ಬೆಂಗಳೂರು: ಮೇಲ್ಮಟ್ಟ ಪ್ರೀಮಿಯಮ್ ವರ್ಗದಲ್ಲಿ ಹೊಸ ಯುಗದ ಆರಂಭವಾಗಿ, ಸ್ಕೂಟರ್ಗಳು ಹಾಗೂ ಮೋಟಾರುಸೈಕಲ್ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಇಂದು, ಅಂದರೆ ಫೆಬ್ರವರಿ 14, 2024ರಿಂದ ಆರಂಭಗೊಂಡು, ತನ್ನ ಪ್ರಧಾನ ಮೋಟಾರುಸೈಕಲ್ ಮಾವ್ರಿಕ್ 440ದ ಬುಕಿಂಗ್ಸ್ ತೆರೆಯಲಿದೆ.
ನಿರ್ದಿಷ್ಟ ಹೀರೋ ಮೋಟೋಕಾರ್ಪ್ ಗ್ರಾಹಕ ಔಟ್ಲೆಟ್ನಲ್ಲಿ ಮತ್ತು www.heromotocorp.comಗೆ ಭೇಟಿ ನೀಡುವ ಮೂಲಕ ಡಿಜಿಟಲ್ ರೂಪದಲ್ಲಿ ಗ್ರಾಹಕರು ತಮ್ಮ ಮೋಟಾರುಸೈಕಲ್ಗಳನ್ನು ಬುಕ್ ಮಾಡಿಕೊಳ್ಳಬಹುದು. ಗ್ರಾಹಕರಿಗೆ ಮೋಟಾರುಸೈಕಲ್ನ ಡೆಲಿವರಿಗಳು ಏಪ್ರಿಲ್ ನಂತರದಿಂದ ಆರಂಭವಾಗುತ್ತದೆ.
ವರ್ಷದ ಅತಿನಿರೀಕ್ಢೆಯ ಮೋಟಾರುಸೈಕಲ್ ಮೂರು ವೈವಿಧ್ಯಗಳಲ್ಲಿ ಲಭ್ಯವಿರುತ್ತದೆ-ಬೇಸ್, ಮಿಡ್ ಮತ್ತು ಟಾಪ್. ಕ್ರಮವಾಗಿ, ರೂ. 199,000/- (ಬೇಸ್), ರೂ. 214,000/- (ಮಿಡ್) ಮತ್ತು ರೂ. 224,000/- (ಟಾಪ್)* ಆಕರ್ಷಕ ಬೆಲೆಗಳಲ್ಲಿ ಇವು ದೇಶಾದ್ಯಂತ ಇರುವ ಹೀರೋ ಮೋಟೋಕಾರ್ಪ್ ಡೀಲರ್ಶಿಪ್ಗಳಲ್ಲಿ ಲಭ್ಯವಿರುತ್ತವೆ. ದರಗಳು ಭಾರತದಾದ್ಯಂತದ ಶೋರೂಮ್ ಆಚೆಗಿನ ದರಗಳಾಗಿವೆ
ಸಂಸ್ಥೆಯು, “ಮಾವ್ರಿಕ್ ಕ್ಲಬ್ ಕೊಡುಗೆಗೆ ಸ್ವಾಗತ(‘Welcome to Mavrick Club Offer’)ಉಪಕ್ರಮವನ್ನೂ ಪರಿಚಯಿಸುತ್ತಿದ್ದು, ಇದು ಮಾರ್ಚ್ 15ರೊಳಗೆ ಮ್ಆವ್ರಿಕ್ 440 ಬುಕ್ ಮಾಡುವ ಗ್ರಾಹಕರಿಗೆ ಲಭ್ಯವಿರುತ್ತದೆ. ಗ್ರಾಹಕರಿಗೆ ರೂ.10,000/- ಮೌಲ್ಯದ ಮಾವ್ರಿಕ್ ಕಿಟ್ ಆಫ್ ಆಕ್ಸಸರೀಸ್ ಮತ್ತು ಮರ್ಕಂಡೈಸ್ ದೊರೆಯಲಿದೆ.
