ಅಕ್ಟೋಬರ್ 5ರಿಂದ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಈ ವೇಳೆ ಯಾವುದೇ ದೇಶದ ಆಟಗಾರರ ಆಹಾರದ ಮೆನುವಿನಲ್ಲಿ ಗೋ ಮಾಂಸ ಇರುವುದಿಲ್ಲ ಎಂದು ವರದಿ ತಿಳಿಸಿದೆ.
ವಿಶ್ವಕಪ್ ಸಿದ್ದತೆಗಾಗಿ ಇಂದಿನಿಂದ ಹತ್ತು ತಂಡಗಳ ನಡುವೆ ಅಭ್ಯಾಸ ಪಂದ್ಯಗಳು ನಡೆಯಲಿವೆ. ಎಲ್ಲಾ ಆಟಗಾರರ ಊಟದ ಮೆನುವಿನಲ್ಲಿ ಬಟರ್ ಚಿಕನ್, ಮಟನ್ ಕರಿ ಇರಲಿದೆ. ದೈನಂದಿನ ಪ್ರೋಟೀನ್ ಸೇವನೆಗಾಗಿ ಕೋಳಿ, ಕುರಿ, ಮೀನಿನ ಖಾದ್ಯಗಳನ್ನು ಸೇವಿಸಬಹುದಾಗಿದೆ.
ಪಾಕ್ ತಂಡದ ಡಯಟ್ ಚಾರ್ಟ್ ಅನ್ನು ಪಿಟಿಐ ಪಡೆದಿದ್ದು, ಅದರಲ್ಲಿ ಗ್ರಿಲ್ಡ್ ಚಾಪ್ಸ್, ಮಟನ್ ಕರಿ, ವಟರ್ ಚಿಕನ್, ಗ್ರಿಲ್ಡ್ ಫಿಶ್ ಸೇರಿದೆ. ಇನ್ನು ಕಾರ್ಬೋಹೈಡ್ರೇಟ್ ಸೇವನೆಗಾಗಿ ಬಾಸ್ಮತಿ ಅಕ್ಕಿಯ ಅನ್ನ, ಬೊಲೊಗ್ನೀಸ್ ಸಾಸ್ ನ ಸ್ಪಾಗೆಟಿ ಸೇರಿ ಹಲವು ಸಸ್ಯಹಾರಿ ಆಹಾರಗಳು ಇವೆ.
ಪಾಕಿಸ್ತಾನದ ತಂಡ 2 ವಾರಗಳ ಕಾಲ ಹೈದರಾಬಾದ್ ನಲ್ಲಿ ಇರಲಿದ್ದು, ಇದರಿಂದ ಅಲ್ಲಿನ ಪ್ರಸಿದ್ದ ಹೈದರಾಬಾದಿ ಬಿರಿಯಾನಿಯನ್ನು ಕೂಡ ಸೇರಿಸಲಾಗಿದೆ.