ಬೆಳೆಯುತ್ತಿರು ನಗರಗಳಲ್ಲಿ ಬೀದಿ ನಾಯಿಗಳ ದಾಳಿ ದಿನ ದಿನ ಹೆಚ್ಚಾಗುತ್ತಿದ್ದು ಅಪಾಯಕಾರಿ ಬೆಳವಣಿಗೆಯು ಆತಂಕಕ್ಕೆ ಎಡೆಮಾಡಿದೆ. ಸಾಕಷ್ಟು ಭಾರಿ ನಾವು ಮಾದ್ಯಮಗಳಲ್ಲಿ ಓದಿರುತ್ತೇವೆ ಬೀದಿ ನಾಯಿಯು ಮನುಷ್ಯರ ಮೇಲೆ ದಾಳಿ ಮಾಡಿದ ಸಂಗತಿಯನ್ನು .ಇಂತಹ ಘಟನೆ ನಡೆದಾಗಲ್ಲೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದನ್ನು ಕಾಣಬಹುದು.
ಇನ್ನು ಪ್ರಾಣಿ ಪ್ರೀಯರು ಯಾವುದೇ ಕಾರಣಕ್ಕೂ ನಾಯಿಗಳನ್ನು ಕೊಲ್ಲದಂತೆ ಮನವಿ ಮಾಡಿಕೊಂಡಿರುವುದನ್ನು ಗಮನಿಸಬಹುದು. ಇಷ್ಟಕ್ಕು ನಾಯಿಗಳು ಯಾಕೆ ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಎನ್ನುವುದರ ಬಗ್ಗೆ ಯೋಚನೆ ಮಾಡಬೇಕಿದೆ.
ಬೆಳೆಯುತ್ತಿರುವ ನಗರದಲ್ಲಿ ಎಲ್ಲೆಡೆಯು ತ್ಯಾಜ್ಯಗಳೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವ ಪ್ರವೃತ್ತಿ ಜನಸಾಮನ್ಯರಲ್ಲಿ ಬೆಳೆದು ಬಿಟ್ಟಿದೆ. ಅದರಲ್ಲೂ ಮಾಂಸಹಾರಿ ತ್ಯಾಜ್ಯಗಳು ಮಾರುಕಟ್ಟೆ ಪರಿಸರದಲ್ಲಿ ಸ್ವಲ್ಪನು ಜವಬ್ದಾರಿತನವಿಲ್ಲದೆ ಎಸೆಯುವುದನ್ನು ಕಾಣುತ್ತೇವೆ. ಕೆಲವೊಮ್ಮೆ ಹೊಟೇಲ್ ಪರಿಸರದಲ್ಲಿಯು ಇಂತಹ ದೃಶ್ಯಗಳು ಸರ್ವೇ ಸಾಮನ್ಯವೆಂಬಂತೆ ಕಾಣುತ್ತದೆ. ಬಹುಶ ಇದು ಒಂದು ಕಾರಣವಾಗಿರಬಹದು.
ಮಾಸಂದ ರುಚಿ ರಕ್ತದ ರುಚಿ ನೋಡಿರುವ ಪ್ರಾಣಿಗಳು ಕೆಲವೊಮ್ಮೆ ದಾಳಿ ಮಾಡಲು ಸಾಧ್ಯವಿರುತ್ತದೆ. ವರದಿಯೊಂದರ ಪ್ರಕಾರ ಬದಲಾದ ಹವಾಮಾನಗಳು ಮನುಷ್ಯರಂತೆ ಪ್ರಾಣಿಗಳ ಮೇಲೂ ಆಗುತ್ತದೆ. ಆದರೆ ಸ್ಪಷ್ಟ ಕಾರಣ ಇನ್ನೂ ನಿಗೂಡವಾಗಿದೆ.
ಕಳೆದ ಕೆಲವೊಂದು ತಿಂಗಳಲ್ಲಿ ದೇಶದ ವಿವಿಧಭಾಗಗಳಲ್ಲಿ ನಾಯಿ ದಾಳಿ ಕುರಿತು ವರದಿಯಾಗಿದೆ.ಜೈಪುರದಲ್ಲಿ ತಾಯಿ ಪಕ್ಕದಲ್ಲಿ ಮಲಗಿದ್ದ ಮಗು ಬೀದಿ ನಾಯಿಗಳ ದಾಳಿಗೆ ಬಲಿ.
ಚಿಕ್ಕಮಗಳೂರು ನಗರದ ಶರೀಫ್ಗಲ್ಲಿಯ ಬಾಲಕಿಯೋರ್ವಳ ಮೇಲೆ ಬೀದಿ ನಾಯಿಗಳ ಹಿಂಡೊಂದು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಮುಖ ಹಾಗೂ ಕೈ, ಕಾಲಿಗೆ ನಾಯಿದಾಳಿಯಿಂದ ಗಾಯಗಳಾ ಗಿದ್ದು, ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತ್ತು.