ಮಧ್ಯಮ-ತೂಕದ ಮೋಟಾರುಸೈಕಲ್ ವರ್ಗಕ್ಕೆ ಹೀರೋ ಮೋಟೋಕಾರ್ಪ್ನ ವಿನೂತನ ಪ್ರವೇಶವನ್ನು ಪ್ರತಿನಿಧಿಸುವ ಮಾವ್ರಿಕ್ 440, ಆವಿಷ್ಕಾರ ಹಾಗೂ ಅತ್ಯುತ್ಕೃಷ್ಟತೆಗೆ ಸಂಸ್ಥೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಜನವರಿ 23ರಂದು ಜೈಪುರದಲ್ಲಿ ನಡೆದ ಹೀರೋ ವರ್ಲ್ಡ್ 2024ದಲ್ಲಿ ಅತಿದೊಡ್ಡ ನಿರೀಕ್ಷೆಯೊಂದಿಗೆ ಅನಾವರಣಗೊಂಡ ಈ ಕ್ರಿಯಾಶೀಲ ಮೋಟಾರುಸೈಕಲ್, ಸರಿಸಾಟಿಯಿಲ್ಲದ ಕಾರ್ಯಕ್ಷಮತೆ, ಸ್ಟೈಲ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬರುತ್ತದೆ.
ಸಂಚಾರದಟ್ಟಣೆಯಲ್ಲಿ ಕ್ಷಿಪ್ರ ಹಾಗೂ ತ್ವರೆಯಾಗಿರುವ ಆದರೂ ದೀರ್ಘ ಪ್ರಯಾಣಗಳಿಗೆ ಅತ್ಯಂತ ಬಲಿಷ್ಟ ಹಾಗೂ ಆರಾಮದಾಯಕವಾಗಿರುವ ಶಕ್ತಿಶಾಲಿ ಇಂಜಿನ್ ಹೊಂದಿರುವ ಮಾವ್ರಿಕ್ 440, ತನ್ನ ವಿಶಿಷ್ಟವಾದ, ಆಧುನಿಕ ಹಾಗೂ ಯುವ ವಿನ್ಯಾಸ ಮತ್ತು ಎಲ್ಲವೂ-ಲೋಹ ಬಾಡಿಯೊಂದಿಗೆ ಧೀಮಂತ ರಸ್ತೆ ಅಸ್ತಿತ್ವ ಪ್ರದರ್ಶಿಸುವುದರ ಜೊತೆಜೊತೆಗೇ ಪ್ರೇರನಾತ್ಮಕವಾದ ಚಾಲನಾ ಅನುಭವದ ಹೊಸ ಜಗತ್ತನ್ನೇ ತೆರೆದಿಡುತ್ತದೆ.
ಹೀರೋ ಮೋಟೋಕಾರ್ಪ್ನ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್(ಸಿಇಒ) ಶ್ರೀ ನಿರಂಜನ್ ಗುಪ್ತ, “ಗ್ರಾಹಕರು ಅತಿ ಕಾತರದಿಂದ ಕಾಯುತ್ತಿದ್ದ ಮಾವ್ರಿಕ್ 440ಗಾಗಿ ಈಗ ಬುಕಿಂಗ್ಗಳು ತೆರೆದಿರುವುದರೊಂದಿಗೆ ನಮ್ಮ ಪ್ರೀಮಿಯಮ್ ಪಯಣ ಪೂರ್ಣವೇಗದಲ್ಲಿ ಚಲಿಸುತ್ತಿದೆ. ಹಾರ್ಲಿ ಡೇವಿಡ್ಸನ್ X440 ಮತ್ತು ಕರಿಜ್ಮಾ XMRನ ಹಿಂದೆಯೇ ಬರುತ್ತಿರುವ ಮಾವ್ರಿಕ್ 440, ಧೀಮಂತತೆ ಹಾಗೂ ಯುವ ಆಧುನಿಕ ರೋಡ್ಸ್ಟರ್ನ ವಿಶಿಷ್ಠ ಸಂಯೋಜನೆಯಾಗಿದ್ದು, ಪ್ರೀಮಿಯಮ್ನಲ್ಲಿ ಗೆಲ್ಲಬೇಕೆನ್ನುವ ನಮ್ಮ ಪಯಣದ ಈ ಸಂಚಲನೆಯ ಮೇಲೆ ನಿರ್ಮಾಣಗೊಂಡಿದೆ. ನಮ್ಮ ಆಸಕ್ತ ಗ್ರಾಹಕರ ವೈವಿಧ್ಯಮಯ ಇಚ್ಛೆಗಳನ್ನು ಪೂರೈಸಲು ನಾವು ಶ್ರಮಿಸುತ್ತಿರುವಂತಹ ಸಂದರ್ಭದಲ್ಲಿ, ಈ ವಿಸ್ತರಣೆಯು, ಮೋಟಾರುಸೈಕಲ್ ಉತ್ಸಾಹಿಗಳ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸುವ ಅದ್ವಿತೀಯ ಉತ್ಪನ್ನಗಳನ್ನು ಡೆಲಿವರಿ ಮಾಡುವ ನಮ್ಮ ಬದ್ಧತೆಯನ್ನು ಎತ್ತಿಹಿಡಿಯುತ್ತದೆ.”ಎಂದು ಹೇಳಿದರು.
