ಮಕ್ಕಳಿಗೆ ಊಟ ಮಾಡಿಸೋದು ಮನೆಯಲ್ಲಿರೋರಿಗೆ ಒಂದು ದೊಡ್ಡ ಟಾಸ್ಕ್ ಆಗಿರುತ್ತದೆ. ಟಿವಿ, ಮೊಬೈಲ್ ಇದ್ದರೆ ಮಾತ್ರ ಊಟ ಮಾಡೋದು ಅನ್ನೋದು ಇತ್ತೀಚೆಗೆ ತುಂಬಾ ಸಹಜವಾಗಿದೆ. ಮಕ್ಕಳು ರುಚಿ ರುಚಿಯಾದ ಊಟ ಮಾಡಲಿ, ಆರೋಗ್ಯವಾಗಿರಲಿ ಅಂತ ನೀವು ಅವರಿಗೆ ಬಲವಂತದಿಂದ ಊಟ ಮಾಡಿಸುತ್ತೀರಿ. ಆದರೆ ಅದು ಆ ಮಕ್ಕಳಿಗೆ ಇಷ್ಟ ಆಗೋದಿಲ್ಲ ಅಲ್ವಾ?
ಹಾಗಿದ್ರೆ ಮಕ್ಕಳ ಹೊಟ್ಟೆ ತುಂಬಿಸೋಕೆ ಏನು ಮಾಡಬೇಕು?
• ಮಕ್ಕಳಿಗೆ ಹಸಿವಾಗುವವರೆಗೆ ಏನು ಕೊಡಬೇಡಿ. ಅವರೇ ಕೇಳುವ ಅಭ್ಯಾಸ ರೂಢಿಸಿಕೊಳ್ಳಲಿ.
• ಎಲ್ಲರೂ ಒಟ್ಟಾಗಿ ಊಟ ಮಾಡಿ. ನೀವು ಊಟ ಎಂಜಾಯ್ ಮಾಡಿ ಸೇವಿಸಿ. ಮಕ್ಕಳು ನಿಮ್ಮನ್ನು ಗಮನಿಸುತ್ತಾರೆ.
• ಅಡುಗೆ ಮಾಡುವಾಗ ಮಕ್ಕಳಿಗೂ ಒಂದಿಷ್ಟು ಸಣ್ಣ ಕೆಲಸ ಕೊಡಿ. ಅಡುಗೆ ಬಗ್ಗೆ ಆಸಕ್ತಿ ಮೂಡಿಸಿ.
• ಸರಿಯಾದ ಪ್ರಮಾಣದಲ್ಲಿ ತಿಂಡಿ ಮತ್ತು ಊಟ ಇರಲಿ.
• ಮಕ್ಕಳಿಗೆ ಈ ರುಚಿಗಳು ಹೊಸತಾಗಿರುವುದರಿಂದ ತಾಳ್ಮೆಯಿಂದ ಇರಿ.
• ನೀವು ಮಕ್ಕಳ ಮುಂದೆ ಮೊಬೈಲ್, ಟಿವಿ ನೋಡಬೇಡಿ.
• ನೀವು ಊಟಕ್ಕೆ ಗೌರವ ಕೊಡಿ, ಅದನ್ನು ಮಕ್ಕಳು ಗಮನಿಸಿ ಅನುಸರಿಸುತ್ತಾರೆ.