ಮಧುಮೇಹದ ಜೊತೆಗೆ ಜೀವನ ನಡೆಸುವುದು ಎಂದರೆ ಅನೇಕ ವಿಷಯಗಳನ್ನು ಏಕಕಾಲದಲ್ಲಿ ಮಾಡಿದಂತೆ ಭಾಸವಾಗುತ್ತದೆ. ಇದರಲ್ಲಿ ನಿರಂತರ ಗ್ಲೂಕೋಸ್ ಮಾನಿಟರಿಂಗ್, ಆಹಾರವನ್ನು ಯೋಜಿಸುವುದು ಮತ್ತು ವ್ಯಾಯಾಮದ ದಿನಚರಿಯನ್ನು ನಿರ್ವಹಿಸಬೇಕಾದ ಅಗತ್ಯವಿರುತ್ತದೆ. ಗ್ಲೂಕೋಸ್ ಮಟ್ಟದ ಮೇಲೆ ದೈನಂದಿನ ಚಟುವಟಿಕೆಗಳು ಯಾವ ರೀತಿಯ ಪರಿಣಾಮವನ್ನು ಬೀರಬಹುದು ಎಂಬುದರ ಕಡೆ ಗಮನವಿಡಬೇಕು ಮತ್ತು ಉದ್ವಿಗ್ನತೆಗಳ ಚಕ್ರವು ಭಾರತದಲ್ಲಿನ ಟೈಪ್ 2 ಮಧುಮೇಹ ಹೊಂದಿರುವ ಸುಮಾರು 33% ರಷ್ಟು ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ.
“ದೈನಂದಿನ ಒತ್ತಡಗಳನ್ನು ಸಹಿಸಿಕೊಂಡು ಕಾಳಜಿ ಮತ್ತು ಎಚ್ಚರಿಕೆಯಿಂದ ದೀರ್ಘಕಾಲದ ಆರೋಗ್ಯ ತೊಂದರೆಗಳನ್ನು ನಿರ್ವಹಿಸುವುದು ಅತ್ಯಂತ ಕಷ್ಟಸಾಧ್ಯವಾಗಿರಬಹುದು. ಇದು ಮಾನಸಿಕ ಆಯಾಸ ಮತ್ತು ಒತ್ತಡ, ಹೆಚ್ಚುತ್ತಿರುವ ಹತಾಶೆ, ಒಂಟಿತನ ಮತ್ತು ಅತೀವ ದಣಿವಿಗೆ ಕಾರಣವಾಗಬಹುದು. ಅನುಕ್ರಮದಲ್ಲಿ, ಈ ಭಾವನೆಗಳಿಂದಾಗಿ ಮಧುಮೇಹವನ್ನು ನಿಭಾಯಿಸಲು ಕಷ್ಟವಾಗಬಹುದು. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಕಂಟಿನ್ಯೂಸ್ ಗ್ಲೂಕೋಸ್ ಮಾನಿಟರಿಂಗ್ ಡಿವೈಸ್ ಗಳಂತಹ ಸರಳ ಸಾಧನಗಳೊಂದಿಗೆ ಗ್ಲೂಕೋಸ್ ಮಟ್ಟದ ಮೇಲೆ ಗಮನವಿರಿಸಿಕೊಂಡು ಆರೋಗ್ಯಕರ ಆಹಾರಪದ್ಧತಿಯನ್ನು ಅನುಸರಿಸುವ ಮೂಲಕ ಜನರು ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಬಹುದು ಮತ್ತು ಒಳ್ಳೆಯ ಆರೋಗ್ಯ ಫಲಿತಾಂಶಗಳನ್ನು ಪಡೆಯಬಹುದು, ”ಎನ್ನುತ್ತಾರೆ ಬೆಂಗಳೂರಿನ ಡಯಾಪ್ಲಸ್ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್, ಡಯಾಪ್ಲಸ್ ಕ್ಲಿನಿಕ್ನ ಸಲಹೆಗಾರ ಎಂಡೋಕ್ರೈನಾಲಜಿಸ್ಟ್ ಡಾ.ಪ್ರವೀಣ್ ರಾಮಚಂದ್ರ.
ಎಮರ್ಜಿಂಗ್ ಏಷ್ಯಾ ಅಂಡ್ ಇಂಡಿಯಾ, ಡಯಾಬಿಟಿಸ್ ಕೇರ್, ಅಬಾಟ್ ನ ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥರಾದ ಡಾ.ಪ್ರಶಾಂತ್ ಸುಬ್ರಮಣಿಯನ್ ಹೇಳುತ್ತಾರೆ. “ಚಿಂತೆಗೇಡುಮಾಡುವ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪರಿಹಾರಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲು ಒಂದು ಸಮಗ್ರ ವಿಧಾನವನ್ನು ಕಂಡುಕೊಳ್ಳುವುದು ಪ್ರಮುಖವಾಗಿದೆ. ಕಂಟಿನ್ಯೂಸ್ ಗ್ಲೂಕೋಸ್ ಮಾನಿಟರಿಂಗ್ ಡಿವೈಸ್ ಗಳಂತಹ ತಂತ್ರಜ್ಞಾನ, ಇದು ಅವರ ರಕ್ತದ ಸಕ್ಕರೆಯ ಮಟ್ಟದ ಹೆಚ್ಚಳ ಅಥವಾ ಇಳಿಕೆಗಳ ಬಗ್ಗೆ ಉಪಯುಕ್ತ ನೈಜ-ಸಮಯದ ಮಾಹಿತಿಯನ್ನು ನೀಡುತ್ತದೆ ಮತ್ತು ಆಹಾರ ಪದ್ಧತಿ ಮತ್ತು ವ್ಯಾಯಾಮದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಈ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡಬಲ್ಲದು.”