ಮಾವ್ರಿಕ್ 440
ವಿನ್ಯಾಸ
ಮಾವ್ರಿಕ್ 440, ತನ್ನದೇ ರೀತಿಯಲ್ಲಿ ಒಂದು ಸ್ಟೈಲ್ ಐಕಾನ್ ಆಗಿದೆ. ಇದರ ಮೂಲ ನೋಟ, ತೆರೆದುಕೊಂಡಿರುವ ಆರ್ಕಿಟೆಕ್ಚರ್ ಸಿದ್ಧಾಂತದೊಂದಿಗೆ ನಿರ್ಮಾಣಗೊಂಡಿರುವ ಮುಂಬದಿ ಫಾರ್ವರ್ಡ್ ಮಾಸ್ ಕಾರಣದಿಂದಾಗಿ ಇದು ಅತಿದೂರದಿಂದಲೇ ತಕ್ಷಣ ಗುರುತಿಸಬಹುದಾದ ಉತ್ಪನ್ನವಾಗಿದೆ. ಅತಿನಿಖರವಾದ ರೋಡ್ಸ್ಟರ್ ಸೌಂದರ್ಯ ಹಾಗೂ ಬಲಿಷ್ಟ ಸ್ಟೈಲಿಂಗ್ ನಡುವೆ ಸಮತೋಲನ ಕಾಯ್ದುಕೊಂಡಿರುವ ಈ ಮೋಟಾರುಸೈಕಲ್, ವಿಶಿಷ್ಟವಾದ ರಸ್ತೆ ಅಸ್ತಿತ್ವ ಮತ್ತು ಯುವ ಅಪೀಲ್ ಪ್ರದರ್ಶಿಸುತ್ತದೆ. ಹತ್ತಿರದಿಂದ ನೋಡಿದರೆ, ಧೀಮಂತವೆನಿಸುವ ಫ್ಯುಯೆಲ್ ಟ್ಯಾಂಕ್, ಫ್ರಂಟ್ ಪೆಂಡರ್, ಶ್ರೌಡ್ಸ್, ಫ್ಯುಯೆಲ್ ಟ್ಯಾಂಕ್ ಮತ್ತು ಆಮ್ಪ್ ಮುಂತಾದ ಲೋಹದ ಬಾಡಿ ಭಾಗಗಳಂತಹ ಐತಿಹಾಸಿಕ ವಿವರಗಳನ್ನು ನೀವು ಗುರುತಿಸಬಲ್ಲಿರಿ; ಎಲ್ಲಕ್ಕಿಂತ ಮಿಗಿಲಾಗಿ, ಇದರಲ್ಲಿ ಪರಸ್ಪರ ಸಂವಾದದ ಟೆಲಿಮ್ಯಾಟಿಕ್ಸ್ ಸಾಧನಗಳು ಹಾಗೂ ಅಗಲವಾದ ಹ್ಯಾಂಡಲ್ಬಾರ್ಗಳು ಇವೆ. ವಿಶಿಷ್ಟವಾದ ಹಾಗೂ ಗುಣವಿಶೇಷತೆಯುಳ್ಳ ಎಕ್ಸಾಸ್ಟ್ ನೋಟ್ ನಿಮ್ಮ ಸವಾರಿಗೆ ಜೊತೆಯಾಗಿರುತ್ತದೆ. ನಿಮಗಿಂತ ಮೊದಲೇ ರಸ್ತೆಗೆ ದೀಪ ಒದಗಿಸುವ ಈ ಮೋಟಾರುಸೈಕಲ್, ದುಂಡನೆಯ LED ಪ್ರೊಜೆಕ್ಟರ್ ಹೆಡ್ಲೈಟ್ಸ್, ಹಗಲಿನ ರನ್ನಿಂಗ್ ಲೈಟ್ಸ್, ಮತ್ತು ಸ್ಟೈಲ್ ಹಾಗೂ ಸುರಕ್ಷತೆಗಾಗಿ ಬುದ್ಧಿಶಾಲಿಯಾದ ಬೆಳಕನ್ನು ಹೊಂದಿರುವ ಆಲ್- LED ಲೈಟಿಂಗ್ ಸೆಟ್ ಹೊಂದಿದೆ.
