ಹೌದು ಇದು ರೀಲ್ಸ್ ಯುಗ ಕಾರಣ ಇಂದಿನ ಯುವಜನತೆ ತಮ್ಮ ದಿನದ ೨೫% ಭಾಗವನ್ನು ರೀಲ್ಸ್ ನೋಡುವುದರಲ್ಲೇ ಕಳೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಮತ್ತು ರೀಲ್ಸ್ ನೋಡುತ್ತ ಕುಳಿತರೆ ಸಮಯ ದಾಟಿದ್ದೆ ತಿಳಿಯುವುದಿಲ್ಲ.
ಇದಕ್ಕೆ ವಯಸ್ಸಿನ ಪರಿಧಿಯು ಇಲ್ಲ ಚಿಕ್ಕ ವಯಸ್ಸಿನವರಿಂದ ಪ್ರಾರಂಭಿಸಿ ಮುದಕರ ವರೆಗೆ ಎಲ್ಲರೂ ಇದರ ದಾಸರೆ.
ಭಾರತದಂತಹ ಯುವ ಜನಾಂಗವನ್ನು ಹೆಚ್ಚಾಗಿ ಹೊಂದಿರುವ ದೇಶದಲ್ಲಿ ಇದು ಮಾರಕ ಪರಿಣಾಮವನ್ನು ಬೀರುತ್ತಿದೆ ಎಂದರೆ ತಪ್ಪಾಗಲಾರದು.
ಇಂದಿನ ದಿನಮಾನಗಳಲ್ಲಿ ರೀಲ್ಸ್ ಜನರ ಮೇಲೆ ಎಷ್ಟು ಪರಿಣಾಮವಾಗಿದೆ ಎಂದರೆ ದಿನ ಬೆಳಗಾಗುದರಲ್ಲೇ ಹೊಸ ಸ್ಟಾರಗಳ ಅದ್ಬುವವಾಗುತ್ತಿದೆ. ಈ ಸ್ಟಾರ್ಗಳ ಕಾಲಾವಧಿ ಹೊಸ ಟ್ರೇಂಡ ಶೂರುವಾಗುವರೆಗೆ ಮಾತ್ರ. ಈ ಟ್ರೇಂಡನ ಹಿಂದೆ ಬಿದ್ದು ಎಷ್ಟೋ ಜನರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಎನೋ ಒಂದು ಸಣ್ಣ ವಿಷಯವನ್ನು ತೆಗೆದುಕೊಂಡು ಅದಕ್ಕೆ ತಮ್ಮ ಅಭಿನಯವನ್ನು ಸೇರಿಸಿ ೧ ನಿಮಿಷ ಅಥವಾ ೩೦ ಸೆಕೆಂಡ್ ಗಳಕಾಲ ನೃತ್ಯಮಾಡಿದರೆ ಮುಗಿತು ನಾಳೆಯಿಂದಲೇ ಆತ ಹೊಸ ಹಿರೋ ಆಗಿಬಿಡುತ್ತಾನೆ. ಅವನ್ನು ದೊಡ್ಡ ಹೆಸರು ಮಾಡಿದ ಕಲಾವಿದರು ಸಹ ಅನುಕರಣೆ ಮಾಡಲು ಪ್ರಾರಂಭಿಸಿ ಬಿಡುತ್ತಾರೆ. ಇದಕ್ಕೆ ನಿಜವಾದ ಕಲೆ ಬೇಕೆಂಬ ಅವಶ್ಯಕತೆಯು ಇಲ್ಲ ಎನೋ ಒಂದು ಮಾಡಿದರಾಯಿತು ಜನ ನಿಮ್ಮ ಸಕಾರಾತ್ಮಕವಾಗಿಯೋ ಅಥವಾ ನಕಾರಾತ್ಮಕವಾಗಿಯೋ ಪ್ರಸಿದ್ಧ ಮಾಡಿಬಿಡುತ್ತಾರೆ ಇನ್ನು ಕೆಲವು ಜನ ಇದನ್ನೇ ತಮ್ಮ ಕಸಬನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಇದರಲ್ಲಿ ವಿಕ್ಷಣೆ ಮತ್ತು ಸಬಸ್ಕ್ರೈಬ ಮಾಡಿದವರ ಅಂಕಿ ಅಂಶಗಳ ಮೇಲೆ ಇನಸ್ಟಾಗ್ರಾಂ ಮತ್ತು ಯೂಟ್ಯೂಬ್ ನಲ್ಲಿ ಹಣವನ್ನು ಸಹ ಗಳಿಸುತ್ತಿದ್ದಾರೆ. ಅಷ್ಟಕ್ಕೂ ಈ ರಿಲ್ಸ ಎಂದರೇನು ಅದನ್ನು ತಿಳಿಯುವುದು ಅಗತ್ಯವಾಗಿದೆ.
