ತುಮಕೂರು: ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಅತಿಯಾದ ಬಡ್ಡಿ ಮತ್ತು ಕಿರುಕುಳವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ತುಮಕೂರು ನಗರದಲ್ಲಿ ಭಾನುವಾರ ರಾತ್ರಿ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಘಾತಕಾರಿ ಸಂಗತಿಯೆಂದರೆ, ಕುಟುಂಬವು ಆರೋಪಿಗೆ 1.5 ಲಕ್ಷ ರೂ ನೀಡ ಬೇಕಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ಕಬಾಬ್ ಮಾರಾಟಗಾರ ಗರೀಬ್ ಸಾಬ್ (36), ಅವರ ಪತ್ನಿ ಸುಮಯ್ಯ (32), ಮಗಳು ಹಾಜಿರಾ (14), ಮಕ್ಕಳಾದ ಮೊಹಮ್ಮದ್ ಶಭಾನ್ (10) ಮತ್ತು ಮೊಹಮ್ಮದ್ ಮುನೀರ್ (8) ಅವರ ಮೃತದೇಹಗಳು ತುಮಕೂರು ನಗರದ ಸದಾಶಿವನಗರ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಗರೀಬ್ ಸಾಬ್ ಅವರು ಎರಡು ಪುಟಗಳ ಡೆತ್ ನೋಟ್ ಬರೆದಿದ್ದು, ಜೋತಗೆ 5.22 ನಿಮಿಷಗಳ ವಿಡಿಯೋವನ್ನು ಆತಹತ್ಯೆ ಮಾಡಿಕೊಳ್ಳುವ ಮೊದಲು ಮಾಡಿದ್ದರು. ಅದೇ ಕಟ್ಟಡದ ನೆಲಮಹಡಿಯಲ್ಲಿ ವಾಸವಾಗಿರುವ ವ್ಯಕ್ತಿ ಮತ್ತು ಆತನ ಕುಟುಂಬದ ಸದಸ್ಯರು ತನ್ನ ಕುಟುಂಬವನ್ನು ಹೇಗೆ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಅತೀರೆಕದ ಹೆಜ್ಜೆ ಇಡಲು ಕಾರಣವಾಯಿತು ಎಂಬುದನ್ನು ಅವರು ವೀಡಿಯೊದಲ್ಲಿ ವಿವರಿಸಿದ್ದಾರೆ.
ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ಪರಮೇಶ್ವರ ಅವರು ತುಮಕೂರು ಜಿಲ್ಲೆಯವರು ಆಗಿರುತ್ತಾರೆ.
ನೆಲಮಹಡಿಯಲ್ಲಿ ನೆಲೆಸಿರುವ ಕಲಂದರ್ ಎಂಬಾತ ರಾಕ್ಷಸನೆಂದು ಸಾವಿಗೆ ಮುನ್ನ ವಿಡಿಯೋದಲ್ಲಿ ಗರೀಬ್ ಸಾಬ್ ಹೇಳಿಕೆ ನೀಡಿದ್ದು, ಪತ್ನಿ ಮತ್ತು ಮಕ್ಕಳಿಗೆ ಚಿತ್ರಹಿಂಸೆ ನೀಡಿ ಥಳಿಸಿದ್ದಾರೆ ಅಲ್ಲದೆ ತೀರ ಅಸಭ್ಯ ಭಾಷೆಗಳಿಂದ ಬಳಸಿ ಮನೆ ಮಂದಿಯನ್ನೆಲ್ಲ ನಿಂದಿಸಿದ್ದಾರೆ.
ನಾನು ಸತ್ತರೆ ಅವರು ನಮ್ಮನ್ನು ಉಳಿಸುವುದಿಲ್ಲ, ಎಂದು ನನ್ನ ಹೆಂಡತಿ ಮತ್ತು ಮಕ್ಕಳು ಭಯಪಡುತ್ತಾರೆ. ನನ್ನೊಂದಿಗೆ ನನ್ನ ಹೆಂಡತಿ ಮತ್ತು ಮಕ್ಕಳು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಈ ಸಂಬಂಧ ತಿಲಕ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.