ರಾಷ್ಟ್ರೀಯ : ಭಾರತದ ಪ್ರಮುಖ ಎಫ್ಎಂಸಿಜಿ ಕಂಪನಿಗಳಲ್ಲಿ ಒಂದಾಗಿರುವ ಹಾಗೂ ಸುಸ್ಥಿರತೆಯನ್ನು ಸಾಧಿಸುವ ಪ್ರಯತ್ನಗಳ ಪ್ರವರ್ತಕರಾಗಿರುವ ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ (ಹೆಚ್ಸಿಸಿಬಿ) ವೃತ್ತಾಕಾರದ ಹೊಸ ಪ್ಯಾಕೇಜಿಂಗ್ ಆವಿಷ್ಕಾರವನ್ನು ಪರಿಚಯಿಸಿದೆ. ಇತ್ತೀಚೆಗೆ ಪರಿಚಯಿಸಲಾಗಿದ್ದ ಅಫೊರ್ಡೇಬಲ್ ಸ್ಮಾಲ್ ಸ್ಪಾರ್ಕ್ಲಿಂಗ್ ಪ್ಯಾಕೇಜ್ (ಎಎಸ್ಎಸ್ಪಿ) ಅನ್ನು ಪಿಇಟಿ (ಪಾಲಿಥಿಲೀನ್ ಟೆರೆಫ್ತಾಲೇಟ್) ಪ್ಯಾಕೇಜ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದ್ದು, ಅತ್ಯುತ್ತಮವಾದ ಕಾರ್ಬೊನೇಶನ್ ಧಾರಣ ಶಕ್ತಿ ಮತ್ತು ಶೆಲ್ಫ್ ಜೀವಿತಾವಧಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಕನಿಷ್ಠ ಪ್ರಮಾಣದ ಪಿಇಟಿ ಸಾಮಗ್ರಿಯನ್ನು ಬಳಸಿಕೊಂಡು ವಿನ್ಯಾಸಗೊಳಿಸಲಾಗಿದೆ.
ಈ ಹೊಸ ಪ್ಯಾಕೇಜಿಂಗ್ ತಂತ್ರಜ್ಞಾನವು ಪ್ಲಾಸ್ಟಿಕ್ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಜಾಗತಿಕ ಸುಸ್ಥಿರತೆಯ ಗುರಿಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಎಎಸ್ಎಸ್ಪಿ 250 ಎಂಎಲ್ ವಿನ್ಯಾಸವು ಬಹಳ ಕಡಿಮೆ ಪಿಇಟಿ ವಸ್ತುಗಳನ್ನು ಬಳಸಿಕೊಂಡಿದೆ ಮತ್ತು ಸಾಮಾನ್ಯ ಪಿಇಟಿಯಂತೆಯೇ ಅದೇ ಸ್ಟ್ರೀಮ್ನಲ್ಲಿ ಸಂಸ್ಕರಿಸಬಹುದಾದ 100% ಮರುಬಳಕೆ ಮಾಡಬಹುದಾದ ಪ್ಯಾಕೇಜ್ ಅನ್ನು ಹೊಂದಿದೆ. ಈ ಮೂಲಕ ಇಂಗಾಲದ ಹೊರಸೂಸುವಿಕೆಯಲ್ಲಿ ಸರಿಸುಮಾರು 70% ರಷ್ಟು ಕಡಿತಕ್ಕೆ ಕಾರಣವಾಗುತ್ತದೆ. ಹವಾಮಾನ ಬದಲಾವಣೆ ವಿಚಾರದಲ್ಲಿ ಶ್ರಮಿಸುತ್ತಿರುವ ಸೈನ್ಸ್ ಬೇಸ್ಡ್ ಟಾರ್ಗೆಟ್ಸ್ ಇನಿಷಿಯೇಟಿವ್ (ಎಸ್ಬಿಟಿಐ) ಅಡಿಯಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಗುರಿ ಸಾಧನೆಗೆ ಗಣನೀಯ ಪ್ರಮಾಣದ ಕೊಡುಗೆ ನೀಡುತ್ತದೆ. ಈ ಪ್ರಯತ್ನದ ಭಾಗವಾಗಿ, ಪಿಇಟಿ ಬಾಟಲಿಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಹೊಸ ಎಎಸ್ಎಸ್ಪಿ ಬಾಟಲಿಗಳನ್ನು ತಯಾರಿಸಲು ಮರುಬಳಕೆ ಮಾಡಲಾಗುತ್ತದೆ. ಈ ಮೂಲಕ ಸುಸ್ಥಿರತೆಗೆ ಮತ್ತಷ್ಟು ಕೊಡುಗೆ ನೀಡಲಾಗುತ್ತದೆ.