ಮಧುಮೇಹದೊಂದಿಗೆ ಜೀವಿಸುವ ಸವಾಲುಗಳನ್ನು ನಿವಾರಿಸುವ ಮಾರ್ಗಗಳು:
ಸಮಸ್ಯೆಯನ್ನು ಅಂಗೀಕರಿಸುವುದು: ಯಾವುದೇ ಆರೋಗ್ಯ ಸಂಬಂಧಿತ ಸವಾಲನ್ನು ಪರಿಹರಿಸುವ ಮೊದಲ ಹಂತವೆಂದರೆ ಏನಾದರೂ ಸಮಸ್ಯೆ ಇರಬಹುದು ಎಂಬುದನ್ನು ಒಪ್ಪಿಕೊಳ್ಳುವುದು ಮತ್ತು ಅದನ್ನು ಅಂಗೀಕರಿಸುವುದು. ಆರೋಗ್ಯವನ್ನು ನೋಡಿಕೊಳ್ಳುವಾಗ ಏರಿಳಿತಗಳು ಇರುವುದು ಸಹಜ, ಆದರೆ ನಿರಂತರ ಒತ್ತಡ ಮತ್ತು ಅತಿಯಾದ ಒದ್ದಾಟದ ಭಾವನೆಯು ಮಧುಮೇಹದ ತೊಂದರೆಯ ಸಂಕೇತವಾಗಿರಬಹುದು. ಸರಿಪಡಿಸಿಕೊಳ್ಳಲು, ಸಂಕೇತಗಳು ಮತ್ತು ಮಾದರಿಗಳನ್ನು ಗುರುತಿಸುವ ಮೂಲಕ ಪ್ರಾರಂಭಿಸಿ. ನಿಮಗೆ ಅಗತ್ಯವಿರುವ ಸಹಾಯವೇನೆಂದು ಅರ್ಥೈಸಿಕೊಳ್ಳಲು ನಿಮ್ಮ ಭಾವನೆಗಳು ಮತ್ತು ದೇಹದ ಕಡೆ ಗಮನ ಹರಿಸಿ. ಜೊತೆಗೆ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಮಧುಮೇಹ ಹೊಂದಿರುವ ಜನರು ಖಿನ್ನತೆಯನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಖಿನ್ನತೆಯ ಲಕ್ಷಣಗಳಿರುವುದರ ಕುರಿತು ನಿಮಗೆ ಅನುಮಾನ ಬಂದರೆ, ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.
ಸೂಕ್ತ ಚಿಕಿತ್ಸಾ ಯೋಜನೆಯನ್ನು ಸಿದ್ಧಪಡಿಸುವುದು: ನಿಮ್ಮ ಮಧುಮೇಹ ಮತ್ತು ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿರುವುದು ಸರಿಯಾದ ಆರೈಕೆಯನ್ನು ಪಡೆಯಲು ಬಹಳ ಪ್ರಮುಖವಾಗಿದೆ. ನೀವು ಅಳವಡಿಸಿಕೊಳ್ಳಬೇಕಾದ ಬದಲಾವಣೆಗಳಿಂದಾಗಿ ಆರೋಗ್ಯ ಸ್ಥಿತಿಯನ್ನು ನಿರ್ವಹಿಸುವುದು ಒಂಟಿತನಕ್ಕೆ ಕಾರಣವಾಗಬಹುದು. ನಿಮಗೆ ಹೇಗೆ ಅನಿಸುತ್ತಿದೆ ಮತ್ತು ನಿಮಗೆ ಬೇಕೆನಿಸುವ ಸಹಾಯದ ಕುರಿತು ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಿ. ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಎಲ್ಲದರ ಬಗ್ಗೆ ದೈಹಿಕ ಮತ್ತು ಮಾನಸಿಕ ಸ್ಥಿತಿಗಳೆರಡರ ಕುರಿತು ನಿಮ್ಮ ವೈದ್ಯರೊಂದಿಗೆ ಪ್ರಾಮಾಣಿಕವಾಗಿ ಚರ್ಚಿಸಿ. ಔಷಧಿಗಳು ಮತ್ತು ಬೆಂಬಲ ಗುಂಪುಗಳು ಸೇರಿದಂತೆ ನಿಮ್ಮ ಮಧುಮೇಹವನ್ನು ನಿರ್ವಹಿಸಲು ವೈಯಕ್ತಿಕಗೊಳಿಸಿದ ಯೋಜನೆಯನ್ನು ರೂಪಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ನಿರ್ವಹಣೆಗೂ ಸಹ ತಂತ್ರಜ್ಞಾನವು ಒಂದು ದೊಡ್ಡ ಸಹಾಯವಾಗಿದೆ. ಫ್ರೀಸ್ಟೈಲ್ ಲಿಬ್ರೆ ನಂತಹ ಕಂಟಿನ್ಯೂಸ್ ಗ್ಲೂಕೋಸ್ ಮಾನಿಟರ್ಗಳು (CGM ಗಳು) ನಿಮಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತವೆ ಮತ್ತು ನಿಮ್ಮ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿಮಗೆ ಬಲವನ್ನು ನೀಡುತ್ತವೆ. ಈ ಪ್ರಿಕ್ ಫ್ರೀ ಮತ್ತು ಪೇನ್ಲೆಸ್ ಮಾನಿಟರ್ಗಳು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರಂತರವಾಗಿ ಟ್ರ್ಯಾಕ್ ಮಾಡುವುದರೊಂದಿಗೆ ನಿಮ್ಮ ವೈದ್ಯರಿಗೆ ಸ್ಪಷ್ಟವಾದ ಚಿತ್ರಣವನ್ನು ನೀಡುತ್ತವೆ ಮತ್ತು ನಿಮ್ಮ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಹೊಂದಿಸಲು ಅವರಿಗೆ ಅನುವು ಮಾಡಿಕೊಡುತ್ತವೆ.
