ಕೇಂದ್ರ ಹಣಕಾಸು ಇಲಾಖೆ ಘೋಷಣೆ ಮಾಡಿರುವ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ ಈಗ ಅಂಚೆ ಕಚೇರಿ ಅಷ್ಟೇ ಅಲ್ಲದೆ 12 ಸರ್ಕಾರಿ ಬ್ಯಾಂಕುಗಳ ಜೊತೆಗೆ 4 ಖಾಸಗಿ ಬ್ಯಾಂಕುಗಳಲ್ಲೂ ಲಭ್ಯವಿದೆ.
ಕೇಂದ್ರ ಸರ್ಕಾರ ಮಹಿಳೆಯರಿಗೆಂದು ಹೊಸದಾಗಿ ಈ ವರ್ಷ ರೂಪಿಸಿರುವ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ 2023 ಯೋಜನೆಯನ್ನು ಈಗ ವಿವಿಧ ಬ್ಯಾಂಕುಗಳಲ್ಲೂ ಇದನ್ನು ಜಾರಿಗೊಳಿಸಲಾಗಿದೆ.
ಫೆಬ್ರುವರಿಯ ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಅವರು ಈ ಸೇವಿಂಗ್ ಸ್ಕೀಮ್ ಅನ್ನು ಘೋಷಿಸಿದ್ದರು. ಆದರೆ ಮೊದಲು ಇದು ಅಂಚೆ ಕಚೇರಿಗಳಲ್ಲಿ ಮಾತ್ರವೇ ಲಭ್ಯ ಇತ್ತು. ಈಗ 16 ಬ್ಯಾಂಕುಗಳಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಪಡೆಯಬಹುದಾಗಿದೆ. ಇದರಲ್ಲಿ 4 ಖಾಸಗಿ ಬ್ಯಾಂಕು, 12 ಸರ್ಕಾರಿ ಸ್ವಾಮ್ಯದ ಬ್ಯಾಂಕಗಳಿವೆ.
ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್ ಅನ್ನು ಒದಗಿಸಲು ಎಲ್ಲಾ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ಅಧಿಕಾರ ಕೊಡಲಾಗಿದೆ ಎಂದು ಗೆಜೆಟ್ ನೋಟಿಫಿಕೇಶನ್ನಲ್ಲಿ ತಿಳಿಸಿದ್ದಾರೆ.
ಮಹಿಳಾ ಸಮ್ಮಾನ್ ಉಳಿತಾಯ ಪತ್ರ 2023 ನೀಡುವ ಬ್ಯಾಂಕುಗಳು:
ಐಸಿಐಸಿಐ ಬ್ಯಾಂಕ್
ಆಕ್ಸಿಸ್ ಬ್ಯಾಂಕ್
ಎಚ್ಡಿಎಫ್ಸಿ ಬ್ಯಾಂಕ್
ಐಡಿಬಿಐ ಬ್ಯಾಂಕ್
ಎಸ್ಬಿಐ
ಬ್ಯಾಂಕ್ ಆಫ್ ಬರೋಡ
ಬ್ಯಾಂಕ್ ಆಫ್ ಇಂಡಿಯಾ
ಬ್ಯಾಂಕ್ ಆಫ್ ಮಹಾರಾಷ್ಟ್ರ
ಕೆನರಾ ಬ್ಯಾಂಕ್
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಇಂಡಿಯನ್ ಬ್ಯಾಂಕ್
ಇಂಡಿಯನ್ ಓವರ್ಸೀಸ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಯುಕೋ ಬ್ಯಾಂಕ್ಮಹಿಳಾ ಸಮ್ಮಾನ್ ಸೇವಿಂಗ್
ಇದು ಮಹಿಳೆಯರ ಹೆಸರಿನಲ್ಲಿ ಆರಂಭಿಸಬಹುದಾದ 2 ವರ್ಷದ ಠೇವಣಿ ಯೋಜನೆಯಗಿದ್ದು, ಬಹುತೇಕ ನಿಶ್ಚಿತ ಠೇವಣಿಯಂತಿರುವ ಈ ಯೋಜನೆಯಲ್ಲಿ ವರ್ಷಕ್ಕೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಮೂರು ತಿಂಗಳಿಗೊಮ್ಮೆ ಬಡ್ಡಿ ಹಣ ಈ ಖಾತೆಗೆ ಜಮೆ ಆಗುತ್ತಾ ಹೋಗುತ್ತದೆ ಎಂದು ಮೂಲಗಳು ತಿಳಿಸುತ್ತವೆ.
1,000 ರೂನಿಂದ 2 ಲಕ್ಷ ರೂವರೆಗೂ ಹಣವನ್ನು ಈ ಯೋಜನೆಗೆ ಹೂಡಿಕೆ ಮಾಡಬಹುದಾಗಿದೆ. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಠೇವಣಿ ಮೊತ್ತದ ಚೆಕ್ ಇವಿಷ್ಟು ಇದ್ದರೆ ಈ ಯೋಜನೆಯನ್ನು ಮಾಡಿಸಬಹುದಾಗಿದೆ.