ಶಕ್ತಿ ಮತ್ತು ಕಾರ್ಯಕ್ಷಮತೆ
ಶಕ್ತಿಶಾಲಿಯಾದ ಮಾವ್ರಿಕ್ 440ದಲ್ಲಿ, ಎಲೆಕ್ಟ್ರಾನಿಕ್ ಫ್ಯುಯೆಲ್ ಇಂಜೆಕ್ಷನ್ ಇರುವ ಆಯಿಲ್ ಕೂಲರ್ 2V ಸಿಂಗಲ್-ಸಿಲಿಂಡರ್ 440cc ‘TorqX’ ಏರ್ ಕೂಲ್ಡ್ ಇಂಜಿನ್ ಅಳವಡಿಸಲಾಗಿದೆ. ಈ ಉದ್ದ-ಸ್ಟ್ರೋಕ್ನ ಇಂಜಿನ್ 27 bhp @ 6000 rpm ಮತ್ತು 36 Nm @ 4000 rpm ಟಾರ್ಕ್ ಒದಗಿಸುತ್ತದೆ. ಹೈ ಲೋ-ಎಂಡ್ ಟಾರ್ಕ್ಗಾಗಿಯೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ ಪೀಕ್ ಟಾರ್ಕ್ನ 90%ಗಿಂತ ಹೆಚ್ಚಿನ ಟಾರ್ಕ್ಅನ್ನು ಕೇವಲ 2000 rpm ನಿಂದ ಪಡೆದುಕೊಳ್ಳಬಹುದಾದ್ದರಿಂದ, ನಗರ ಸವಾರಿ ಹಾಗೂ ಹೆದ್ದಾರಿ ಪ್ರಯಾಣಗಳಲ್ಲೂ ಅನಾಯಾಸವಾದ ಹಾಗೂ ಒತ್ತಡ ರಹಿತ ಸವಾರಿ ಒದಗಿಸುತ್ತದೆ.
ಕಾರ್ಯಕ್ಷಮತೆಯ ವಿಷಯದಲ್ಲಿ, ಂಆವ್ರಿಕ್ 440 ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್ ಇರುವ 6-ಸ್ಪೀಡ್ ಟ್ರಾನ್ಸ್ಮಿಶನ್, ವಿಪರೀತ ಲೀನ್ ಆಂಗಲ್ಗಳಲ್ಲೂ ಆಧಾರವನ್ನು ಖಾತರಿಪಡಿಸುವ, ವಿಶೇಷವಾಗಿ ರಚಿಸಲಾಗಿರುವ 0°ಸ್ಟೀಲ್ ರೇಡಿಯ ಪ್ಯಾಟರ್ನ್ ಟೈರ್ಗಳನ್ನು ಹೊಂದಿದೆ.
