ಯುಪಿಐ ಲೈಟ್ ವಾಲೆಟ್ ಮೂಲಕ ಮಾಡುವ ಪಾವತಿಗಳ ಮಿತಿಯನ್ನು ಈಗಿರುವ 7200ರಿಂದ 7500ಕ್ಕೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಧರಿಸಿದೆ. ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ
ಯುಪಿಐ ಲೈಟ್ ಮೂಲಕ ಹಣ ಪಾವತಿ ಮಾಡಲು ಎರಡು ಹಂತಗಳ ಸುರಕ್ಷತೆ ಇರುವುದರಿಂದ (ಅಂದರೆ, ಪಾವತಿದಾರರು ನಾಲ್ಕು ಅಥವಾ ಅಂಕಿಗಳ ಪಾಸ್ವರ್ಡ್ ನಂಬರ್ ಅಗತ್ಯ ಇಲ್ಲ) ಯುಪಿಐ ವಾಲೆಟ್ನಲ್ಲಿ ಇರಿಸಬಹುದಾದ ಮೊತ್ತದಲ್ಲಿ ಯಾವುದೇ ಬದಾವಣೆ ಮಾಡಿಲ್ಲ. ಅದನ್ನು 12 ಸಾವಿರ ಉಳಿಸಿಕೊಳ್ಳಲಾಗಿದೆ ಎಂದು ಈ ಮೂಲಕ ತಿಳಿಸಿದೆ.
ಇಂಟರ್ನೆಟ್ ಸಂಪರ್ಕವಿಲ್ಲದಿದ್ದಾಗಲೂ ಯುಪಿಐ ಲೈಟ್ ಹಣ ಪಾವತಿ ಮಾಡಲು ಅನುಕೂಲ ಆಗುವಂತಹ ವ್ಯವಸ್ಥೆಯನ್ನು ರೂಪಿಸಲು ಆರ್ಬಿಐ ಮುಂದಾಗಿದೆ. ಇಂಟರ್ನೆಟ್ ಸಂಪರ್ಕ ದುರ್ಬಲ ಆಗಿದ್ದಾಗ ಅಥವಾ ಸಂಪರ್ಕವೇ ಇಲ್ಲದಿದ್ದಾಗ ಯುಪಿಐ ಲೈಟ್ನಲ್ಲಿ ‘ನಿಯರ್ ಫೀಲ್ಡ್ ಕಮ್ಯುನಿಕೇಷನ್’ (ಎನ್ಎಫ್ಸಿ) ತಂತ್ರಜ್ಞಾನವನ್ನು ಬಳಸಿ ಹಣ ಪಾವತಿಸುವ ಆಯ್ಕೆ ಲಭ್ಯವಾಗಲಿದೆ.
ಯುಪಿಐ ಪಾವತಿಯಲ್ಲಿ ಕೃತಕ ಬುದ್ಧಿಮತ್ತೆ (ಎ.ಐ.) ತಂತ್ರಜ್ಞಾನ ಬಳಕೆ ಮಾಡುವುದನ್ನು ಸಹ ಆರ್ಬಿಐ ಪ್ರಸ್ತಾಪಿಸಿದೆ. ಯುಪಿಐನಲ್ಲಿ ‘ಕಾನ್ವರ್ಸೇಷನಲ್ ಪೇಮೆಂಟ್ಸ್’ (ಚಾಟ್ ಅಥವಾ ಸಂದೇಶ ರವಾನಿಸುವ ಮೂಲಕ ಪಾವತಿ) ಸೌಲಭ್ಯ ಬಳಕೆಗೆ ಬರಲಿದೆ.
ಈ ಸೌಲಭ್ಯದಲ್ಲಿ ಬಳಕೆದಾರನು ವರ್ಗಾವಣೆಯನ್ನು ಹಣ ವ್ಯವಸ್ಥೆಯ ಮೂಲಕ ನಿರ್ವಹಿಸಬಹುದಾಗಿದೆ. ಸ್ಮಾರ್ಟ್ಫೋನ್ ಮತ್ತು ಫೀಚರ್ ಪೋನ್ಗಳಲ್ಲಿಯೂ ಈ ಆಯ್ಕೆ ಲಭ್ಯವಾಗುವಂತೆ ಮಾಡಲಾಗುವುದು. ಆರಂಭದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಇದು ಕ್ರಮೇಣ ಭಾರತದ ಎಲ್ಲ ಭಾಷೆಗಳಲ್ಲಿ ಬಳಕೆಗೆ ಲಭ್ಯವಿರಲಿದೆ. ಇತರ ಭಾಷೆಗಳಲ್ಲಿಯೂ ಬಳಕೆಗೆ ಲಭ್ಯವಾಗಿದೆ. ಈ ಕುರಿತು ಎನ್ಪಿಸಿಐಗೆ ಶೀಘ್ರವೇ ಸೂಚನೆಗಳನ್ನು ನೀಡಲಾಗುವುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.