ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಭರವಸೆ ನೀಡಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭರವಸೆ ಓದಿ ನನ್ನ ರಕ್ತ ಕುದಿಯುತ್ತಿದೆ. ನಾನೂ ಭಜರಂಗದಳ ಕಾರ್ಯಕರ್ತೆ, ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಹೇಳಿದ್ದಾರೆ.
ಪಿಎಫ್ ಐ ಸಂಘಟನೆಯನ್ನು ದೇಶಭಕ್ತ ಭಜರಂಗದಳಕ್ಕೆ ಹೋಲಿಸಿರುವುದು ಸರಿಯಲ್ಲ. ದೇಶದ ಹಿಂದು ಯುವಜನರಲ್ಲಿ ಜಾಗೃತಿ ಕೆಲಸ ಮಾಡುತ್ತಿರುವ ಭಜರಂಗದಳ ವಿರೋಧಿ ಎನಿಸಿದೆ ಎಂದು ಹೇಳಿದರು.
ಚುನಾವಣೆ ಪ್ರಚಾರ ಸಭೆಗಳಲ್ಲಿ ಭಜರಂಗದಳ ನಿಷೇಧದ ಬಗ್ಗೆ ತಾಕತ್ತಿದ್ದರೆ ಮಾತನಾಡಿ. ಮುಸ್ಲಿಮರ ವೋಟುಗಳಿಂದ ಮಾತ್ರ ಗೆದ್ದು ಬನ್ನಿರಿ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಮುತ್ತಜ್ಜ, ಅಜ್ಜನ ಕಾಲದಲ್ಲಿ ಆರ್ ಎಸ್ ಎಸ್ ನಿಷೇಧಿಸಲಾಯಿತು. ನಂತರ ಏನಾಯಿತು ಎಂಬುದು ದೇಶಕ್ಕೆ ಗೊತ್ತಿದೆ. ಇದು ಆರ್ ಎಸ್ಎಸ್ ನ ಒಂದು ಭಾಗ ಎಂಬುದು ದೇಶಕ್ಕೆ ಗೊತ್ತಿದೆ. ಆರ್ ಎಸ್ಎಸ್ ನ ಒಂದು ಭಾಗ ಬಿಜೆಪಿ, ಮತ್ತೊಂದು ಭಾಗದಲ್ಲಿ ಎಬಿವಿಪಿ, ಭಜರಂಗದಳ, ವನವಾಸಿ ಕಲ್ಯಾಣ ಇನ್ನಿತರ ಸಂಘಟನೆಗಳಿವೆ. ಬಿಜೆಪಿ ಹಿಂದಿನಂತೆ ಸಣ್ಣ ಸಂಘಟನೆಯಲ್ಲ. ವಿಶ್ವದ ಅತಿದೊಡ್ಡ ಪಕ್ಷವಾಗಿದ್ದು, ಎಲ್ಲರೂ ಆಧರಿಸಿ ಗೌರವಿಸುವ ವಿಶ್ವ ನಾಯಕ ನರೇಂದ್ರ ಮೋದಿಯವರು ಇರುವ ಪಕ್ಷವಾಗಿದೆ ಎಂದು ಹೇಳಿದ್ದಾರೆ