ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸುಂದರ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಅವರೊಂದಿಗೆ ಸ್ನೇಹ ಬೆಳೆಸಿಕೊಂಡು ನಂತರ ಬ್ಲಾಕ್ ಮೇಲ್ ಮಾಡಿ ವಂಚಿಸುತಿದ್ದ ದುಷ್ಕರ್ಮಿಯೊಬ್ಬನನ್ನು ಪೋಲೀಸರು ಹೆಡೆಮುರಿ ಕಟ್ಟಿದ್ದಾರೆ.
ಆರೋಪಿಯನ್ನು ಅಸ್ಸಾಂ ಮೂಲದ ಫೈಸಲ್ ಎಂದು ಗುರುತಿಸಲಾಗಿದ್ದು ಈತನ ವಿರುದ್ದ ಮಹಿಳೆಯೊಬ್ಬರು ಹೆಚ್ಎಸ್ ಆರ್ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯು ಐಟಿ ಉದ್ಯೋಗಿ ಆಗಿದ್ದು ಜಾಲತಾಣದಲ್ಲಿ ಸುಂದರ ಮಹಿಳೆಯರಿಗೆ ಕಾಳು ಹಾಕುತಿದ್ದ. ಅವರು ಸ್ನೇಹಿತರಾದ ಕೂಡಲೇ ಅವರೊಂದಿಗೆ ಚಾಟ್ ಮಾಡುತಿದ್ದ. ಎಮೋಷನಲ್ ಡೈಲಾಗ್ ಹೊಡೆದು ಸಾಚ ತರ ಪೋಸ್ ಕೊಟ್ಟು, ಹೆಣ್ಣುಮಕ್ಕಳ ಫ್ರೀಡಂ, ಅಂಕಲ್ ಗಳ ವೀಕ್ನೆಸ್ ಬಗ್ಗೆ ಮಾತಾಡಿ ತನಗೆ ಹತ್ತಿರ ಮಾಡಿಕೊಳ್ಳುತ್ತಿದ್ದ.
ನಂತರ ಮೀಟ್ ಆಗೋಣ ಎಂದು ಪುಸಲಾಯಿಸುತಿದ್ದ. ಅವರನ್ನು ತನ್ನ ಫ್ಲಾಟ್ ಗೆ ಕರೆಯುತಿದ್ದ . ಅವರು ಬಂದ ನಂತರ ಅವರೊಂದಿಗೆ ದೈಹಿಕ ಸಂಪರ್ಕ ಕ್ಕೆ ಒತ್ತಾಯಿಸುತಿದ್ದ, ಮೊದಲೇ ಫಿಕ್ಸ್ ಮಾಡಿದ್ದ ರಹಸ್ಯ ಕ್ಯಾಮೆರಾದಲ್ಲಿ ಆ ಕ್ಷಣಗಳನ್ನು ಸೆರೆ ಹಿಡಿಯುತಿದ್ದ. ನಂತರ ಅದನ್ನು ಅವರಿಗೆ ಕಳಿಸಿ ಲಕ್ಷ ಗಟ್ಟಲೆ ಹಣ ನೀಡಲು ಬ್ಲಾಕ್ ಮೇಲ್ ಮಾಡುತಿದ್ದ. ಅವರು ಹಣ ನೀಡದಿದ್ದರೆ ಗಂಡನಿಗೆ ಕಳಿಸುವುದಾಗಿ ಬೆದರಿಸುತಿದ್ದ. ಈತನಿಗೆ ಹೆದರಿ ಮಹಿಳೆಯರು ಲಕ್ಷಾಂತರ ರೂಪಾಯಿ ಹಣ ಕೊಟ್ಟು ಈತನ ಬಾಯಿ ಮುಚ್ಚಿಸುತಿದ್ದರು.
ಇದೇ ರೀತಿ ಮಹಿಳೆಯೊಬ್ಬರ ವೀಡಿಯೋ ಒಟ್ಟುಕೊಂಡು ಚೆನ್ನೈ ಗೆ ಹಣ ತೆಗೆದುಕೊಂಡು ಬರಲೇಬೇಕೆಂದು ತಾಕೀತು ಮಾಡಿದ್ದ. ಹಣ ಕೊಡದಿದ್ರೆ ನಿನ್ನ ಗಂಡನಿಗೆ ವಿಡಿಯೋ ಕಳಿಸೋದಾಗಿ ಬೆದರಿಕೆ ಹಾಕಿದ್ದ. ಆದರೆ ಈ ಬಾರಿ ಈತನ ಗ್ರಹಚಾರ ಕೆಟ್ಟಿತ್ತು. ಮಹಿಳೆಯೊಬ್ಬರು ಧೈರ್ಯ ಪ್ರದರ್ಶಿಸಿ ಈತನ ವಿರುದ್ದ ಹೆಚ್ಎಸ್ಆರ್ ಲೇ ಔಟ್ ಪೋಲೀಸ್ ಠಾಣೆಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು.
ಶುಕ್ರವಾರ ಕಾರ್ಯಾಚರಣೆ ನಡೆಸಿದ ಪೋಲೀಸರು ಚೆನ್ನೈಗೆ ತೆರಳಿ ಈತನ ಕೈಗೆ ಕೋಳ ಹಾಕಿ ಎಳೆದುಕೊಂಡು ಬಂದಿದ್ದಾರೆ. ಈತನು ಇದೇ ರೀತಿ ಸುಲಭದಲ್ಲಿ ಹಣ ಗಳಿಸಲು ಹತ್ತಾರು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಪೋಲೀಸರ ಈತನ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸುತಿದ್ದಾರೆ.