ಬೆಂಗಳೂರು : ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ನ ಜಾಗತಿಕ ಸ್ಮಾರ್ಟ್ಫೋನ್ ಪಾಲುದಾರರಾದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್, ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಗೇಮ್ಸ್ ಅಭಿಮಾನಿಗಳನ್ನು ಒಳಗೊಂಡು ಎಲ್ಲಾ ರೀತಿಯ ಜನರಿಗಾಗಿ “ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್” ಎಂಬ ಹೊಸ ಡಿಜಿಟಲ್ ಸಮುದಾಯವನ್ನು ಪ್ರಾರಂಭಿಸಲು ಮತ್ತು ಬೆಳೆಸಲು ಜುಲೈ 31 ರಂದು ಪ್ಯಾರಿಸ್ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಓಸಿ) ಜೊತೆಗೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮವು 2024ರ ಪ್ಯಾರಿಸ್ ಒಲಿಂಪಿಗ್ ಮೀಸಲಾಗಿರುವ ಪ್ಯಾರಿಸ್ನ ಬಹು-ಬಳಕೆಯ ಎಕ್ಸಿಬಿಷನ್ ಸೆಂಟರ್ ನ ಸ್ಪಾಟ್24ನಲ್ಲಿ ನಡೆಯಿತು. ಐಓಸಿಯ ಅಧ್ಯಕ್ಷರಾದ ಥಾಮಸ್ ಬಾಚ್, ಐಓಸಿಯ ಟೆಲಿವಿಷನ್ ಮತ್ತು ಮಾರ್ಕೆಟಿಂಗ್ ಸರ್ವೀಸಸ್ ಎಂಡಿ ಆನ್ನೆ-ಸೋಫಿ ವೋಮರ್ಡ್, ಪ್ಯಾರಾಲಿಂಪಿಕ್ ಸಮಿತಿಯ (ಐಪಿಸಿ) ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ಗ್ಲೋಬಲ್ ಮಾರ್ಕೆಟಿಂಗ್ ಆಫೀಸ್ನ ಅಧ್ಯಕ್ಷ ಮತ್ತು ಮುಖ್ಯಸ್ಥ ವೈಎಚ್ ಲೀ, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ಯುರೋಪ್ ಕಚೇರಿಯ ಅಧ್ಯಕ್ಷ ಇಲ್-ಕ್ಯುಂಗ್ ಸುಂಗ್ ಮತ್ತು ಚಿನ್ನದ ಪದಕ ವಿಜೇತ ಮಾಜಿ ಫ್ರೆಂಚ್ ಹ್ಯಾಂಡ್ಬಾಲ್ ಆಟಗಾರ ಹಾಗೂ ಖ್ಯಾತ ವಿಶುವಲ್ ಆರ್ಟಿಸ್ಟ್ ಲುಕ್ ಅಬಾಲೊ ಮತ್ತು ಪ್ಯಾರಿಸ್ 2024ರ ಒಲಿಂಪಿಕ್ ಮ್ಯೂಸಿಯಂ ಆಯೋಜಿಸಿದ್ದ ಒಲಿಂಪಿಯನ್ ಕಲಾವಿದರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಷ್ಠಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟೀಮ್ ಕೊರಿಯಾದ ಮಾಜಿ ವಾಲಿಬಾಲ್ ಆಟಗಾರ ಯಿಯಾನ್ ಕೌಂಗ್ ಕಿಮ್, ಟೀಮ್ ಜಿಬಿ ಸ್ಕೇಟ್ಬೋರ್ಡರ್ ಆಂಡಿ ಮ್ಯಾಕ್ಡೊನಾಲ್ಡ್, ಆಸ್ಟ್ರೇಲಿಯಾದ ಪ್ಯಾರಾ-ಅಥ್ಲೀಟ್ ಮ್ಯಾಡಿಸನ್ ಡಿ ರೊಜಾರಿಯೊ ಮತ್ತು ಯುಕೆ ಕಂಟೆಂಟ್ ಕ್ರಿಯೇಟರ್ ಹಾಗೂ ದಿ ರಾಪಿಂಗ್ ಸೈನ್ಸ್ ಟೀಚರ್ ಮ್ಯಾಟ್ ಗ್ರೀನ್ ಈ ಯೋಜನೆ ಜಾಗತಿಕ ರಾಯಭಾರಿಗಳಾಗಿರುತ್ತಾರೆ. ಅವರು “ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್” ಯೋಜನೆ ಕುರಿತಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸಕ್ರಿಯವಾಗಿ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.
