ಹಲವಾರು ಕಾರಣದಿಂದಾಗಿ ತೆರಿಗೆದಾರರು ತಾವು ಪಾವತಿ ಮಾಡಬೇಕಾದ ತೆರಿಗೆಗಿಂತ ಅಧಿಕ ತೆರಿಗೆಯನ್ನೇ ಪಾವತಿ ಮಾಡುತ್ತಾರೆ. ಈ ಸಂದರ್ಭದಲ್ಲಿ ನಮ್ಮ ಹಣವನ್ನು ನಾವು ಮರಳಿ ಪಡೆಯಲು ಇರುವ ಒಂದೇ ಒಂದು ದಾರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿ ರಿಫಂಡ್ ಪಡೆಯುವುದು. ಸಾಮಾನ್ಯವಾಗಿ ಈಗಾಗಲೇ ಹೇಳಿರುವಂತೆ ನೀವು ಎಷ್ಟು ತೆರಿಗೆಯನ್ನು ಪಾವತಿ ಮಾಡಬೇಕೋ ಅದಕ್ಕಿಂತ ಅಧಿಕ ತೆರಿಗೆ ಪಾವತಿ ಮಾಡಿದ್ದರೆ ಮಾತ್ರ ನಿಮಗೆ ಆದಾಯ ತೆರಿಗೆ ರಿಫಂಡ್ ಆಗಲಿದೆ. ಇದಕ್ಕಾಗಿ ಫಾರ್ಮ್ 30 ಅನ್ನು ಬಳಕೆ ಮಾಡಲಾಗುತ್ತದೆ. ನೀವು ಐಟಿಆರ್ ಸಲ್ಲಿಕೆ ಮಾಡಿದ್ದರೂ ಇನ್ನೂ ಕೂಡಾ ಆದಾಯ ತೆರಿಗೆ ರಿಫಂಡ್ ಆಗದಿದ್ದರೆ ನೀವು ಅದನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ. ಐಟಿಆರ್ ರಿಫಂಡ್ ಆಗಿದೆಯೇ, ಇಲ್ಲವೇ ಎಂಬುದನ್ನು ಆನ್ಲೈನ್ ಮೂಲಕವೂ ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಐಟಿಆರ್ ರಿಫಂಡ್ ಸ್ಥಿತಿಗತಿಯನ್ನು ಆನ್ಲೈನ್ ಮೂಲಕ ತಿಳಿಯುವ ವಿಧಾನವನ್ನು ತಿಳಿಯುವ ಪ್ರಯತ್ನ ಪಡೋಣ.
ನಿಮ್ಮ ಆದಾಯ ತೆರಿಗೆ ರಿಫಂಡ್ ಪ್ರಕ್ರಿಯೆ ಆಗದಿದ್ದರೆ ಈ ಬಗ್ಗೆ ನಿಮಗೆ ಸಂದೇಶ ಬರಲಿದೆ. ಇದಕ್ಕಾಗಿ ನೀವು ಮೊದಲು ಆದಾಯ ತೆರಿಗೆ ಇಫೈಲಿಂಗ್ ವೆಬ್ಸೈಟ್ಗೆ (incometaxindiaefiling.gov.in) ಲಾಗಿನ್ ಆಗಬೇಕು. ನಿಮ್ಮ ಯೂಸರ್ ಐಡಿ, ಪಾಸ್ವರ್ಡ್, ದಿನಾಂಕ, ಕ್ಯಾಪ್ಚಾ ಹಾಕಿ ಲಾಗಿನ್ ಆಗಬೇಕಾಗುತ್ತದೆ. ಆ ಬಳಿಕ My Account ಸೆಕ್ಷನ್ಗೆ ಹೋಗಿ Refund/Demand Status ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮಾಹಿತಿ ಲಭ್ಯವಾಗಲಿದೆ.
ನಿಮ್ಮ ರಿಫಂಡ್ ಸ್ಟೇಟಸ್ ‘processed,’ ಎಂದು ಇದ್ದರೆ ರಿಟರ್ನ್ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂದು ಅರ್ಥ. ‘Submitted and pending for e-verification/verification’ ಎಂದು ಇದ್ದರೆ ನೀವು ಐಟಿಆರ್ ಫೈಲ್ ಮಾಡಿದ್ದೀರಿ ಆದರೆ ಈವರೆಗೂ ಇ ವೆರಿಫಿಕೇಶನ್ ಆಗಿಲ್ಲ ಎಂದು ಅರ್ಥ ಅಥವಾ ಐಟಿ ಇಲಾಖೆಗೆ ಇನ್ನು ಕೂಡಾ ಈ ಐಟಿಆರ್ ಲಭ್ಯವಾಗಿಲ್ಲ ಎಂದು ಅರ್ಥ. ‘Successfully e-verified/verified’ ಎಂದು ಇದ್ದರೆ ನೀವು ಐಟಿಆರ್ ಅನ್ನು ಸಲ್ಲಿಕೆ ಮಾಡಿದ್ದು ರಿಟರ್ನ್ ಅನ್ನು ವೆರಿಫಿಕೇಶನ್ ಮಾಡಲಾಗಿದೆ. ಆದರೆ ರಿಟರ್ನ್ ಅನ್ನು ಇನ್ನು ಕೂಡಾ ಐಟಿ ಅಧಿಕಾರಿಗಳು ಪ್ರೋಸೆಸಿಂಗ್ ಮಾಡಿಲ್ಲ ಎಂದಾಗಿದೆ. ‘Defective’ ಅಥವಾ ‘Expired’ ಎಂದು ಕೂಡಾ ಕಾಣಿಸಬಹುದು. Defective ಎಂದು ಇದ್ದರೆ ನಿಮ್ಮ ಐಟಿಆರ್ ಫೈಲಿಂಗ್ನಲ್ಲಿ ತಪ್ಪು ಇರುವುದು ಐಟಿಆರ್ ಇಲಾಖೆಯ ಗಮನಕ್ಕೆ ಬಂದಿದೆ ಎಂದು ಅರ್ಥವಾಗಿದೆ. Expired ಎಂದು ಇದ್ದರೆ 90 ದಿನಗಳ ಕಾಲಾವಧಿಯ ಒಳಗೆ ಈ ರಿಫಂಡ್ ಕ್ಲೈಮ್ ಮಾಡಲಾಗಿದೆ ಎಂದಾಗಿದೆ.
NECS/RTGS ಮೂಲಕ ತೆರಿಗೆದಾರರ ಬ್ಯಾಂಕ್ ಖಾತೆಗೆ ಮರುಪಾವತಿಸಬೇಕಾದ ಮೊತ್ತದ ನೇರ ವರ್ಗಾವಣೆ ಮಾಡುವುದು ಸಾಮಾನ್ಯ ವಿಧಾನವಾಗಿದೆ. ಚೆಕ್ ಮೂಲಕ ಆದಾಯ ತೆರಿಗೆ ಮರುಪಾವತಿಯು ಪರ್ಯಾಯ ಆಯ್ಕೆಯಾಗಿದೆ.