ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವಾಗ ಅನ್ನೋ ಪ್ರಶ್ನೆ ಇದ್ದೇ ಇದೆ. ಇದರ ಬೆನ್ನಲ್ಲಿಯೇ ಇದೀಗ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೂಟಿಂಗ್ನ ಒಂದಷ್ಟು ಫೋಟೋ ಗಮನ ಸೆಳೆಯುತ್ತಿವೆ.
ರಾಕಿ ಭಾಯ್ ಹೊಸ ಹೊಸ ಬ್ರ್ಯಾಂಡ್ಗಳನ್ನ ಪ್ರಮೋಟ್ ಮಾಡ್ತಾನೇ ಇರ್ತಾರೆ. ಈ ಮೊದಲೇ ಒಪ್ಪಿಕೊಂಡ ಜಾಹೀರಾತಿಗಳನ್ನ ಶೂಟಿಂಗ್ ನಲ್ಲೂ ಭಾಗಿ ಆಗುತ್ತಾರೆ. ಅದೇ ರೀತಿ ಇದೀಗ ಕುಕಿಂಗ್ ಆಯಿಲ್ ಒಂದರ ಜಾಹೀರಾತಿಗೆ ಮತ್ತೊಮ್ಮೆ ಶೂಟಿಂಗ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಅವರ ಕುಕಿಂಗ್ ಆಯಿಲ್ ಜಾಹೀರಾತು ತುಂಬಾ ದಿನಗಳಿಂದಲೂ ಬರ್ತಿದೆ. ಅದೇ ಜಾಹೀರಾತನ್ನ ಹೊಸ ರೀತಿಯಲ್ಲಿಯೇ ಚಿತ್ರೀಕರಿಸಲಾಗಿದೆ. ಈಗಾಗಲೇ ಈ ಜಾಹೀರಾತು ಪ್ರಸಾರ ಕೂಡ ಆಗುತ್ತಿದೆ.
ಜಾಹೀರಾತಿನಲ್ಲಿ ಒಂದ್ ಒಳ್ಳೆ ಕಾನ್ಸೆಪ್ಟ್ ಇದೆ. ಈ ಹಿಂದೆ ಮನೆಯಲ್ಲಿಯೇ ಈ ಜೋಡಿ ಜಾಹೀರಾತು ಮಾಡಿತ್ತು. ಆದರೆ ಈ ಬಾರಿ ಔಟ್ ಡೋರ್ ಶೂಟಿಂಗ್ ಮಾಡಿರೋದು ವಿಶೇಷ ಅನಿಸುತ್ತಿದೆ. ಅದು ಸಾಮಾನ್ಯ ಜನರಿಗೂ ಕನೆಕ್ಟ್ ಆಗೋ ರೀತಿಯಲ್ಲಿಯೇ ಇದೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಅವರ ಈ ಹೊಸ ಜಾಹೀರಾತಿನಲ್ಲಿ ಆಟೋ ಡ್ರೈವರ್ ಕಾನ್ಸೆಪ್ಟ್ ಇದೆ. ಈ ಮೂಲಕ ರಾಕಿ ಭಾಯ್ ಆಟೋ ಡ್ರೈವರ್ ಆಗಿದ್ದಾರೆ. ಹೀಗೆ ಸ್ಯಾಂಡಲ್ವುಡ್ ಈ ಪೇರ್ ಸಾಮಾನ್ಯ ಜನರಿಗೂ ಕನೆಕ್ಟ್ ಆಗುತ್ತಿದ್ದಾರೆ ಅಂತಲೂ ಹೇಳಬಹುದು.
ರಾಕಿ ಭಾಯ್ ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಒಂದಷ್ಟು ಫೋಟೋಗಳನ್ನ ಕೂಡ ತೆಗೆಯಲಾಗಿದೆ. ಆ ಫೋಟೋಗಳನ್ನ ಯಶ್ ಫ್ಯಾನ್ಸ್ ತಮ್ಮ ಪೇಜ್ ಅಲ್ಲಿಯೇ ಶೇರ್ ಮಾಡಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾದ ಸುದ್ದಿ ಇನ್ನು ಏನೂ ಇಲ್ಲ. ಕೆಜಿಎಫ್-3 ಸಿನಿಮಾನೇ ರಾಕಿ ಭಾಯ್ 19ನೇ ಚಿತ್ರ ಆಗುತ್ತದೆ ಅನ್ನುವ ಸುದ್ದಿ ಕೂಡ ಇದೆ. ಆದರೆ ಯಾವುದು ಇನ್ನೂ ಫೈನಲ್ ಆಗಿಲ್ಲ ಅಂತಲೇ ಹೇಳಬಹುದು.