ಅಗತ್ಯತೆಗಳ ಮೇಲೆ ಕೇಂದ್ರೀಕರಿಸುವುದು: ಆರೋಗ್ಯವಾಗಿರುವುದರ ಅಡಿಪಾಯವೆಂದರೆ ಸಮತೋಲನವನ್ನು ಕಂಡುಕೊಳ್ಳುವುದು. ಯಾವ ಚಟುವಟಿಕೆಗಳು ಮತ್ತು ಆರೋಗ್ಯ ಗುರಿಗಳು ನಿಮಗೆ ಹೆಚ್ಚು ಮುಖ್ಯವೆಂದು ಖಚಿತಪಡಿಸಿಕೊಳ್ಳಿ. ಇದು ಮಧುಮೇಹದ ನಿರ್ವಹಣೆಯನ್ನು ಸರಾಗಗೊಳಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಲಭವಾಗಿ ನಿರ್ವಹಿಸಲು ಸಹಾಯಕರವಾಗುತ್ತದೆ. ತಂತ್ರಜ್ಞಾನವು ಒಂದು ದೊಡ್ಡ ಬೆಂಬಲವಾಗಬಹುದು! ಟ್ರ್ಯಾಕರ್ಗಳಂತಹ ಪರಿಕರಗಳು ನಿಮ್ಮ ದಿನಚರಿಯಲ್ಲಿ ಸುಲಭವಾಗಿ ಹೊಂದಿಕೊಳ್ಳುವುದರೊಂದಿಗೆ ಹೆಚ್ಚುವರಿ ಶ್ರಮವಿಲ್ಲದೆ ರಕ್ತದ ಸಕ್ಕರೆಯ ಮಟ್ಟಗಳಂತಹ ಪ್ರಮುಖ ಅಂಶಗಳನ್ನು ಮಾನಿಟರ್ ಮಾಡಬಹುದು. ನಿಮ್ಮ ಬಗ್ಗೆ ಕಾಳಜಿ ವಹಿಸಲು ಮರೆಯಬೇಡಿ. ದೈನಂದಿನ ಜೀವನದೊಂದಿಗೆ ದೀರ್ಘಕಾಲದ ಅನಾರೋಗ್ಯವನ್ನು ಸರಿದೂಗಿಸುವುದು ಕಠಿಣಕರ ಮತ್ತು ಅದು ನಿಮ್ಮ ಮಾನಸಿಕತೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು. ನಿಮ್ಮ ರೋಗನಿರ್ಣಯಕ್ಕಿಂತ ಹೆಚ್ಚಿನವು ಬಹಳಷ್ಟಿವೆ ಎಂದು ನಿಮಗೆ ನೆನಪಿಸುವ ವಿಷಯಗಳಾದ ಪ್ರಯಾಣ, ತೋಟಗಾರಿಕೆ, ಪುಸ್ತಕಗಳನ್ನು ಓದುವುದು ಮುಂತಾದ ನಿಮ್ಮ ಮೆಚ್ಚಿನ ವಿಷಯಗಳಿಗೆ ಸಮಯವನ್ನು ಮೀಸಲಿಡಿ . ಹೆಚ್ಚು ಮುಖ್ಯವಾದುದರ ಮೇಲೆ ಕೇಂದ್ರೀಕರಿಸುವ ಮೂಲಕ ಮತ್ತು ಉಳಿದವುಗಳನ್ನು ಮರೆತುಬಿಡುವ ಮೂಲಕ, ನೀವು ಆರೋಗ್ಯಕರ ಮತ್ತು ಸಂತಸಮಯ ಜೀವನವನ್ನು ರೂಪಿಸಿಕೊಳ್ಳಬಹುದು.