ರಾಜಿಯಿಲ್ಲದ ಆರಾಮ
ಆರಾಮವನ್ನೇ ಗಮನದಲ್ಲಿಟ್ಟುಕೊಂಡು ರಚಿಸಲಾಗಿರುವ ಮಾವ್ರಿಕ್ 440, ನೇರವಾದ ಸವಾರಿ ಸ್ಥಿತಿ, ವಿಶಾಲವಾದ ಸೀಟ್, ಸಾಕಷ್ಟು ಸ್ಥಳಾವಕಾಶ ಇರುವ ಲೆಗ್ರೂಮ್ ಹಾಗೂ ಗರಿಷ್ಟಗೊಳಿಸಲಾಗಿರುವ ಗ್ರಾಬ್ ರೈಲ್ಸ್ಗಳೊಂದಿಗೆ ರೋಡಸ್ಟರ್ನ ದಕ್ಷತೆಯನ್ನು ಹೊಂದಿ ನಿಯಂತ್ರಣ ಮತ್ತು ಚಲನಾ ಸಾಮರ್ಥ್ಯವನ್ನು ವರ್ಧಿಸುತ್ತದೆ. ಹೆಚ್ಚುವರಿಯಾಗಿ, ದಕ್ಷತೆಯಿಂದ ವಿನ್ಯಾಸಗೊಳಿಸಲಾಗಿರುವ ಸವಾರ ಸೀಟ್, ಸಮೃದ್ಧವಾದ 60mm ಫೋಮ್ ಹೊಂದಿ, ಕಾಲಾತೀತವಾದ ಸ್ಟೈಲ್ನೊಂದಿಗೆ ಶಕ್ತಿಶಾಲಿಯಾದ ಕಾರ್ಯಕ್ಷಮತೆಯನ್ನು ಸಂಯೋಜಿಸಿರುವ ಆರಾಮದಾಯಕ ಅನುಭವವನ್ನು ಖಾತರಿಪಡಿಸುತ್ತದೆ.
175mm ಗ್ರೌಂಡ್ ಕ್ಲಿಯರೆನ್ಸ್ ಇರುವ ಮುಂಬದಿ ಹಾಗೂ ಹಿಂಬದಿಯಲ್ಲಿ 17-ಅಂಗುಲ ಶಕ್ತಿಶಾಲಿ ಚಕ್ರಗಳ ಅಳವಡಿಕೆಯಾಗಿರುವ ಮಾವ್ರಿಕ್ 440, ರಸ್ತೆಯನ್ನು ಅಪ್ಪಿಕೊಳ್ಳುವ ಸಾಮರ್ಥ್ಯಗಳಲ್ಲಿ ಅದ್ವಿತೀಯತೆ ಸಾಧಿಸಿ, ವಿಶೇಷವಾಗಿ ನಗರ ಸೆಟ್ಟಿಂಗ್ಗಳಲ್ಲೂ ಕೂಡ ತೊಡಗಿಕೊಳ್ಳುವಂತಹ ಮತ್ತು ಸುಭದ್ರವಾದ ಸವಾರಿಯನ್ನು ಖಾತರಿಪಡಿಸುತ್ತದೆ. ಅಗಲವಾದ ಟೈರ್ಗಳು, ಟ್ರೆಲಿಸ್ ಫ್ರೇಮ್, ಹಾಗೂ 43mm ವ್ಯಾಸದ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಸ್ಥಿರತೆಯನ್ನು ಸಾಧಿಸಿ, ನಿಯಂತ್ರಿತ ಹಾಗೂ ಅನಾಯಾಸವಾದ ಸವಾರಿಗಾಗಿ 7-ಸ್ಟೆಪ್ನ ಟ್ವಿನ್ ಶಾಕ್ಸ್ನೊಂದಿಗೆ ಬರುತ್ತದೆ. ಅಧಿಕ-ಕಾರ್ಯಕ್ಷಮತೆಯುಳ್ಳ ಬ್ರೇಕ್ ಸಿಸ್ಟಮ್, ಸಮರ್ಥವಾದ ವೇಗತಗ್ಗಿಸುವಿಕೆ ಮತ್ತು ಚಿಕ್ಕ ಬ್ರೇಕಿಂಗ್ ದೂರಗಳನ್ನು ತರಿಪಡಿಸುತ್ತದೆ.
