ಇಂದಿನ ಕಾಲದಲ್ಲಿ ಟಿವಿಗಳಿಲ್ಲದ ಮನೆ ಸಿಗುವುದು ಕಷ್ಟ. ಎಲ್ಲರೂ ಕೂಡ ಟಿವಿಯನ್ನು ನೋಡಿ ತಮ್ಮ ಸಮಯವನ್ನು ಕಾಲಹರಣ ಮಾಡುತ್ತಿರುತ್ತಾರೆ. ಆದರೆ ಮಳೆಗಾಲದಲ್ಲಿ ಮಳೆಯ ಜೊತೆಗೆ ಗುಡುಗು ಸಹ ಬರುತ್ತದೆ. ಅಂತಹ ಸಮಯದಲ್ಲಿ ಡಿಶ್ ಟಿವಿ ಸಿಗ್ನಲ್ ಸಮಸ್ಯೆ ಉಂಟಾಗಿ ಇದ್ದಕ್ಕಿದ್ದಂತೆ ಟಿವಿ ನಿಲ್ಲುತ್ತದೆ. ಇದರಿಂದ ಟಿವಿಯಲ್ಲಿ ಬರುತಿದ್ದ ನಿಮ್ಮ ನೆಚ್ಚಿನ ಸಿನಿಮಾ, ಸಿರಿಯಲ್, ಕಾರ್ಯಕ್ರಮ, ನ್ಯೂಸ್ ಹೀಗೆ ಯಾವುದನ್ನು ಕೂಡ ನೋಡಲು ಆಗುವುದಿಲ್ಲ. ಈ ಸಮಸ್ಯೆಯನ್ನು ನಿಮ್ಮ ಮನೆಯಲ್ಲಿ ನೀವು ಎದುರಿಸುತ್ತಿರಹುದು. ಈ ಸಮಸ್ಯೆಯಿಂದ ಹೇಗೆ ಹೊರಬರುವುದು ಎಂದು ನೋಡುವುದಾದರೆ:
ಸಾಮಾನ್ಯವಾಗಿ ಪ್ರತಿಯೊಬ್ಬರು ತಮ್ಮ ಡಿಶ್ ಆಂಟೆನಾವನ್ನು ಮನೆಯ ಹೊರಗೆ ಅಥವಾ ಟೇರಿಸ್ ಮೇಲೆ ಹಾಕಿಸಿಕೊಂಡಿರುತ್ತಾರೆ. ಆದರೆ ಮಳೆಗಾಲದಲ್ಲಿ ಸಿಗ್ನಲ್ ಸಿಗದೇ ಟಿವಿ ನೋಡಲು ಕಿರಿ, ಕಿರಿ ಉಂಟಾಗುತ್ತದೆ.
ಮೊದಲಿಗೆ ಸಿಗ್ನಲ್ ಮಳೆಯಿಂದ ಹೇಗೆ ಪ್ರಭಾವಿತವಾಗಿವೆ ಎಂಬುದನ್ನು ತಿಳಿಯಬೇಕು. ಏಕೆಂದರೆ ಬಿರುಗಾಳಿ ಮತ್ತು ಮಳೆಯಿಂದಾಗಿ ಸಿಗ್ನಲ್ ದುರ್ಬಲವಾಗುತ್ತವೆ. ಮಳೆ ಮತ್ತು ಬಿರುಗಾಳಿಯಿಂದ ವಿದ್ಯುತ್ಕಾಂತೀಯ ಅಲೆಗಳು ಚದುರಿಹೋಗುತ್ತವೆ. ಹಾಗಾಗಿ ಟಿವಿ ಸಿಗ್ನಲ್ಗಳು ಸರಿಯಾಗಿ ಸಿಗುವುದಿಲ್ಲ. ಹೆಚ್ಚಿನ ಡಿಶ್ ಟಿವಿಗಳು ಕ್ಯೂ-ಬ್ಯಾಂಡ್ ಸಿಗ್ನಲ್ಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಕ್ಯೂ-ಬ್ಯಾಂಡ್ ಸಿಗ್ನಲ್ಗಳು ಕೆ-ಬ್ಯಾಂಡ್ ಸಿಗ್ನಲ್ಗಳಿಗಿಂತ ಕಡಿಮೆ ಇರುತ್ತವೆ. ಅವು ಮಳೆಯಿಂದ ಚದುರಿಹೋಗುತ್ತವೆ. ಆದ್ದರಿಂದ ಹವಾಮಾನದಲ್ಲಿನ ಹಠಾತ್ ಬದಲಾವಣೆಗಳು ಕ್ಯೂ-ಬ್ಯಾಂಡ್ ಸಿಗ್ನಲ್ಗಳು ಸಿಗುವುದಿಲ್ಲ.
ಸಿಗ್ನಲ್ ಅನ್ನು ಸರಿಪಡಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಡಿಶ್ ಆಂಟೆನಾವನ್ನು ಮಳೆ ಬರುವ ಸ್ಥಳದಿಂದ ತೆಗೆದು ನೆರಳಿರುವ ಸ್ಥಳದಲ್ಲಿ ಹಾಕಿಸಿಕೊಳ್ಳುವುದು ಉತ್ತಮ.
ಡಿಶ್ ಪ್ಲೇಟ್ ಅನ್ನು ಮನೆಯ ಗೋಡೆಯ ಮೇಲೆ ಹೊಡೆದಿದ್ದರೆ, ನೀವು ಪ್ಲೇಟ್ ಮುಂದೆ ಫೈಬರ್ಗ್ಲಾಸ್ನ ಪೀಸ್ ಅನ್ನು ಸ್ಥಾಪಿಸಬಹುದು. ಫೈಬರ್ಗ್ಲಾಸ್ ಪ್ಲೇಟ್ ಮೇಲೆ ಅಡ್ಡ ಇರುತ್ತದೆ. ಆಗ ಮಳೆ ನೀರು ಡಿಶ್ ಪ್ಲೇಟ್ ಮೇಲೆ ಬೀಳುವುದಿಲ್ಲ. ಇದರಿಂದ ಸಿಗ್ನಲ್ ಸಿಗುವುದಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.
ನೀವು ಎತ್ತರದ ಪೋಲ್ ಮೇಲೆ ಡಿಶ್ ಫಿಟ್ ಮಾಡಿಸಿದ್ದರೆ, ಭಾರೀ ಮಳೆ, ಗಾಳಿಯಿಂದ ಹಾನಿಗೊಳಗಾಗುತ್ತದೆ. ಅಂತಹ ವೇಳೆ ಅದನ್ನು ಸರಿಪಡಿಸಲು ನೀವು ತಾಂತ್ರಿಕ ತಜ್ಞರನ್ನು ಕರೆಯಬೇಕು. ಹೀಗೆ ಮಳೆಗಾಲದಲ್ಲಿ ಡಿಶ್ ಅನ್ನು ಜಾಗೃತೆ ಮಾಡಿ ಯಾವ ಸ್ಥಳದಲ್ಲಿ ಇದ್ದರೆ ಸರಿಯಾಗುತ್ತದೆ ಎಂದು ಗಮನಿಸಿ, ಅದರ ವ್ಯವಸ್ಥೆ ಮಾಡಿಕೊಂಡರೆ ಸಿಗ್ನಲ್ ಸಮಸ್ಯೆಯಿಂದ ಹೊರ ಬರಬಹುದು.