟ್ ಬೆಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯರ್ ಪದವಿ ಮುಗಿಸಿದರು.2016 ರಲ್ಲಿ ನೇವಿಗೆ ಸೇರಿ, ಪ್ರಸ್ತುತ ಲೆಫ್ಟಿನೆಂಟ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.