ಪ್ರಸಿದ್ಧ ಅಮರನಾಥ ಯಾತ್ರೆಯು ಜುಲೈ 1ರಿಂದ ಆರಂಭವಾಗಲಿದ್ದು, ಆಗಸ್ಟ್ 31 ರವರೆಗೆ ಮುಂದುವರಿಯಲಿದೆ. 62 ದಿನಗಳ ಕಾಲ ನಡೆಯುವ ಈ ಪವಿತ್ರ ಅಮರನಾಥ ಯಾತ್ರೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ವಿಜಯ್ ಕುಮಾರ್ ಬಿಧುರಿ ತಿಳಿಸಿದ್ದಾರೆ.
ನಾವು ತ್ಯಾಜ್ಯ ವಿಲೇವಾರಿಗೆ ಎಲ್ಲಾ ಪ್ರಮುಖ ಕ್ಯಾಂಪ್ಗಳಲ್ಲಿ ಅಂತರ್ಗತ ವ್ಯವಸ್ಥೆಯನ್ನು ಮಾಡಿದ್ದೇವೆ. ನಾವು ಹೆಚ್ಚಿನ ಮಾರ್ಗಗಳಲ್ಲಿ ನಾವು ಸಿಸಿಟಿವಿ ಅಳವಡಿಸುತ್ತಿದ್ದೇವೆ. ನಾವು ಶಿಬಿರದ ಸಾಮಥ್ರ್ಯವನ್ನು ಹೆಚ್ಚಿಸಿದ್ದೇವೆ ಮತ್ತು ಈ ಬಾರಿ ನಾವು 75,000 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ವಿವಿಧ ಸ್ಥಳಗಳಲ್ಲಿ ಅವಕಾಶ ಕಲ್ಪಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪ್ರವಾಸಕ್ಕೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಭರದ ಸಿದ್ಧತೆಯಲ್ಲಿ ತೊಡಗಿದ್ದು, ನೋಂದಣಿ ಪ್ರಕ್ರಿಯೆಯು ಕಳೆದ ಏಪ್ರಿಲ್ 17 ರಂದು ಪ್ರಾರಂಭವಾಗಿತ್ತು. ಅಮರನಾಥ ಯಾತ್ರೆಯು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಲ್ಟಾಲ್ ಎಂಬ ಎರಡು ಮಾರ್ಗಗಳಿಂದ ಪ್ರಾರಂಭವಾಗುತ್ತದೆ. ಅಮರನಾಥಕ್ಕೆ ಪ್ರಯಾಣಕ್ಕೆ ದಕ್ಷಿಣ ಕಾಶ್ಮೀರದ ಅನಂತನಾಗ್ನಲ್ಲಿರುವ ಪಹಲ್ಗಾಮ್ ಮೂಲಕ 48 ಕಿಮೀ ದೂರವಿದೆ. ಕೇಂದ್ರ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಬಾಲ್ಟಾಲ್ ಮೂಲಕ 14 ಕಿಮೀ ಕಡಿದಾದ ಮಾರ್ಗವಿದೆ. ಎರಡೂ ಮಾರ್ಗಗಳಿಂದ ಏಕಕಾಲಕ್ಕೆ ಯಾತ್ರೆ ಆರಂಭವಾಗಲಿದೆ
ಅಮರನಾಥ ಯಾತ್ರೆಗೆ ಕೇಂದ್ರದಿಂದ ಸಕಲ ಸಿದ್ದತೆ:
- ಅಮರನಾಥ ಯಾತ್ರೆ ವೇಳೆ ಜಮ್ಮು ಮತ್ತು ಕಾಶ್ಮೀರದ ಕರ್ತವ್ಯ ನಿರತ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ.
- ಶ್ರೀ ಅಮರನಾಥ ದೇಗುಲ ಮಂಡಳಿಯು ಭಕ್ತರಿಗೆ ಬೆಳಿಗ್ಗೆ ಮತ್ತು ಸಂಜೆಯ ಪ್ರಾರ್ಥನೆಯಲ್ಲಿ ಆನ್ಲೈನ್ ಮೂಲಕ ಭಾಗವಹಿಸಲು ನೇರ ಪ್ರಸಾರ ಮಾಡಲಿದೆ.
- ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.
- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಮರನಾಥ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿ, ಯಾತ್ರಾರ್ಥಿಗಳಿಗೆ ಆರಾಮದಾಯಕ ತೀರ್ಥಯಾತ್ರೆ ಮಾಡಲು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದ್ದಾರೆ.
- ಕಳೆದ ವರ್ಷದ ಮ್ಯಾನ್ಯುವಲ್ ಪ್ರಕ್ರಿಯೆಗೆ ಇತ್ತು ಈ ಬಾರಿ ಅದರ ಬದಲಾಗಿ ಪ್ರಯಾಣಿಕರಿಗೆ ಆಧಾರ್ ಗುರುತಿನ ಆಧಾರಿತ ಫಾರ್ಮ್ ಜನರೇಷನ್ ವ್ಯವಸ್ಥೆಯನ್ನು ರೂಪಿಸಲಾಗಿದೆ.
- ಪ್ರವಾಸಕ್ಕೆ ಹೋಗಲು ಉದ್ದೇಶಿಸಿರುವ ಎಲ್ಲಾ ಪ್ರಯಾಣಿಕರು ಭಾರತದಾದ್ಯಂತ ಮಾನ್ಯತೆ ಪಡೆದ ವೈದ್ಯರಿಂದ ಆರೋಗ್ಯ ಪ್ರಮಾಣಪತ್ರಗಳನ್ನು ಪಡೆದಿರುವುದು ಕಡ್ಡಾಯವಾಗಿದೆ.
- ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆಗಾಗಿ 2,500 ಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳನ್ನು ಸಿದ್ಧಪಡಿಸುವ ಯೋಜನೆ ಹಾಕಲಾಗಿದೆ.
- ಪಂಜಾಬ್ ನ್ಯಾಷನಲ್ ಬ್ಯಾಂಕ್ನ 316 ಶಾಖೆಗಳು, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನ 90 ಶಾಖೆಗಳು, ಯೆಸ್ ಬ್ಯಾಂಕ್ನ 37 ಶಾಖೆಗಳು ಮತ್ತು ಎಸ್ಬಿಐನ 99 ಶಾಖೆಗಳು ಸೇರಿದಂತೆ ದೇಶಾದ್ಯಂತ 542 ಬ್ಯಾಂಕ್ ಶಾಖೆಗಳಲ್ಲಿ ಅಮರನಾಥ ಯಾತ್ರೆಗೆ ಆಫ್ಲೈನ್ ನೋಂದಣಿಯನ್ನು ಮಾಡಬಹುದು.