ಆದರೆ ಮೊದಲು, ಇನ್ಸ್ಟಾಗ್ರಾಮ್ ರೀಲ್ಸ್ ಎಂದರೇನು?
ಇನ್ಸ್ಟಾಗ್ರಾಮ್ ರೀಲ್ಗಳು ವಿಕಸನಗೊಂಡಿವೆ. ಅವು ಈಗ ಮೊದಲಿಗಿಂತ ಹೆಚ್ಚು ಸಂಪಾದನೆ ಸಾಧನಗಳಿಂದ ತುಂಬಿವೆ. ಸ್ಟೋರಿಗಳಿಗಿಂತ ಭಿನ್ನವಾಗಿ, ರೀಲ್ಸ್ 24 ಗಂಟೆಗಳ ನಂತರ ಕಣ್ಮರೆಯಾಗುವುದಿಲ್ಲ ಮತ್ತು ಮತ್ತು ನೀವು ಅವುಗಳನ್ನು ಅಳಿಸುವವರೆಗೆ ಇನ್ಸ್ಟಾಗ್ರಾಮ್ನಲ್ಲಿ ಇರುತ್ತವೆ. ರೀಲ್ ಗಳು 90 ಸೆಕೆಂಡುಗಳವರೆಗಿನ ಸಂಪೂರ್ಣ ವೀಡಿಯೊಗಳಾಗಿವೆ. ಇದು ಈಗ ಇದರಲ್ಲಿ ಎಡಿಟಿಂಗ್ ಉಪಕರಣಗಳು ಮತ್ತು ಆಡಿಯೊ ಟ್ರ್ಯಾಕ್ ಗಳನ್ನು ಮತ್ತು ಟ್ರೆಂಡಿಂಗ್ ಧ್ವನಿ ಮತ್ತು ಧ್ವನಿ ತುಣುಕುಗಳನ್ನು ಹೊಂದಿದೆ. ಶೀರ್ಷಿಕೆಗಳು, ಸ್ಟಿಕ್ಕರ್ ಗಳು ಮತ್ತು ಹಿನ್ನೆಲೆಗಳನ್ನು ಸೇರಿಸಲು ರೀಲ್ ಗಳು ನಿಮಗೆ ಅನುಮತಿಸುತ್ತವೆ; ಅನೇಕ ವೀಡಿಯೊ ತುಣುಕುಗಳನ್ನು ಅಪ್ಲೋಡ್ ಮಾಡಿ; ಫಿಲ್ಟರ್ಗಳನ್ನು ಬಳಸಿ; ಮತ್ತು ಹೆಚ್ಚು ಆಕರ್ಷಣೀಯ ಆಗುತ್ತದೆ.
ಇನ್ಸ್ಟಾಗ್ರಾಮ್ ಕಿರಿಯ ಬಳಕೆದಾರರನ್ನು ಹೊಂದಿದೆ. ಹೆಚ್ಚಿನವರು 18- 35 ವರ್ಷ ವಯಸ್ಸಿನವರಾಗಿದ್ದರೆ, ಈ ವಯಸ್ಸಿನ ಯುವಕ ಯುವತಿಯರ ಮನಸ್ಸು ಸಾಮಾನ್ಯವಾಗಿ ಮರ್ಕಟದಂತೆ ವರ್ತಿಸುತ್ತಿರುತ್ತದೆ.
