ಕನ್ನಡ ಬಿಗ್ಬಾಸ್ ಸೀಸನ್ 10 ಇನ್ನೇನು ಆರಂಭವಾಗಲಿದೆ. ಇದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಸಲಾಗುತ್ತಿದೆ. ಸೆ.30ಕ್ಕೆ ಓಟಿಟಿ ಸೀಸನ್-2 ಆರಂಭವಾಗಲಿದ್ದು, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ.
ಅಭಿಮಾನಿಗಳು ಕೂಡ ಶೋ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ಗಳು ಆಗಲೇ ವೈರಲ್ ಆಗುತ್ತಿದೆ. ಈ ಬಾರಿ ಕೂಡ ಮೊದಲು ಓಟಿಟಿ ಸೀಸನ್ ಬಳಿಕವೇ 10 ನೇ ಸೀಸನ್ ಆರಂಭಿಸಲಾಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ. ಸೆ.30ಕ್ಕೆ ಓಟಿಟಿ ಸೀಸನ್-2 ಆರಂಭವಾಗಲಿದೆ ಎಂದು ಹೇಳಲಾಗುತ್ತಿರುವುದಂತು ಸತ್ಯ.
ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಜನಪ್ರಿಯ ರಿಯಾಲಿಟಿ ಶೋ ಅನ್ನು ನಡೆಸಿಕೊಡಲಿದ್ದಾರೆ. ಈ ಸಲ ಕೂಡ ಬಿಗ್ಬಾಸ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ‘ಬಿಗ್ ಬಾಸ್’ ಶೋ ಆಯೋಜಕರು ಕಳೆದ ಸೀಸನ್ ನಿಂದ ‘ಬಿಗ್ ಬಾಸ್ ಓಟಿಟಿ” ಶೋವನ್ನೂ ಆರಂಭಿಸಿದ್ದರು. ಬಳಿಕ ಸೀಸನ್ 9 ಆರಂಭವಾಗಿತ್ತು. ಹೀಗಾಗಿ ಈ ಬಾರಿ ಕೂಡ ಓಟಿಟಿ ಸೀಸನ್ 2 ನಡೆದ ಬಳಿಕವೇ ಬಿಗ್ಬಾಸ್ ಸೀಸನ್ 10 ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಕಲರ್ಸ್ ಕನ್ನಡದಲ್ಲಿ ಸದ್ಯ ಅನುಬಂಧ ಅವಾರ್ಡ್ ಗೆ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲ ವಾರ ಅನುಬಂಧ ಅವಾರ್ಡ್ ಶೂಟಿಂಗ್ ನಡೆಯಲಿದ್ದು, ಸೆಪ್ಟೆಂಬರ್ ಮೂರನೇ ವಾರದಲ್ಲಿ ಶೋ ಟೆಲಿಕಾಸ್ಟ್ ಮಾಡಲು ಕಲರ್ಸ್ ಕನ್ನಡ ಯೋಜನೆಯಲ್ಲಿದೆ. ಇದಾದ ಬಳಿಕ ಬಿಗ್ ಬಾಸ್ ಸೆಪ್ಟೆಂಬರ್ ಅಂತ್ಯಕ್ಕೆ ಆರಂಭವಾಗಲಿದೆ ಎನ್ನಲಾಗುತ್ತಿದೆ.
ಬಿಗ್ಬಾಸ್ ಓಟಿಟಿ ಎರಡನೇ ಸೀಸನ್ಗೆ ತಯಾರಿ ನಡೆಸುತ್ತಿರುವ ವಾಹಿನಿ ಮತ್ತು ಶೋ ತಂಡ ಸದ್ಯ ಸ್ಪರ್ಧಿಗಳ ಹುಡುಕಾಟ ನಡೆಸುತ್ತಿದ್ದು, ಅದರ ಜೊತೆಗೆ ಬಿಗ್ಬಾಸ್ ಸೀಸನ್ 10 ಕ್ಕೂ ಸ್ಪರ್ಧಿಗಳ ಹುಡುಕಾಟ ನಡೆಸುತ್ತಿದೆ ಎಂದು ಹೇಳಲಾಗಿದೆ.
ಎಂದಿನಂತೆ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಶೋಗೆ ದೊಡ್ಡ ಸೆಟ್ ಹಾಕಲಾಗಿದೆ. ಇನ್ನು ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ, ಹುಚ್ಚ ಸಿನೆಮಾದ ನಟಿ ರೇಖಾ, ನಟಿ ಆಶಾ ಭಟ್, ರೀಲ್ಸ್ ನಲ್ಲಿ ಫೇಮಸ್ ಆಗಿರುವ ಭೂಮಿಕಾ ಬಸವರಾಜ್ ಅವರು ಸ್ಪರ್ಧಿಗಳಾಗಲಿದ್ದಾರೆ ಎಂದು ಸುದ್ದಿ ಹಬ್ಬಿದೆ.
ಏನೇ ಆದರೂ ಆಡಿಶನ್ ನಡೆದು ಶೋ ಆರಂಭವಾದ ಬಳಿಕ ದೊಡ್ಮನೆಗೆ ಯಾರೆಲ್ಲ ಎಂಟ್ರಿ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಅಲ್ಲಿಯವರೆಗೆ ಕುತೂಹಲದಿಂದ ಕಾಯಬೇಕಷ್ಟೆ.