ಒಡಿಶಾದಲ್ಲಿರುವ ಹೆಚ್ಸಿಸಿಬಿಯ ಖುರ್ದಾ ಸ್ಥಾವರದಲ್ಲಿ ಈ ಪರಿಸರ ಸ್ನೇಹಿ ಪ್ಯಾಕೇಜಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಈ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಪ್ಲಾಸ್ಟಿಕ್ಗಳ ಬಳಕೆಯನ್ನು ಕಡಿಮೆ ಮಾಡುವ ಎರಡು ಗುರಿಗಳನ್ನು ಸಾಧಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ ನ ಚೀಫ್ ಪಬ್ಲಿಕ್ ಅಫೇರ್ಸ್ ಕಮ್ಯುನಿಕೇಷನ್ಸ್ ಆಂಡ್ ಸಸ್ಟೆನೇಬಿಲಿಟಿ ಆಫೀಸರ್ ಶ್ರೀ ಹಿಮಾಂಶು ಪ್ರಿಯದರ್ಶಿ, “ದಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ವಿನೂತರ ಆವಿಷ್ಕಾರಗಳನ್ನು ಸಾಧಿಸುವ ಮೂಲಕ ಸಕಾರಾತ್ಮಕ ವ್ಯತ್ಯಾಸ ಉಂಟು ಮಾಡುವುದು ಮತ್ತು ಜಗತ್ತನ್ನು ಆಹ್ಲಾದಕರಗೊಳಿಸುವುದು ನಮ್ಮ ಸುಸ್ಥಿರತೆಯ ನೀತಿಯ ಮೂಲವಾಗಿದೆ. ನಮ್ಮ ಹೊಸ ಅಫೊರ್ಡೇಬಲ್ ಸ್ಮಾಲ್ ಸ್ಪಾರ್ಕ್ಲಿಂಗ್ ಪ್ಯಾಕೇಜ್ (ಎಎಸ್ಎಸ್ಪಿ) ಮೂಲಕ ನಾವು ಹಗುರವಾದ, ವೃತ್ತಾಕಾರದ ಪ್ಯಾಕೇಜಿಂಗ್ನಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವತ್ತ ಕೆಲಸ ಮಾಡುತ್ತಿದ್ದೇವೆ. ಉತ್ತಮವಾದ, ಹಂಚಿಕೊಂಡು ಬಾಳುವ ಈ ಪ್ರಪಂಚವನ್ನು ಸಾಧಿಸುವ ನಮ್ಮ ಪ್ರಯಾಣದಲ್ಲಿನ ಈ ಹೆಜ್ಜೆಯು ಪಿಇಟಿ ಬಳಕೆಯಲ್ಲಿ ಗಮನಾರ್ಹ ಕಡಿತವನ್ನು ಉಂಟು ಮಾಡಲಿದೆ ಮತ್ತು 100% ಮರುಬಳಕೆ ಮಾಡಬಹುದಾದ ಪ್ಯಾಕೇಜಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಪರಿಸರ ವ್ಯವಸ್ಥೆಯಲ್ಲಿ ಧನಾತ್ಮಕ, ಸುಸ್ಥಿರ ಬದಲಾವಣೆಗಳನ್ನು ಉಂಟು ಮಾಡುವ ಕೆಲಸವನ್ನು ಇನ್ನು ಮುಂದೆಯೂ ನಾವು ಮುಂದುವರಿಸಲಿದ್ದೇವೆ” ಎಂದು ಹೇಳಿದರು.
ಕೋಕಾ- ಕೋಲಾ ಕಂಪನಿಯ ‘ವರ್ಲ್ಡ್ ವಿಥೌಟ್ ವೇಸ್ಟ್’ ಉಪಕ್ರಮಕ್ಕೆ ಬದ್ಧವಾಗಿರುವ ಹೆಚ್ಸಿಸಿಬಿ, ಎಎಸ್ಎಸ್ಪಿ 250 ಎಂಎಲ್ ಗಾತ್ರದ ಪ್ಯಾಕ್ ನಲ್ಲಿ 100% ಆರ್ಪಿಇಟಿ (ಮರುಬಳಕೆ ಮಾಡಬಹುದಾದ ಪಾಲಿಥಿಲೀನ್ ಟೆರೆಫ್ತಾಲೇಟ್) ಬಳಕೆಯನ್ನು ಜಾರಿಗೆ ತಂದಿದೆ. ಪಿಇಟಿಯನ್ನು ಬಳಸುವ ನಾನ್-ಎಎಸ್ಎಸ್ಪಿ ಪ್ಯಾಕೇಜಿಂಗ್ ವ್ಯವಸ್ಥೆಗೆ ಹೋಲಿಸಿದೆ ಈ ಹೊಸ ವ್ಯವಸ್ಥೆಯಿಂದ ಗಣನೀಯ ಪ್ರಮಾಣದ 72% ನಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆ ಆಗಲಿದೆ. ಈ ಉಪಕ್ರಮವು ತನ್ನ ಉತ್ಪನ್ನಗಳ ಗುಣಮಟ್ಟ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಹೆಚ್ಚು ಸುಸ್ಥಿರ ಭವಿಷ್ಯವನ್ನು ರಚಿಸುವ ಹೆಚ್ಸಿಸಿಬಿ ಯ ಬದ್ಧತೆಯನ್ನು ಪ್ರದರ್ಶಿಸುತ್ತದೆ.