ಕಾಲಹರಣಕ್ಕೆ ಇದಕ್ಕಿಂತ ಉತ್ತಮವಾದ ಸಾಧನ ಮತ್ತೊಂದಿಲ್ಲ. ಮತ್ತು ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಲುಬಹುದು. ಈ ರಿಲ್ಸಗಳ ಮುಖಾಂತರ ಅನೇಕ ಜನರು ನೋಡುಗರಿಗೆ ಉತ್ತಮವಾದ ಜ್ಞಾನ ಮತ್ತು ಆಸಕ್ತಿದಾಯಕ ವಿಷಯಗಳನ್ನು ಸಹ ತಿಳಿಸುತ್ತಿದ್ದಾರೆ. ಇದರೊಂದಿಗೆ ಮನೋರಂಜನೆ ಮತ್ತು ಜ್ಞಾನ ಎರಡು ಒಂದೇ ಸಮಯಕ್ಕೆ ಸಿಕ್ಕಂತಾಗುತ್ತದೆ.
ರೀಲ್ಸ್ ಮಾಡುವವರು ತುಂಬಾ ಏರಿಳಿತದ ಹಾದಿಯನ್ನು ಕಂಡಿರುತ್ತಾರೆ. ಒಂದು ರಿಲ್ಸ ಹೆಚ್ಚಿನ ವಿವ್ ಮತ್ತು ಲೈಕ್ಸ ಪಡೆದಿರಬಹುದು ಮತ್ತೋಂದಕ್ಕೆ ಬಂದಿರಲಿಕ್ಕಿಲ್ಲ ಹಾಗೆಂದು ಕುಗ್ಗುವುದು ಸರಿಯಲ್ಲ. ಮತ್ತು ಕೆಲವೊಂದು ಬಾರಿ ಅನೇಕ ಜನರು ರೀಲ್ಸ್ ಗಳ ಕೆಳಗೆ ಅವಾಚ್ಯ ಶಬ್ದಗಳು ಮತ್ತು ಇನ್ನು ಅನೇಕ ನಿಂದನಾತ್ಮಕವಾಗಿ ಕಮೇಂಟ್ ಮಾಡಿರುತ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯು ಇಲ್ಲಾ. ನಾವು ರಿಲ್ಸ ಮಾಡುತ್ತಿರುವುದು ನಮ್ಮ ಖುಷಿಗಾಗಿ ಎಂಬ ಅರಿವು ಇರಬೇಕು. ಅದರಂತೆ ನಾವು ರಿಲ್ಸ ಮುಖಾಂತರ ಯಾವ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದೆವೆ ಎಂಬುದು ಸಹ ಅಷ್ಟೇ ಮುಖ್ಯ. ಪ್ರಚಾರ ಅಥವಾ ಹೆಸರು ಮಾಡುವ ಉದ್ದೇಶದಿಂದ ಸಭ್ಯತೆಯ ಎಲ್ಲೇಯನ್ನು ಮೀರುವುದು ಈ ಸಾಮಾನ್ಯವಾಗಿದೆ ಆದರೆ ಅದು ಸರಿಯಲ್ಲ .
ದಿನದ 24 ಗಂಟೆಯಲ್ಲಿ ಮನೋರಂಜನೆ ಅಗತ್ಯವಾಗಿ ಬೇಕು ಆದರೆ ಅದೇ ದಿನ ಕಳೆಯುವ ಸಾಧನವಾಗಬಾರದು. ಆದರೆ ಇಂದಿನ ದಿನಮಾನಗಳಲ್ಲಿ ಬದುಕು ರಿಯಲ್ ಗಿಂತ ರಿಲ್ಸನಂತೆ ಆಗಿದೆ.