ಬೆಂಗಳೂರು: ಕೇಂದ್ರ ಸರ್ಕಾರ ರೈತರಿಗಾಗಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ಪ್ರಸ್ತಾವನೆಗೆ ಅನುಮೋದನೆ ದೊರಕಿದೆ.
ರೈತರಿಗೆ ರಸಗೊಬ್ಬರದ ಮೇಲೆ ನೀಡುವ ಸಹಾಯಧನಕ್ಕೆ ಅನುಮೋದನೆ ನೀಡಲಾಗಿದೆ. ಖಾರಿಫ್ ಹಂಗಾಮಿನ ಮೊದಲು ರೈತರಿಗೆ ರಸಗೊಬ್ಬರಗಳ ಮೇಲೆ ನೀಡಲಾಗುವ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಅನುಮೋದನೆ ಸಿಕ್ಕಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದರು.
ರೈತರಿಗೆ ಖಾರಿಫ್ ಸೀಸನ್ ನಲ್ಲಿ ಬೆಳೆ ಬೆಳೆಯಲು, ಇಳುವರಿ ಹೆಚ್ಚಿಸಲು ರಸಗೊಬ್ಬರದ ಮೇಲೆ ಅವಲಂಬಿತರಾಗಿರುತ್ತಾರೆ. ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ರೈತರಿಗೆ ಸಬ್ಸಿಡಿ ದೊರೆಯಲಿದ್ದು, ಕೈಗೆಟಕುವ ದರದಲ್ಲಿ ರಸಗೊಬ್ಬರ ಸಿಗಲಿದೆ.
–
ಚಂಡಮಾರುತ ಪೀಡಿತ ಪ್ರದೇಶ ಮ್ಯಾನ್ಮಾರ್ನಲ್ಲಿನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 81 ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಬು ಮಾ ಮತ್ತು ಹತ್ತಿರದ ಖೌಂಗ್ ಡೋಕೆ ಕರ್ ಎಂಬ ರಾಜ್ಯದ ಹಳ್ಳಿಗಳಲ್ಲಿ ಕನಿಷ್ಠ 46 ಜನರು ಮೃತಪಟ್ಟಿದ್ದು, ರಾಖೈನ್ನ ರಾಜಧಾನಿ ಸಿಟ್ವೆಯ ಉತ್ತರದಲ್ಲಿರುವ ರಾಥೆಡಾಂಗ್ ಟೌನ್ಶಿಪ್ನಲ್ಲಿನ ಮಠದಲ್ಲಿ ಕುಸಿದು ಬಿದ್ದು 13 ಜನರು ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಜನರು ಕಾಣೆಯಾಗಿರುವುದರಿಂದ ಸಂಭವಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
–
ಪ್ರಧಾನಿ ನರೇಂದ್ರ ಮೋದಿಯವರು ಮೇ.19 ರಿಂದ ಮೇ.24ರವರೆಗೆ ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ.
ಗ್ರೂಪ್ ಆಫ್ ನೆವೆನ್ ಜಿ-7 ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕ್ವಾಡ್ ಸೇರಿದಂತೆ ಮೂರು ಪ್ರಮುಖ ಬಹುಪಕ್ಷೀಯ ಶೃಂಗಸಭೆಗಳಲ್ಲಿ ಭಾಗಿಯಾಗಲು ಆರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
–
ಬೆಂಗಳೂರು- ಚೆನ್ನೈ ಪ್ರಯಾಣ ಮಾಡ್ವೇಕಾದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡುತ್ತಿದೆ. ಕರ್ನಾಟಕದಲ್ಲಿ ಬಹುನಿರೀಕ್ಷಿತ ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿ ತಿಳಿಸಿದೆ.
ಬರೋಬ್ಬರಿ 262 ಕಿ.ಮೀ. ದೂರದ ನಾಲ್ಕು ಲೇನ್ ಹೆದ್ದಾರಿ 2024 ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಹೈವೇಯಿಂದ ಬೆಂಗಳೂರು-ಹೈವೇ ನಡುವಿನ ಪ್ರಯಾಣದ ಸಮಯವನ್ನು 2.5 ಗಂಟೆಗೆ ಕಡಿತಗೊಳಿಸಲಿದೆ ಎಂದು ಮಾಹಿತಿ ಬಂದಿದೆ.
ಈ ಹೆದ್ದಾರಿ ನಿರ್ಮಾಣ ಹಂತದಲ್ಲಿರುವ ದಕ್ಷಿಣ ಭಾರತದ ಅತಿದೊಡ್ಡ ಯೋಜನೆಯಾಗಿದೆ. 262 ಕಿಲೋಮೀಟರ್ಗಳಲ್ಲಿ 85 ಕಿಮೀ ತಮಿಳುನಾಡಿನಲ್ಲಿ, 71 ಕಿಮೀ ಆಂಧ್ರಪ್ರದೇಶದಲ್ಲಿ ಮತ್ತು 106 ಕಿಮೀ ರಸ್ತೆ ಕರ್ನಾಟಕದಲ್ಲಿ ಹಾದು ಹೋಗುತ್ತದೆ.
ಈ ಮಾರ್ಗವು ಕರ್ನಾಟಕದ ಹೊಸಕೋಟೆ, ಬಂಗಾರಪೇಟೆ, ಆಂಧ್ರಪ್ರದೇಶದ ಪಲಮನೇರ್ ಮತ್ತು ಚಿತ್ತೂರು ಹಾಗೂ ತಮಿಳುನಾಡಿನ ಶ್ರೀಪೆರಂಬದೂರು ಗೆ ಸಂಚರಿಸಲಿದೆ.
ಈ ಹೆದ್ದಾರಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಮಿಸುತ್ತಿರುವ 26 ಹೊಸ ಹಸಿರು ಎಕ್ಸ್ಪ್ರೆಸ್ವೇಗಳಲ್ಲಿ ಒಂದಾಗಿದೆ. ಈ ಯೋಜನೆಯ ಅಂದಾಜು ವೆಚ್ಚ 16,700 ಕೋಟಿ ರೂ. ಆಗಿದೆ.