ತಿಂಗಳಿಗೆ ಸರಿಯಾಗಿ ಪೀರಿಯಡ್ಸ್ ಆಗಿಲ್ಲ ಅಂದ್ರೆ ಎಷ್ಟೋ ಜನ ಹೆದರುಕೊಳ್ಳುತ್ತಾರೆ. ಆದರೆ ಅದರ ಅಗತ್ಯವಿಲ್ಲ. ಯಾಕೆಂದರೆ ಪೀರಿಯಡ್ಸ್ ತಪ್ಪೋದಕ್ಕೆ ಸಾಕಷ್ಟು ಕಾರಣಗಳಿವೆ, ಅದರಿಂದ ಅನಿಯಮಿತ ಮುಟ್ಟಿನ ಸಮಸ್ಯೆ ಕಾಡುತ್ತದೆ. ಕೆಲವೊಮ್ಮೆ ನಮ್ಮ ಜೀವನ ಶೈಲಿಯ ಬದಲಾವಣೆಯಿಂದಲೂ ಈ ಸಮಸ್ಯೆ ಕಾಡಬಹುದು.
ನಿಮಗೂ ತಿಂಗಳಿಗೆ ಸರಿಯಾಗಿ ಪಿರಿಯಡ್ಸ್ ಆಗಲ್ವಾ? ಹಾಗಿದ್ರೆ ಕಾರಣ ಇವುಗಳೂ ಇರಬಹುದು ನೋಡಿ..
ಒತ್ತಡ: ಅಧಿಕ ಒತ್ತಡ ಮಾಡಿಕೊಳ್ಳುವುದರಿಂದಲೂ ಪಿರಿಯಡ್ಸ್ ನಲ್ಲಿ ಸಮಸ್ಯೆಯಾಗುತ್ತದೆ.
ತೂಕ ಹೆಚ್ಚಳ: ದೇಹದ ತೂಕ ಹೆಚ್ಚಾಗುತ್ತಿದ್ದಂತೆ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗಾಗಿ ತೂಕ ಇಳಿಸೋಕೆ ಪ್ರಯತ್ನಿಸಿ.
ಥೈರಾಯ್ಡ್: ತುಂಬಾ ಕಡಿಮೆ ಅಥವಾ ತುಂಬಾ ಹೆಚ್ಚು ಥೈರಾಯ್ಡ್ ಹಾರ್ಮೋನ್ ಇರುವುದರಿಂದಲೂ ಪಿರಿಯಡ್ಸ್ ತಡವಾಗುತ್ತೆ.
ದಿನಚರಿ: ನಿಮ್ಮ ದಿನಚರಿಯಲ್ಲಿ ಬದಲಾವಣೆಯಾದರೆ, ಅಂದರೆ ಬೆಳಗ್ಗೆ ಮಲಗೋದು, ರಾತ್ರಿ ಇಡೀ ಕೆಲಸ ಮಾಡೋದು ಹೀಗೆ ಮಾಡಿದರೆ ಪಿರಿಯಡ್ಸ್ ಕೂಡ ವ್ಯತ್ಯಾಸವಾಗುತ್ತೆ.
ಸ್ತನಪಾನ: ನೀವು ಈಗಷ್ಟೆ ಬಾಣಂತನದ ದಿನಗಳಲ್ಲಿ ಅಥವಾ ಬಾಣಂತನ ಮುಗಿಸಿದ್ದರೆ ಮಗುವಿಗೆ ಸ್ತನಪಾನ ಮಾಡುವಾಗ ಕಡಿಮೆ ಬ್ಲೀಡ್ ಆಗೋದು, ಅನಿಯಮಿತ ಪಿರಿಯಡ್ಸ್ ಸಮಸ್ಯೆ ಕಾಡುತ್ತದೆ.