ಕಳೆದ ಎರಡು ವರ್ಷಗಳಿಂದ ಲಾಗ್ ಇನ್ ಮಾಡದ ಜಿಮೇಲ್ ಖಾತೆಗಳನ್ನು ಗೂಗಲ್ ಭದ್ರತಾ ದೃಷ್ಟಿಯಿಂದಾಗಿ ಶಾಶ್ವತವಾಗಿ ತೆಗೆದುಹಾಕುವುದಾಗಿ ತಿಳಿಸಿದೆ. ಕನಿಷ್ಠ 2 ವರ್ಷಗಳವರೆಗೆ ಜಿಮೇಲ್ ಖಾತೆಯನ್ನು ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ, ಕಂಪನಿಯು ಅಂತಹ ಖಾತೆಯನ್ನು ಡಿಲೀಟ್ ಮಾಡುತ್ತದೆ.
ಗೂಗಲ್ನ ಈ ಕ್ರಮದಿಂದಾಗಿ ಇದರಲ್ಲಿ ಇರುವ ಇಮೇಲ್ ವಿಳಾಸ, ಜಿಮೇಲ್ ಸಂದೇಶಗಳು, ಕ್ಯಾಲೆಂಡರ್ ಈವೆಂಟ್ಗಳು, ಡ್ರೈವ್, ಡಾಕ್ಸ್ ಮತ್ತು ಇತರ ಫೈಲ್ಗಳುಗೂಗಲ್ ಫೋಟೋಗಳನ್ನು ಬಳಕೆದಾರರಿಗೆ ಕಳೆದುಕೊಳ್ಳುತ್ತಾರೆ. ಹಾಗೆಯೇ ಈ ನೀತಿಯು ವೈಯಕ್ತಿಕ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಸಂಸ್ಥೆಗಳು, ಶಾಲೆಗಳು ಅಥವಾ ವ್ಯವಹಾರಗಳ ಖಾತೆಗಳು ಪರಿಣಾಮ ಬೀರುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ
ಬಳಸದೇ ಹಾಗೇ ಬಿಟ್ಟ ಜಿಮೇಲ್ ಖಾತೆಗಳನ್ನು ಸ್ಪ್ಯಾಮ್ ಹಾಗೂ ಅನ್ಲೈನ್ ವಂಚಕರು ಬಳಸಿಕೊಂಡು ವಂಚನೆ ಮಾಡುವ ಸಾಧ್ಯತೆಗಳಿರುವುದರಿಂದ ಭದ್ರತಾ ದೃಷ್ಟಿಯಿಂದ ಬಳಕೆಯಲ್ಲಿರದ ಖಾತೆಗಳನ್ನು ಡಿಲೀಟ್ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಲಾಗಿದೆ.
ಹೊಸ ನೀತಿಯು ಈ ವರ್ಷದ ಡಿಸೆಂಬರ್ನ ನಂತರ ಜಾರಿಗೆ ಬರುಲಿದ್ದು ಬಳಕೆ ಮಾಡದ ಜಿಮೇಲ್ಗೆ ಲಾಗ್ ಇನ್ ಆಗಿ ತಮ್ಮ ಖಾತೆಯನ್ನು ಉಳಿಸಿಕೊಳ್ಳಲು ಅಲ್ಲಿಯವರೆಗೆ ಅವಕಾಶವಿದೆ. ಹಾಗೆಯೇ ಖಾತೆಯನ್ನು ಡಿಲೀಟ್ ಮಾಡುವ ಮೊದಲು ಇಮೇಲ್ ವಿಳಾಸಕ್ಕೆ ಸೂಚನೆಯನ್ನು ಕಳುಹಿಸಲಾಗುವುದು ಎಂದು ಗೂಗಲ್ ಕಂಪನಿ ತಿಳಿಸಿದೆ.
ಗೂಗಲ್ ಖಾತೆಯನ್ನು ಸಕ್ರಿಯವಾಗಿರಿಸುವುದು ಹೇಗೆ?
*ನಿಮ್ಮ ಗೂಗಲ್ ಖಾತೆಯನ್ನು ಸಕ್ರಿಯವಾಗಿರಿಸಲು ಕನಿಷ್ಟ 24 ತಿಂಗಳಿಗೊಮ್ಮೆ ನಿಮ್ಮ ಖಾತೆಗೆ ಸೈನ್ ಇನ್ ಮಾಡಬೇಕು.
*ಇಮೇಲ್ ಓದುವ ಅಥವಾ ಕಳುಹಿಸುವ ಮೂಲಕ, ಗೂಗಲ್ ಡ್ರೈವ್ ಬಳಸುವ ಮೂಲಕ, ಯೂಟ್ಯೂಬ್ನಲ್ಲಿ ವೀಡಿಯೊಗಳನ್ನು ವೀಕ್ಷಿಸುವ ಮೂಲಕ, ಗೂಗಲ್ ಪ್ಲೇ ಸ್ಟೋರ್ನಲ್ಲಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ, ಗೂಗಲ್ನ್ನು ಹುಡುಕಾಟಕ್ಕೆ ಬಳಸುವ ಮೂಲಕ ಗೂಗಲ್ ಖಾತೆಯನ್ನು ಸಕ್ರಿಯವಾಗಿರಿಸಿ.
*ಇನ್ನು ಬಳಕೆದಾರರು ಸಕ್ರಿಯವೆಂದು ಪರಿಗಣಿಸಲು ಪ್ರತಿ 2 ವರ್ಷಗಳಿಗೊಮ್ಮೆ ಗೂಗಲ್ ಫೋಟೋಗಳಿಗೆ ಸೈನ್ ಇನ್ ಮಾಡಬೇಕಾಗುತ್ತದೆ.