ಪ್ರಪಂಚದಾದ್ಯಂತ ಇರುವ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಅಭಿಮಾನಿಗಳನ್ನು ಒಲಿಂಪಿಕ್ ಆಂದೋಲನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು, ಒಲಿಂಪಿಕ್ ಅನುಭವಗಳನ್ನು ಹೊಂದಲು “ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್” ಎಂಬ ಯೋಜನೆಯನ್ನು ಸ್ಯಾಮ್ಸಂಗ್ ಮತ್ತು ಐಓಸಿ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಈ ಯೋಜನೆಯು ವಿಶೇಷವಾಗಿ ಯುವ ಪೀಳಿಗೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಹೊಸ ಸಮುದಾಯವನ್ನು “ಒಲಿಂಪಿಕ್ ಮೌಲ್ಯಗಳ ಹುಮಸ್ಸಿನಲ್ಲಿ ಕ್ರಿಯೇಟ್, ಮೂವ್ ಮತ್ತು ಸಾಲ್ವ್” ಎಂಬ ಮೂರು ಕಾರ್ಯಕ್ರಮಗಳ ಮೂಲಕ ಯುವ ಆಸಕ್ತರಿಗೆ ಸಹಾಯ ಮಾಡುವ ಉದ್ದೇಶವನ್ನಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.
“ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್” ಯೋಜನೆಯು ಸಮುದಾಯ-ಆಧಾರಿತ ಮೂರು ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತದೆ. ಅದರಲ್ಲಿ ಒಂದು ಸಾಲ್ವ್ ಚಾಲೆಂಜ್ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಕ್ರೀಡೆ ಮತ್ತು ಒಲಿಂಪಿಸಂ ಅನ್ನು ಸ್ಯಾಮ್ಸಂಗ್ನ ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮದ ಜೊತೆ ಸಂಯೋಜಿಸಲಾಗಿದೆ. ಇದೊಂದು ಯುವ ಜನತೆಯನ್ನು ಕೇಂದ್ರೀಕರಿಸಿಗೊಂಡು ರಚಿಸಲಾಗಿರುವ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯಕ್ರಮವಾಗಿದ್ದು, ಇಲ್ಲಿ ಐಓಸಿಯ ಒಲಿಂಪಿಸಂ365ರ ಆದ್ಯತೆಗಳಿಗೆ ಅನುಗುಣವಾಗಿ ಸಾಮಾಜಿಕ ಸಮಸ್ಯೆಗಳಿಗೆ ಕ್ರೀಡೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ನವೀನ ಪರಿಹಾರಗಳನ್ನು ಕಂಡುಹಿಡಿಯಲು ಯುವಜನತೆಗೆ ಪ್ರೋತ್ಸಾಹ ಮತ್ತು ಬೆಂಬಲ ಒದಗಿಸಲಾಗುತ್ತದೆ. ಎರಡನೇ ಕಾರ್ಯಕ್ರಮವಾದ ಮೂವ್ ಚಾಲೆಂಜ್, ಪ್ರಪಂಚದಾದ್ಯಂತದ ಇರುವ ಗೇಮ್ಸ್ ಅಭಿಮಾನಿಗಳನ್ನು ಸ್ಯಾಮ್ಸಂಗ್ನ ಸ್ಮಾರ್ಟ್ ಮೊಬೈಲ್ ಫೋನ್ ಬಳಸಿಕೊಂಡು ಎದ್ದು ನಡೆಯಲು ಪ್ರೋತ್ಸಾಹಿಸುತ್ತದೆ. ಮೂರನೇ ಕಾರ್ಯಕ್ರಮವಾದ ಕ್ರಿಯೇಟ್ ಚಾಲೆಂಜ್ ನಲ್ಲಿ ಸ್ಯಾಮ್ಸಂಗ್ನ ಸ್ಮಾರ್ಟ್ ಡಿವೈಸ್ ಮತ್ತು ಎಸ್ ಪೆನ್ ಮೂಲಕ ನವೀನ ಡಿಜಿಟಲ್ ಕಲಾವಿದರ ಸಮುದಾಯದಲ್ಲಿ ಸೃಜನಶೀಲತೆಯ ಪಯಣದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಸಲಾಗುತ್ತದೆ.