ಪರಸ್ಪರ ಸಂವಾದದ ತೆಲಿಮ್ಯಾಟಿಕ್ಸ್ ಗುಣವಿಶೇಷತೆ4ಗಳು
ನೆಗೇಟಿವ್ ಡಿಸ್ಪ್ಲೇ ಇರುವ ಡಿಜಿಟಲ್ ಸ್ಪೀಡೋಮೀಟರ್, ಓದುವುದಕ್ಕೆ ಮಾತ್ರವಲ್ಲದೆ, ಮೆನು ನೋಡುವಿಕೆ ಹಾಗೂ ಕಾರ್ಯಾಚರಣೆ ಪರಿಕಲ್ಪನೆಯ ವಿಷಯಗಳಲ್ಲೂ ನಿಮಗೆ ಹೊಸ ಜಗತ್ತನ್ನೇ ತೆರೆದಿಡುತ್ತದೆ. ಇದು, ಸ್ಮಾರ್ಟ್ ಫೋನ್ ಅಂಶ(ಫೋನ್ ಬ್ಯಾಟರಿ ಸ್ಥಿತಿಗತಿ, ಮಿಸ್ ಕಾಲ್ ಎಚ್ಚರಿಕೆ, ಬ್ಲೂಟೂತ್ ಮೆಸೇಜ್ ಎಚ್ಚರಿಕೆ), ಇನ್ಕಮಿಂಗ್ ಕರೆ ಎಚ್ಚರಿಕೆ, ಟರ್ನ್-ಬೈ ಟರ್ನ್ ಸಂಚಾರ, ಕಡಿಮೆ ಇಂಧನ ಇಂಡಿಕೇಟರ್, RTMi ಡಿಸ್ಪ್ಲೇ, ಡಿಸ್ಟೆನ್ಸ್ ಟು ಎಂಪ್ಟಿ ಮುಂತಾದ ವಿಶೇಷಾಂಶಗಳನ್ನು ಒದಗಿಸುತ್ತದೆ.
ಚುರುಕಾದ ಹಾಗೂ ಸಂಪರ್ಕಗೊಂಡ ಅನುಭವವನ್ನು ನಿರೀಕ್ಷಿಸುತ್ತಿರುವ ಸವಾರರಿಗೆ ಮಾವ್ರಿಕ್ 440, ತನ್ನ ಅತ್ಯಾಧುನಿಕ eSIM-ಆಧಾರಿತ ಸಂಪರ್ಕತೆಯೊಂದಿಗೆ ಹೊಸ ಮಾನದಂಡ ಸ್ಥಾಪಿಸಿದೆ. ಈ ಅಂಶವು ವಾಸ್ತವ ಸಮಯ ಮಾಹಿತಿ, ದೂರದ ಟ್ರ್ಯಾಕಿಂಗ್ ಮತ್ತು ಕನೆಕ್ಟೆಡ್ 2.0 ತಂತ್ರಜ್ಞಾನದ ಮೂಲಕ 35ಕ್ಕಿಂತ ಹೆಚ್ಚಿನ ಕಾರ್ಯಾಚರಣೆಗಳಿಗೆ ಪ್ರವೇಶಾವಕಾಶ ಒದಗಿಸುತ್ತದೆ. eSIM ಕಾರ್ಯಾಚರಣೆಯು, ಅಡಚಣೆಯಿಲ್ಲದ ಸಂಪರ್ಕತೆ ಒದಗಿಸಿ, ಸವಾರಿಯ ಅನುಭವವನ್ನು ಕೇವಲ ಶಕ್ತಿಶಾಲಿಯನ್ನಾಗಿ ಮಾತ್ರವಲ್ಲದೆ ಬುದ್ಧಿವಂತಿಕೆಯಿಂದ ಸಂಪರ್ಕಗೊಂಡಿರುವಂತೆಯೂ ಮಾಡುತ್ತದೆ.
ವರ್ಣ ಸ್ಕೀಮ್
ಮಾವ್ರಿಕ್ 440, ಮೂರೂ ವೈವಿಧ್ಯಗಲಾದ್ಯಂತ ಹರಡಿರುವ ಐದು ವರ್ಣ ಆಯ್ಕೆಗಳಲ್ಲಿ ಲಭ್ಯವಿದ್. ಲಭ್ಯವಿರುವ ಬೇಸ್ ಆವೃತ್ತಿ ಎಂದರೆ ಆರ್ಕ್ಟಿಕ್ ವೈಟ್, ಮಧ್ಯ ವೈವಿಧ್ಯವು, ಸೆಲೆಸ್ಟಿಯಲ್ ಬ್ಲೂ ಹಾಗೂ ಫಿಯರ್ಲೆಸ್ ರೆಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಟಾಪ್ ವೈವಿಧ್ಯವು ಫಾಂಟಮ್ ಬ್ಲ್ಯಾಕ್ ಮತ್ತು ಎನಿಗ್ಮಾ ಬ್ಲ್ಯಾಕ್ ವರ್ಣ ಆಯ್ಕೆಗಳಲ್ಲಿ ಲಭ್ಯವಿದೆ.