ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಒಂದೇ ಅಪ್ಲಿಕೇಶನ್ನಲ್ಲಿ ಎರಡರಿಂದ ಮೂರು ಪ್ರತ್ಯೇಕ ವಾಟ್ಸ್ಆ್ಯಪ್ ಖಾತೆಗಳನ್ನು ತೆರೆಯುವ ಆಯ್ಕೆ ನೀಡುತ್ತಿದೆ. ಅಂದರೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಎರಡು ಸಿಮ್ಗಳಿದ್ದರೆ ಈ ಎರಡೂ ಸಿಮ್ಗೆ ಒಂದೇ ಮೊಬೈಲ್ನಲ್ಲಿ ಎರಡು ವಾಟ್ಸ್ಆ್ಯಪ್ ಅಕೌಂಟ್ ತೆರೆಯಬಹುದು ಎಂಬ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ.
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ತನ್ನ ಬಳಕೆದಾರರನ್ನು ಮೆಚ್ಚಿಸುವ ಉದ್ದೇಶದಿಂದ ಹೊಸ ಹೊಸ ಫಿಚರ್ಸ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಮತ್ತೊಂದು ಹೊಸ ಫೀಚರ್ನ್ನು ಹೊತ್ತು ತಂದಿದೆ.
ವಾಟ್ಸ್ಆ್ಯಪ್ ಇನ್ಮುಂದೆ Apple (iPhone), (Android) ಬಳಕೆದಾರರಿಗೆ ಬಹು-ಸಾಧನ ಬೆಂಬಲವನ್ನು ನೀಡುತ್ತದೆ ಎಂದು ವರದಿ ನೀಡಿದ್ದು, ಒಂದೇ ಸಾಧನದಲ್ಲಿ ಬಹು ಖಾತೆಗಳನ್ನು ಪ್ರವೇಶಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಈ ಕಾರ್ಯವು WABetaInfo ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆ ಇದೆಯಂತೆ.
ಬೀಟಾ ಆವೃತ್ತಿ 2.23.13.5 ನೊಂದಿಗೆ Android ಮೊಬೈಲ್ಗಳಲ್ಲಿ ಅಭಿವೃದ್ಧಿ ಹಂತದಲ್ಲಿರುವಂತೆ ತೋರುತ್ತಿದೆ. ಸದ್ಯಕ್ಕೆ, ಈ ಬಹು-ಖಾತೆ ವೈಶಿಷ್ಟ್ಯವು ವಾಟ್ಸ್ಆ್ಯಪ್ ಬ್ಯುಸಿನೆಸ್ ಬಳಕೆದಾರರ ಮೇಲೆ ಕೇಂದ್ರೀಕೃತವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೂ ಬಳಸಲು ಲಭ್ಯವಾಗುತ್ತದೆ ಎಂದು ವರದಿ ಹೇಳುತ್ತದೆ. ಈ ಫೀಚರ್ ಮೂಲಕ ಒಂದೇ ಸಾಧನದಲ್ಲಿ ಲಭ್ಯವಿರುವ ಬಹು ಖಾತೆಗಳನ್ನು ಇನ್ಮುಂದೆ ವಾಟ್ಸ್ಆ್ಯಪ್ ನಲ್ಲಿ ಬಳಸ್ಬಹುದು. ಈ ಫೀಚರ್ ಬಗ್ಗೆ WABetaInfo ಸ್ಕ್ರೀನ್ಶಾಟ್ನಲ್ಲಿ ವಿವರಣೆಯನ್ನು ನೀಡಿದೆ. ಅದೇ ರೀತಿ ನೀವು ಬಯಸುವ ಯಾವುದೇ ವಾಟ್ಸ್ಆ್ಯಪ್ ಖಾತೆಗೆ ನೀವು ಸುಲಭವಾಗಿ ಬದಲಾಯಿಸಬಹುದು ಎನ್ನುವುದು ಈಗ ಬಂದಿರುವ ಹೊಸ ಫೀಚರ್ ಆಗಿದೆ.
ವಿವಿಧ ವಾಟ್ಸ್ಆ್ಯಪ್ ಖಾತೆಗಳಲ್ಲಿ ವೈಯಕ್ತಿಕ ಚಾಟ್ಗಳು, ಕೆಲಸಕ್ಕೆ ಸಂಬಂಧಿಸಿದ ಚಾಟ್ಗಳು ಮತ್ತು ಇತರ ಕೆಲಸಗಳನ್ನು ಮಾಡಬೇಕಾಗಿರುವವರಿಗೆ ಈ ವೈಶಿಷ್ಟ್ಯವು ಬಹಳಷ್ಟು ಉಪಯುಕ್ತವಾಗಿದೆ. ಆದ್ದರಿಂದ ವಾಟ್ಸ್ಆ್ಯಪ್ ಬಳಕೆದಾರರಿಗೆ ಇನ್ನು ಮುಂದಿನ ದಿನಗಳಲ್ಲಿ ಇನ್ನೊಂದು ಮೊಬೈಲ್ ಅಗತ್ಯವಿಲ್ಲ. ವಿವಿಧ ಖಾತೆಗಳನ್ನು ಒಂದೇ ಫೋನ್ನಲ್ಲಿ ಉಪಯೋಗಿಸಬಹುದು. ಒಂದು ಫೋನ್ ಸಂಖ್ಯೆಯು ಇನ್ನೊಂದಕ್ಕೆ ಅಡ್ಡಿಯಾಗುವುದಿಲ್ಲ.ಈ ವೈಶಿಷ್ಟ್ಯವು ಇನ್ನೂ ಪರೀಕ್ಷಾ ಹಂತದಲ್ಲಿದೆ ಎಂದು WABetaInfo ತಿಳಿಸಿದೆ.
ಹಾಗಾದರೆ ಎಷ್ಟು ಫೋನ್ ಸಂಖ್ಯೆಗಳನ್ನು ಸೇರಿಸಬಹುದು? ಎಷ್ಟು ಖಾತೆಗಳನ್ನು ಲಾಗ್ ಇನ್ ಮಾಡಬಹುದು? ಇದು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನೂ ಕಂಪನಿ ಯಾವುದೇ ಬಹಿರಂಗ ಮಾಹಿತಿ ನೀಡಿಲ್ಲ, ಅದು ಬರುವವರೆಗೆ ಕಾಯಬೇಕಾಗಿದೆ.