ಯೋಜನೆ ಉದ್ಘಾಟನೆಯ ಸಮಾರಂಭದಲ್ಲಿ ಸ್ಯಾಮ್ಸಂಗ್ನ ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮದಲ್ಲಿ ಶ್ರೇಷ್ಠ ಸಾಧನೆ ತೋರಿದ ವಿಜೇತರಾದ 10 ತಂಡಗಳನ್ನು “ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್” ಯೋಜನೆಯ ರಾಯಭಾರಿಗಳೆಂದು ಘೋಷಿಸಲಾಯಿತು. ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಗೇಮ್ಸ್ ಪ್ಯಾರಿಸ್ 2024ರ ಉದ್ದಕ್ಕೂ ಈ ರಾಯಭಾರಿಗಳು ಸಾಮಾಜಿಕ ಸಮಸ್ಯೆಗಳು ಪರಿಹರಿಸಲು ತಾವು ಕಂಡುಕೊಂಡ ಪರಿಹಾರೋತ್ಪನಗಳನ್ನು ಪ್ರದರ್ಶಿಸಲಿದ್ದಾರೆ ಮತ್ತು ಪ್ರಪಂಚದಾದ್ಯಂತ ಇರುವ ಒಲಿಂಪಿಕ್ ಅಭಿಮಾನಿಗಳನ್ನು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಜೊತೆಗೆ ಅವರು ಐಓಸಿಯ ಯೋಜನೆಯಾದ ಐಓಸಿ ಯಂಗ್ ಲೀಡರ್ ಕಾರ್ಯಕ್ರಮದ ಜೊತೆ ಸಹಯೋಗ ಮಾಡಿಕೊಂಡು ಸುಸ್ಥಿರ ಅಭಿವೃದ್ಧಿ ಒಳಗೊಂಡಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿದ್ದಾರೆ.
“ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್” ಆರಂಭಿಕ ಕಾರ್ಯಕ್ರಮದಲ್ಲಿ ರಾಯಭಾರಿಗಳು ವಾಸ್ತವ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾದ ಅವರ ಸಾಲ್ವ್ ಫಾರ್ ಟುಮಾರೋ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿದರು. ದೃಷ್ಟಿ ದೋಷಗಳನ್ನು ಗೆಲ್ಲಲು ಜನರಿಗೆ ಸಹಾಯ ಮಾಡುವುದರಿಂದ ಹಿಡಿದು ಕಾರ್ಮಿಕರಿಗೆ ಸುರಕ್ಷತೆ ಒದಗಿಸುವ ಹೊಸ ವಿಧಾನಗಳವರೆಗೆ ವಿವಿಧ ರೀತಿಯ ವಿನೂತನ ಪರಿಹಾರಗಳನ್ನು ಪ್ರಸ್ತುತಪಡಿಸಲಾಯಿತು.
ಈ ಕುರಿತು ಸ್ಯಾಮ್ಸಂಗ್ ಸೌತ್ವೆಸ್ಟ್ ಏಷ್ಯಾದ ಕಾರ್ಪೊರೇಟ್ ಉಪಾಧ್ಯಕ್ಷ ಎಸ್ಪಿ ಚುನ್, “20223 ಸಾಲ್ವ್ ಫಾರ್ ಟುಮಾರೋ ವಿಜೇತರಾದ ಸ್ಪುಟ್ನಿಕ್ ಬ್ರೈನ್ ತಂಡದ ಶಂಕರ್ ಅವರ ಸಾಧನೆಗಳ ಬಗ್ಗೆ ಸ್ಯಾಮ್ಸಂಗ್ ಇಂಡಿಯಾಗೆ ಹೆಮ್ಮೆ ಇದೆ ಮತ್ತು ಕಂಪನಿಯು ಅವರಿಗೆ ಬೆಳವಣಿಗೆ ಮತ್ತು ಶ್ರೇಯಸ್ಸನ್ನು ಹಾರೈಸುತ್ತದೆ. ಅವರು ಪರಿಕಲ್ಪನೆ ಮಾಡಿರುವ ಒತ್ತಡವನ್ನು ನಿವಾರಿಸುವ ಮತ್ತು ಆರೋಗ್ಯ ಸೇವೆಯನ್ನು ಗಣನೀಯವಾಗಿ ಸುಧಾರಿಸುವ ಪರಿಹಾರೋತ್ಪನ್ನವು ಅಗಾಧವಾದ ಸಾಮರ್ಥ್ಯವನ್ನು ಹೊಂದಿರುವುದನ್ನು ನಾವು ಗಮನಿಸಿದ್ದೇವೆ. ಜೊತೆಗೆ ಒಲಂಪಿಕ್ಸ್ ಮೌಲ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಅನುಭವಿಸಲು ಯುವಕರಿಗೆ ಅವಕಾಶವನ್ನು ಒದಗಿಸುವ ‘ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್’ ಯೋಜನೆಯ ಬಗ್ಗೆ ಕೂಡ ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದ್ದಾರೆ.
‘ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್’ ಯೋಜನೆಯಲ್ಲಿ ಜಾಗತಿಕ ರಾಯಭಾರಿಯಾಗಿ ಭಾರತವನ್ನು ಪ್ರತಿನಿಧಿಸುತ್ತಿರುವ ಸ್ಪುಟ್ನಿಕ್ ಬ್ರೈನ್ ತಂಡದ ಶಂಕರ್ ಶ್ರೀನಿವಾಸನ್, “ಸ್ಯಾಮ್ಸಂಗ್ ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮವು ಹೊಸ ಪರಿಹಾರಗಳನ್ನು ಕಂಡುಹಿಡಿಯುವ ಮೂಲಕ ಸಾಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಉತ್ತಮ ಅವಕಾಶವನ್ನು ಒದಗಿಸುತ್ತದೆ” ಎಂದು ಹೇಳಿದರು.
