ಬೆಂಗಳೂರು : ಫ್ಲಿಪ್ಕಾರ್ಟ್ ಅಧೀನದ ಕಂಪನಿ ಆಗಿರುವ ಕ್ಲಿಯರ್ಟ್ರಿಪ್ 2023ರ ಏಪ್ರಿಲ್ ನಲ್ಲಿ ಬಸ್ ವಿಭಾಗವನ್ನು ಪ್ರಾರಂಭಿಸಿದ ಬಳಿಕ ಆ ವಿಭಾಗದಲ್ಲಿ ಶೇ.150ರಷ್ಟು ಅದ್ಭುತ ಅಭಿವೃದ್ಧಿ ಸಾಧಿಸಿರುವ ದಾಖಲೆ ಮಾಡಿದೆ. 2ನೇ ಶ್ರೇಣಿಯ ನಗರಗಳ ಮಧ್ಯದ ಬಸ್ ಪ್ರಯಾಣಕ್ಕೆ ಇರುವ ಬೇಡಿಕೆಯ ಅಗಾಧತೆಯನ್ನು ಈ ಅಬಿವೃದ್ಧಿಯು ತೋರಿಸಿಕೊಟ್ಟಿದೆ.
ಈ ವಿಭಾಗದಲ್ಲಿ ಅವಕಾಶಗಳನ್ನು ತನ್ನದಾಗಿಸಿಕೊಂದು ಮುನ್ನುಗ್ಗುತ್ತಿರುವ ಕ್ಲಿಯರ್ಟ್ರಿಪ್ ತನ್ನ ಗ್ರಾಹಕರಿಗೆ ಬಸ್ ಪ್ರಯಾಣವನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಒದಗಿಸುವ ಸಲುವಾಗಿ ಉದ್ಯಮದಲ್ಲೇ ಮೊದಲು ಅನ್ನುವಂತಹ ‘ಬಸ್ ಪಾಸ್’ ಕೊಡುಗೆಯನ್ನು ಪ್ರಾರಂಭಿಸಿದೆ. ಬಸ್ ಪಾಸ್ ಕಡಿಮೆ ವೆಚ್ಚದಲ್ಲಿ ಸುಲಭದಲ್ಲಿ ಪ್ರಯಾಣಿಸುಲ ಸೌಲಭ್ಯ ಒದಗಿಸಲಿದ್ದು, ಪದೇ ಪದೇ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚು ಉಳಿತಾಯ ಉಂಟು ಮಾಡುವ ಪ್ರಯೋಜನ ಮತ್ತು ಹೆಚ್ಚು ಮೌಲ್ಯ-ಆಧಾರಿತ ಕೊಡುಗೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಕ್ಲಿಯರ್ಟ್ರಿಪ್ನ ಗ್ರಾಹಕ ಮಾಹಿತಿಗಳು ಬಹಿರಂಗಪಡಿಸಿರುವ ಕೆಲವು ಸಂಗತಿಗಳು ಹೀಗಿವೆ:
ಕಳೆದ 3 ತಿಂಗಳುಗಳಲ್ಲಿ ಶೇ.32ರಷ್ಟು ಬಳಕೆದಾರರು ಮತ್ತೆ ಮತ್ತೆ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ಆ ಮೂಲಕ ಬಸ್ ವಿಭಾಗವು ಪದೇ ಪದೇ ಪ್ರಯಾಣಿಸುವ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹೊಂದಿರುವುದು ತಿಳಿದು ಬಂದಿದೆ.
ಶೇ.15ರಷ್ಟು ಬಳಕೆದಾರರು ಮೂರು ತಿಂಗಳಲ್ಲಿ ಕನಿಷ್ಠ ಮೂರು ಬಾರಿ ಟಿಕೆಟ್ ಬುಕ್ ಮಾಡಿದ್ದಾರೆ. ಬುಕಿಂಗ್ ಮಾಡುವಾಗ ಶೇ.75 ಪ್ರಯಾಣಿಕರು ರಿಯಾಯಿತಿ ಕೂಪನ್ಗಳನ್ನು ಬಳಸುತ್ತಿದ್ದು, ಆ ಮೂಲಕ ಬಸ್ ಬಳಕೆದಾರರು ಸಹ ಹೆಚ್ಚು ಮೌಲ್ಯ ಪ್ರಜ್ಞೆಯನ್ನು ಹೊಂದಿರುವುದು ಸಾಬೀತಾಗಿದೆ.
