ಮಳೆಗಾಲದಲ್ಲಿ ಹೊರಗಡೆ ಸುರಿಯುತ್ತಿರುವ ವರ್ಷಧಾರೆಯ ನಡುವೆ ಫಿಟ್ನೆಸ್ ಕಾಯ್ದುಕೊಳ್ಳುವುದು ನಿಜಕ್ಕೂ ಒಂದು ದೊಡ್ಡ ಸವಾಲೆ ಸರಿ. ಸಮಯವಿಲ್ಲದೆ ಬರುವ ಮಳೆಗಾಲದಲ್ಲಿ ಹೊರಗಡೆ ವಾಕಿಂಗ್ ಜಾಕಿಂಗ್ ಇದ್ದರೆ ಆಟಗಳನ್ನು ಆಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಮನೆಯ ಒಳಗಡೆ ಕೆಲವು ವ್ಯಾಯಾಮಗಳನ್ನು ಮಾಡಿ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು.
ಆದರೆ ಮಾನ್ಸೂನ್ ಬೇಸಿಗೆಯ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ದೇಹ, ಮನಕ್ಕೆ ಮುದ ನೀಡುವುದು ಅಂತು ಸತ್ಯ. ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಕುಡಿಯುತ್ತಾ, ಪಕೋಡ ತಿನ್ನುತ್ತಾ ಪೇಪರ್ ಓದಲು ಖುಷಿ ಎನ್ನಿಸುತ್ತದೆ. ಆದರೆ ಮಳೆಗಾಲದಲ್ಲಿ ನಮ್ಮ ದೇಹ ಜಡವಾಗಿಸುವಾದ ತರ ಇರುತ್ತದೆ. ಅಲ್ಲದೆ ಒಂದೇ ಸಮನೆ ಸುರಿಯುತ್ತಿರುವ ಮಳೆಯು ಬೆಳಿಗಿನ ವಾಕಿಂಗ್ ಹೋಗಲು ಅನುಮತಿಸುವುದಿಲ್ಲ. ತಿನ್ನುವುದು ಕುಳಿತುಕೊಳ್ಳುವುದು ಇದು ದೇಹದಲ್ಲಿ ಇನ್ನಷ್ಟು ಕ್ಯಾಲೊರಿ ಹೆಚ್ಚಲು ಕಾರಣವಾಗುತ್ತದೆ.
ಮಳೆಗಾಲದಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ಇನ್ಡೋರ್ ವ್ಯಾಯಾಮಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ದೇಹ ಫಿಟ್ ಆಗಿರಲು ನೀವು ದಿನದಲ್ಲಿ ಎಷ್ಟು ಹೆಜ್ಜೆ ನಡೆಯುತ್ತೀರಿ ಎಂಬುದು ಮುಖ್ಯವಾಗುತ್ತದೆ. ಆರೋಗ್ಯವಂತ ವ್ಯಕ್ತಿ ಫಿಟ್ನೆಸ್ ಕಾಯ್ದುಕೊಳ್ಳಲು 10000 ಹೆಜ್ಜೆ ನಡೆಯಬೇಕು. ಮಳೆಗಾಲದಲ್ಲಿ ಇದನ್ನು ಹೇಗೆ ಮಾಡುವುದೆಂದರೆ:
ಮಳೆಗಾಲದಲ್ಲಿ ಇನ್ಡೋರ್ ವಾಕಿಂಗ್ಗೆ ಟಿವಿ ನೋಡುವಾಗ ನಡೆಯುವುದು ಒಂದು ಆಯ್ಕೆ. ಟಿವಿ ನೋಡುವಾಗ, ಸಂಗೀತ ಕೇಳುವಾಗ, ಫೋನ್ನಲ್ಲಿ ಮಾತನಾಡುವಾಗ ನಡೆದಾಡಿ. ಇದು ನೀವು ಎಲ್ಲಿಗೂ ಹೋದಂತೆ ಅನ್ನಿಸುವುದಿಲ್ಲ, ಆದರೆ ಹೆಜ್ಜೆಗಳು ಜಾಸ್ತಿ ಆಗುತ್ತದೆ ಇದರಿಂದ ನೀವು ವಾಕಿಂಗ್ ಮಾಡಿದ ಹಾಗೆ ಆಗುತ್ತದೆ.
ಮಳೆಗಾಲದಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ಇನ್ನೊಂದು ದಾರಿ ಎಂದರೆ ಡಾನ್ಸ್ ಮಾಡುವುದು. ಮನೆಯೊಳಗೆ ಮ್ಯೂಸಿಕ್ ಹಾಕಿಕೊಂಡು ಡಾನ್ಸ್ ಮಾಡಿ ಅಥವಾ ಏರೋಬಿಕ್ ವ್ಯಾಯಾಮ ಮಾಡಬಹುದು. ಜುಂಬಾ, ಸ್ಕಿಪಿಂಗ್, ಜಪಿಂಗ್ ಇವುಗಳನ್ನು ಮನೆಯ ಒಳಗಡೆ ಮಾಡಬಹುದಾದ ಉತ್ತಮ ವ್ಯಾಯಾಮಗಳಾಗಿವೆ. ಇದರಿಂದ ದೇಹ ಜಡತ್ವದಿಂದ ಹೊರ ಬರುತ್ತದೆ.
ಮಳೆಗಾಲದಲ್ಲಿ ಕಚೇರಿ ಅಥವಾ ಅಪಾರ್ಟ್ಮೆಂಟ್ ವರಾಂಡದಲ್ಲಿ ನಡೆದಾಡತ್ತಿರಬೇಕು. ಶಾಪಿಂಗ್ ಕಾಂಪ್ಲೆಕ್ಸ್ ಅಥವಾ ಶಾಪಿಂಗ್ ಮಾಲ್ಗಳ ಒಳಗೂ ಸುಮ್ಮನೆ ನಡೆದಾಡಬಹುದು. ಇದು ನಿಮಗೆ ಹೆಜ್ಜೆಯ ಕೌಂಟ್ ಹೆಚ್ಚಲು ಸಹಾಯ ಮಾಡುತ್ತದೆ. ಅಲ್ಲದೆ ಮಳೆಯ ಸಮಸ್ಯೆಯೂ ಗೊತ್ತಾಗದೆ ಉತ್ತಮ ವಾಕಿಂಗ್ ಸಿಕ್ಕ ಹಾಗೆ ಆಗಿ ದೇಹವನ್ನು ಫಿಟ್ ಇರಲು ಸಹಾಯ ಮಾಡುತ್ತದೆ.
ನಿಮ್ಮ ಮನೆಯಲ್ಲಿ ಟ್ರೆಡ್ಮಿಲ್ ಇದ್ದರೆ ನೀವು ಖಂಡಿತ ಅದರ ಮೇಲೆ ಹೆಚ್ಚು ಹೆಚ್ಚು ನಡೆದಾಡಬಹುದು ಅಥವಾ ಜಿಮ್ನಲ್ಲಿ ಹೋಗಿ ಟ್ರೆಡ್ಮಿಲ್ ಮೇಲೆ ನಡೆಯುವುದು ಕೂಡ ಒಂದು ಒಳ್ಳೆಯ ದೇಹದಂಡನೆಯಾಗಿದೆ.
ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜೊತೆ ಸೇರಿ ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನಿಸ್, ಬಾಡ್ಮಿಂಟನ್ ಆಟಗಳನ್ನೂ ಸಹ ಆಡಬಹುದು. ಈ ಚಟುವಟಿಕೆಗಳು ನಿಮ್ಮನ್ನು ಕ್ರಿಯಾಶೀಲರನ್ನಾಗಿಸುವುದು ಮಾತ್ರವಲ್ಲ, ನಿಮಗೆ ಮನರಂಜನೆಯನ್ನೂ ನೀಡುತ್ತವೆ.
ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು, ಧೂಳು ಗುಡಿಸುವುದು ಒರೆಸುವುದು ಮುಂತಾದ ದೈನಂದಿನ ಚಟುವಟಿಕೆಗಳು ನಿಮ್ಮ ಹೆಜ್ಜೆಯ ಸಂಖ್ಯೆ ಹೆಚ್ಚಲು ನೆರವಾಗುತ್ತದೆ. ಮಳೆಗಾಲದಲ್ಲಿ ಆದಷ್ಟು ಇವುಗಳನ್ನು ಮಾಡುತ್ತಿರುವುದು ಉತ್ತಮ.