ಶಂಕರ್ ಅವರು ದೇಹಕ್ಕೆ ಯಾವುದೇ ಕಿರಿಕಿರಿ ಉಂಟುಮಾಡದೆಯೇ ಒತ್ತಡ ಕಡಿಮೆ ಮಾಡುವ ವೇರೇಬಲ್ ಡಿವೈಸ್ ಅಂದ್ರೆ ಧರಿಸಬಹುದಾದ ಸಾಧನವನ್ನು ಅಭಿವೃದ್ಧಿಪಡಿಸಿದ್ದರು. ಆ ಮೂಲಕ ಅವರು ಯಾವುದೇ ರಾಸಾಯನಿಕಗಳನ್ನು ಬಳಸದೆಯೇ ಒತ್ತಡ ಮುಕ್ತಗೊಳಿಸುವ ಉತ್ಪನ್ನಗಳ ಜಾಗತಿಕ ಅಗತ್ಯಗಳನ್ನು ಪೂರೈಸಿದ್ದರು. ಅಲ್ಲದೇ ಅವರು ಮುಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸೇವಾಕ್ಷೇತ್ರವನ್ನು ಸುಧಾರಿಸುವ ಹಂಬಲ ಹೊಂದಿದ್ದಾರೆ.
ಮಾತು ಮುಂದುವರಿಸಿದ ಅವರು, ” ಪ್ರತಿಷ್ಠಿತ ಜಾಗತಿಕ ವೇದಿಕೆಯಲ್ಲಿ ನಮ್ಮ ಜಗತ್ತಿನ ಭವಿಷ್ಯವನ್ನು ಉಜ್ವಲಗೊಳಿಸುವ ಪರಿಹಾರೋತ್ಪನ್ನವನ್ನು ಮತ್ತು ವಿಷನ್ ಅನ್ನು ಪ್ರಸ್ತುತ ಪಡಿಸಲು ಮತ್ತು ನನ್ನ ದೇಶ ಭಾರತವನ್ನು ಪ್ರತಿನಿಧಿಸಲು ಸಿಕ್ಕ ಅವಕಾಶಕ್ಕಾಗಿ ಹೆಮ್ಮೆ ಪಡುತ್ತೇನೆ, ನನ್ನ ಮನಸ್ಸು ತುಂಬಿ ಬಂದಿದೆ” ಎಂದು ಹೇಳಿದರು.
ಐಓಸಿ ಅಧ್ಯಕ್ಷರಾದ ಥಾಮಸ್ ಬಾಚ್ ಮಾತನಾಡಿ, “ಸ್ಯಾಮ್ಸಂಗ್ ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮವು ಸಾವಿರಾರು ಯುವಜನತೆಗೆ ಭವಿಷ್ಯದ ನಾಯಕರಾಗಲು ನೀಡಿರುವ ಅವಕಾಶವನ್ನು ಕಂಡು ನಾನು ಅಚ್ಚರಿಗೊಳಗಾಗಿದ್ದೇನೆ” ಎಂದು ಹೇಳಿದರು. ಮಾತು ಮುಂದುವರಿಸಿದ ಅವರು, “ಈ ಪ್ರತಿಭೆಗಳೆಲ್ಲಾ ಮುಂದೆ ನವೋದ್ಯಮಿಗಳಾಗಿ, ಸಂಶೋಧಕರಾಗಿ ರೂಪುಗೊಳ್ಳುತ್ತಾರೆ ಮತ್ತು ಅವರು ನಮ್ಮ ಜಗತ್ತು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. “ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್” ಯೋಜನೆ ಮೂಲಕ ಕ್ರೀಡೆ ಮತ್ತು ತಂತ್ರಜ್ಞಾನ ಬಳಸಿಕೊಂಡು ಹೊಸ ಪರಿಹಾರ ಕಂಡುಹಿಡಿಯುವ ಯುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಬೆಳೆಸಲು ನಾವು ನಮ್ಮ ಜಾಗತಿಕ ಪಾಲುದಾರರಾದ ಸ್ಯಾಮ್ಸಂಗ್ ಜೊತೆ ಕೈಗೂಡಿಸಲು ಸಂತೋಷ ಹೊಂದಿದ್ದೇವೆ” ಎಂದು ಹೇಳಿದರು.
“ಟುಗೆದರ್ ಫಾರ್ ಟುಮಾರೋ, ಎನೇಬಲಿಂಗ್ ಪೀಪಲ್” ಅಭಿಯಾನದ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು, ದಯವಿಟ್ಟು https://olympics.com/togetherfortomorrowಗೆ ಭೇಟಿ ನೀಡಿ.