ಇಂದೋರ್-ಭೋಪಾಲ್, ಬೆಂಗಳೂರು-ಹೈದರಾಬಾದ್, ಇಂದೋರ್-ಪುಣೆ, ಚೆನ್ನೈ-ಮಧುರೈ ಮತ್ತು ಕೊಯಮತ್ತೂರು-ಬೆಂಗಳೂರು ಮಾರ್ಗಗಳು ಮತ್ತೆ ಮತ್ತೆ ಬುಕಿಂಗ್ ಆಗುವ ಟಾಪ್ ಮಾರ್ಗಗಳಾಗಿವೆ.
ಗ್ರಾಹಕರು ಬಸ್ ಬುಕಿಂಗ್ ಮಾಡುವಾಗ ₹150 ಶುಲ್ಕ ನೀಡಿ ಬಸ್ ಪಾಸ್ ಖರೀದಿಸಬಹುದು. ಬಸ್
ಪಾಸ್ನ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:
ಗ್ರಾಹಕರು ತಮ್ಮ ಪ್ರಸ್ತುತ ಬುಕಿಂಗ್ ದರ ಕನಿಷ್ಠ ₹300 ಇದ್ದರೆ ಅದಕ್ಕೆ ₹100 (ಇತರ ಕೂಪನ್ ಲಾಭಗಳನ್ನು ಪಡೆಯುವುದರ ಜೊತೆಗೆ) ತಕ್ಷಣದ ರಿಯಾಯಿತಿಯನ್ನು ಪಡೆಯುತ್ತಾರೆ. ಒಂದು ಬಸ್ ಪಾಸ್ ಹೊಂದಿರುವ ಗ್ರಾಹಕರು ರಿಯಾಯಿತಿ ದರದಲ್ಲಿ ಗರಿಷ್ಠ 5 ಬುಕಿಂಗ್ಗಳನ್ನು ಮಾಡಬಹುದು.
ಗ್ರಾಹಕರು ಒಂದು ಬಸ್ ಪಾಸ್ ಖರೀದಿಸಿದರೆ ₹500 ಅನ್ನು ಉಳಿತಾಯ ಮಾಡಬಹುದು.
ಪ್ರತೀ ಬಸ್ ಪಾಸ್, ಖರೀದಿಸಿದ ದಿನಾಂಕದಿಂದ 90 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
ಈ ಕುರಿತು ಮಾತನಾಡಿರುವ ಕ್ಲಿಯರ್ಟ್ರಿಪ್ನ ಚೀಫ್ ಬಿಸಿನೆಸ್ ಆಂಡ್ ಗ್ರೋತ್ ಆಫೀಸರ್ ಅನುಜ್ ರಾಠಿ ಅವರು, “ಕಳೆದ ಒಂದು ವರ್ಷದಲ್ಲಿ ಕ್ಲಿಯರ್ಟ್ರಿಪ್ನ ಬಸ್ ವಿಭಾಗವು ಶೇ.150 ಅಭಿವೃದ್ಧಿ ದಾಖಲಿಸಿದೆ.
ಈ ಸಾಧೆಯು ಈ ವಿಭಾಗಕ್ಕೆ ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ನಮ್ಮ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಮಾರುಕಟ್ಟೆ ಸಂಶೋಧನೆಗಳನ್ನು ನಡೆಸಿದ ಬಳಿಕ ಉತ್ತಮ ಉತ್ಪನ್ನಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಕ್ಲಿಯರ್ಟ್ರಿಪ್ ಸಂಸ್ಥೆಯು ‘ಬಸ್ ಪಾಸ್’ ಮೂಲಕ ನಮ್ಮ ಬಳಕೆದಾರರ ಸಮೂಹಕ್ಕೆ ಉತ್ತಮ ಉಳಿತಾಯ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ವಿಶ್ವಾಸಾರ್ಹ ಪ್ರಯಾಣ ಪಾಲುದಾರರಾಗಿ ನಮ್ಮ ಸ್ಥಾನವನ್ನು ಬಲಪಡಿಸುವ ಜೊತೆಗೆ ಕೈಗೆಟುಕುವ ದರದಲ್ಲಿ ಪ್ರಯಾಣ ಸೌಲಭ್ಯ ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.
ಕ್ಲಿಯರ್ಟ್ರಿಪ್ ಗ್ರಾಹಕರಿಗೆ ವಿವಿಧ ಉತ್ಪನ್ನಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಸಾರಿದೆ ಮತ್ತು ಹೊಸತಾಗಿ ಫ್ಲಿಪ್ ಕಾರ್ಟ್ ನಲ್ಲಿಯೂ ಬಸ್ ಸೇವೆಯನ್ನು ಆರಂಭಿಸಿದೆ.