ಕನ್ನಡದ ರಣವಿಕ್ರಮ ನಟಿ ಅದಾ ಶರ್ಮಾಗೆ ಸಕ್ಕತ್ ಬೇಡಿಕೆ ಶುರುವಾಗಿದೆ. ದ ಕೆರಳ ಸ್ಟೋರಿ ಸಿನಿಮಾದ ಸಕ್ಸಸ್ ನಂತರ ಬಹಳ ಆಫರ್ಸ್ ಅದಾ ಅವರ ಫಾಲಾಗುತ್ತಿದೆ. ಲವ್ ಜಿಹಾದ್ ಸ್ಟೋರಿಯಲ್ಲಿ ನಟಿಸಿ ಗಮನ ಸೆಳೆದ ನಂತರ ಪೊಲೀಸ್ ಆಫೀಸರ್ ಆಗಿ ಅಭಿಮಾನಿಗಳ ಮುಂದೆ ಅದಾ ಶರ್ಮ ಬರುತ್ತಿದ್ದಾರೆ. ದ ಕೇರಳ ಸ್ಟೋರಿ ಸಿನಿಮಾದಿಂದ ಅದಾ ಅವರ ಜೀವನಕ್ಕೆ ಹೊಸ ಮೈಲೇಜ್ ಸಿಕ್ಕಿದಂತಾಗಿದೆ.
ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಡೆ ಕೂಡ ನಟಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಬಾರಿ ಕುಖ್ಯಾತಿ ಪಡೆದಿದ್ದ ಬ್ಲೂವೆಲ್ ಗೇಮ್ ಕುರಿತು ಈ ಸಿನಿಮಾ ರೆಡಿಯಾಗಿದೆ. ಮೇ 11ರಂದು ಅದಾ ಶರ್ಮ ಅವರ ಬರ್ತಡೇ ಹಾಗಾಗಿ ದಿ ಗೆಮ್ ಆಫ್ ಗಿರ್ಗಿಟ್ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಅದಾ ಶರ್ಮ ಅವರು ಪೊಲೀಸ್ ಪಾತ್ರ ಮಾಡಲಿದ್ದಾರೆ. ಈ ಚಿತ್ರಕ್ಕೆ ವಿಶಾಲ್ ಪಾಂಡ್ಯ ನಿರ್ದೇಶನ ಮಾಡಿದ್ದಾರೆ.
ದ ಕೆರಳ ಸ್ಟೋರಿ ಐದು ದಿನಗಳಲ್ಲಿ ಐವತ್ತು ಕೋಟಿ ರೂಪಾಯಿ ಸಂಪಾದಿಸಿ ಫಿಲ್ಮ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. ಈ ಮೂಲಕ ಕೂಡ ರಣವಿಕ್ರಮ ಬೆಡಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.