ರಾಯಚೂರು: ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ ನಡೆದಿದ್ದ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಈ ಮೊದಲು ಇದು ಮಾನವ ಬಲಿಯ ಪ್ರಕರಣ ಎಂದು ಶಂಕಿಸಲಾಗಿತ್ತು ಆದರೆ ಮಧ್ಯವಯಸ್ಸಿನ ಸಂತ್ರಸ್ತೆ ಯುವ ಕೊಲೆಗಾರರಲ್ಲಿ ಒಬ್ಬನೊಂದಿಗೆ ಸಂಬಂಧ ಹೊಂದಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.
ಬಂಧಿತರನ್ನು ಸಮೀರ್ ಸೊಹೈಲ್ (23) ಮತ್ತು ಮೊಹಮ್ಮದ್ ಕೈಫ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 26 ರಂದು ಮಂಜುಳಾ ಅವರನ್ನು ಕೊಲೆ ಮಾಡಲಾಗಿದ್ದು, ಸುಟ್ಟ ದೇಹವು ಅವರ ಮನೆಯ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧದ ನಂತರ, ಆರೋಪಿಗಳು ಸಂತ್ರಸ್ತೆಯ ನಿವಾಸದಿಂದ 10 ಲಕ್ಷ ರೂ ನಗದು ಮತ್ತು ಚಿನ್ನದ ಆಭರಣಗಳನ್ನು ದೋಚಿ ಕೈಫ್ ಅವರ ಕಾರಿನಲ್ಲಿ ಪರಾರಿಯಾಗಿದ್ದರು.
ಮಂಜುಳಾ ಕೆಲವು ದೈಹಿಕ ಕಾಯಿಲೆಗಳಿಂದ ಬಳಲುತ್ತಿದ್ದರು ಮತ್ತು ಸೊಹೈಲ್ ಅವರ ಸಹಾಯವನ್ನು ಕೋರಿದ್ದರು. ಇದರ ಲಾಭ ಪಡೆದ ಆರೋಪಿಗಳು ಪೂಜೆಯ ನೆಪದಲ್ಲಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದಿದ್ದರು.
ಅವರ ನಿರ್ದೇಶನದಂತೆ, ತನ್ನ ಚಿನ್ನದ ಆಭರಣಗಳನ್ನು ತೆಗೆದುಕೊಂಡಿದ್ದಳು. ನಂತರ ನಗದು ಮತ್ತು ಆಭರಣಗಳ ಮೇಲೆ ಕುಂಕುಮ ಮತ್ತು ಅರಿಶಿನವನ್ನು ಹಚ್ಚಿ ಪ್ರಾರ್ಥಿಸಲು ಹೇಳಿದ್ದಾರೆ.ಮಂಜುಳ ಪ್ರಾರ್ಥನೆಯಲ್ಲಿ ಮಗ್ನಳಾಗಿದ್ದಾಗ, ಇವರಿಬ್ಬರು ಅವಳನ್ನು ಕೊಂದು ಮತ್ತು ನಂತರ ಸಮೀರ್ ದೇಹವನ್ನು ಆಕೆಯ ಮನೆಯ ಬಳಿ ಸುಟ್ಟುಹಾಕಿದನು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿ 7.49 ಲಕ್ಷ ನಗದು, 163 ಗ್ರಾಂ ಚಿನ್ನ, ಕೃತ್ಯಕ್ಕೆ ಬಳಸಿದ ಕಾರು ಮತ್ತು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಆರಂಭದಲ್ಲಿ, ಇದು ಮಾಟಮಂತ್ರಕ್ಕಾಗಿ ನಡೆದ ಕೊಲೆ ಪ್ರಕರಣ ಎಂದು ಶಂಕಿಸಲಾಗಿತ್ತು. ಜೊತೆಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕೂಡಾ ಶಂಕಿಸಲಾಗಿತ್ತು.
ಆದರೆ, ಬ್ಯಾಂಕಿನಿಂದ ಸಾಲವಾಗಿ ಪಡೆದ 10 ಲಕ್ಷ ರೂ. ಮತ್ತು ಬ್ಯಾಂಕಿನಿಂದ ಹಿಂಪಡೆದ ಎಲ್ಲಾ ಹಣಗಳು ಚಿನ್ನದ ಆಭರಣಗಳೊಂದಿಗೆ ಕಾಣೆಯಾಗಿವೆ ಎಂದು ಅವರ ಮಗ ಅನುಮಾನ ವ್ಯಕ್ತಪಡಿಸಿದ್ದಾರೆ. ಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.