ಮೈಸೂರುನಲ್ಲಿ ಹಸುವಿನ ಕರುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ನಡೆದಿದೆ. ಆರಂಭದಲ್ಲಿ ಚಿರತೆ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಬೀದಿ ನಾಯಿಗಳ ದಾಳಿ ಎಂಬುದು ಬೆಳಕಿಗೆ ಬಂದಿದೆ.
ಲಕ್ನೋದ 14 ವರ್ಷದ ಬಾಲಕ ಪ್ರಣವ್ ರೈ ಮೇಲೆ 6-7 ಬೀದಿ ನಾಯಿಗಳ ಗುಂಪು ಲಕ್ನೋದ ಬಹುಮಹಡಿ ಕಟ್ಟಡದ ಕಾಂಪೌಂಡ್ನಲ್ಲಿ ದಾಳಿ ಮಾಡಿದೆ.
ಹೊಳೆಹೊನ್ನೂರುನ ಭದ್ರಾವತಿ ತಾಲೂಕು ದೊಣಬಘಟ್ಟ (ದಡಮಘಟ್ಟ) ಗ್ರಾಮದಲ್ಲಿ ನಾಯಿಗಳ ಹಿಂಡು ದಾಳಿಗೆ 4 ವರ್ಷದ ಮಗು ಸೈಯದ್ ಮದನಿ ಸಾವನ್ನಪ್ಪಿದ ಹೃದಯ ವಿಧ್ರಾವಕ ಘಟನೆ ನಡೆದಿದೆ.
ಅಯೋಧ್ಯಾ ನವೇಂಬರ್ 21ರಂದು ಬೀದಿ ನಾಯಿಗಳ ಗುಂಪೊAದು ಮಾನವ ದೇಹದಿಂದ ಕಣ್ಣುಗಳನ್ನು ಕಿತ್ತುಹಾಕಿದ ಆಘಾತಕಾರಿ ಘಟನೆ ಅಯೋಧ್ಯೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ
ಶ್ರೀನಗರದ ದಲ್ಗೇಟ್ ಪ್ರದೇಶದಲ್ಲಿ ಬೀದಿ ನಾಯಿಗಳ ದಾಳಿಗೆ 19 ಪ್ರವಾಸಿಗರು ಸೇರಿ 39 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶ್ರೀನಗರದ ಶ್ರೀಮಹಾರಾಜ ಹರಿಸಿಂಗ್ (ಎಸ್ಎಂಎಚ್ಎಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಕಣ್ಣೂರಿನಲ್ಲಿ ಬೀದಿನಾಯಿಗಳ ದಾಳಿಯಿಂದ ಮಗು ಸಾವನ್ನಪ್ಪಿದೆ. ಇದರ ಬೆನ್ನಲ್ಲೇ ಬೀದಿ ನಾಯಿಗಳಿಗೆ ದಯಾಮರಣ ನೀಡಲು ಅನುಮತಿ ನೀಡುವಂತೆ ಸ್ಥಳೀಯ ಪಂಚಾಯಿತಿ ಆಡಳಿತ/ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.
ನಾಯಿಗಳ ಈ ದುಷ್ಟವರ್ತನೆಗೆ ಎನೂ ಕಾರಣವಿರಬಹದು ಎಂದು ಕೊಂಚ ಮಟ್ಟಿಗೆ ಅರ್ಥ ಮಾಡುವ ಪ್ರಯತ್ನ ಮಾಡಬೇಕಾಗಿದೆ. ಎಕೆಂದರೆ ಪ್ರಕೃತಿಯ ಮೊದಲ ಸೃಷ್ಟಿಯೇ ಪ್ರಾಣಿ ಪಕ್ಷಿಗಳು. ಈ ಭೂಮಿ ಮೇಲೆ ಬದುಕುವ ಹಕ್ಕು, ಅಧಿಕಾರ ನಮ್ಮಗಿಂತಲೂ ಹೆಚ್ಚು ಈ ಜೀವ ಸಂಕುಲದು. ದೇಶದಲ್ಲಿ ಅಲ್ಲಲ್ಲಿ ಅನೀಮಲ್ ಕೇರ್ ಸೆಂಟರ್ ಗಳಿವೆ. ಶೆಲ್ಟರ್ ಗಳು ಕೂಡ ಇವೆ. ಆದ್ದರಿಂದ ನಾಯಿಂದ ಸಮಸ್ಯೆ ಒಳಾಗಾಗುವವರು ಈ ತರದ ಪರ್ಯಾಯ ವ್ಯವಸ್ಥೆಗಳನ್ನು ಪ್ರಾಣಿಗಳಿಗೆ ನೀಡಬಹದು .