ಗ್ಯಾಸ್ ದುಬಾರಿಯಾಗಿರುವ ಕಾಲದಲ್ಲಿ ಮದ್ಯಮ ವರ್ಗದ ಜನರ ಕೈ ಹಿಡಿದಿರುವುದು ಈ ಸಿಗಡಿ. ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ದುಬಾರಿ ಯಾಗುತ್ತಿದೆ. ಜನರು ಅಡುಗೆ ಮಾಡಲು ಪಾರ್ಯಯ ಮಾರ್ಗವನ್ನು ಅವಲಂಬಿಸುತ್ತಿದ್ದಾರೆ. ಎಷ್ಟೋ ಕುಟುಂಬಗಳು ಮನೆಯ ಒಳಗೆ ಗ್ಯಾಸ್ ನಲ್ಲಿ ಅಡುಗೆ ಮಾಡಿದ್ದರೆ. ಮನೆಯ ಹೊರಗೆ ಒಲೆಯಲ್ಲಿಯೂ ಅಡುಗೆ ಮಾಡುತ್ತಿರುತ್ತಾರೆ.
ಜನರು ಅಡುಗೆ ಮೆನೆಯ ವಿನ್ಯಾಸವನ್ನು ಬದಲಾಯಿಸಿಕೊಂಡತೆ ಅಡುಗೆ ಮಾಡುವ ವಿಧಾನಗಳನ್ನು ಕೂಡ ಸಾಕಷ್ಟು ಬದಲಾಯಿಸಿಕೊಂಡಿದ್ದಾರೆ. ಅಜ್ಜ-ಅಜ್ಜಿ ಕಾಲದಲ್ಲಿ ಅಡುಗೆ ಮನೆಯಲ್ಲಿ ಮಣ್ಣಿ ಒಲೆ, ನಂತರ ನಿಧಾನಕ್ಕೆ ಸೀಮೆ ಎಣ್ಣೆ ಸ್ಟೌವ್ ಗಳು ನಿಧಾನಕ್ಕೆ ತನ್ನ ಜಾಗವನ್ನು ಅಡುಗೆ ಮನೆಯಲ್ಲಿ ಪಡೆಯಿತ್ತು.
ನಂತರದ ದಿನಗಳಲ್ಲಿ ಗ್ಯಾಸ್ ಸ್ಟೌವ್ ಗಳು ತಮ್ಮ ಪ್ರಾಬಲ್ಯವನ್ನು ಮೆರೆಯಿತ್ತು. ಇಂದು ಆಧುನಿಕ ಇಂಡಕ್ಷನ್ ಸ್ಟೌವ್ಗಳು ನಮ್ಮ ಅಡುಗೆ ಮನೆಯನ್ನು ಸೇರಿಕೊಂಡಿದೆ ಯಾದರೂ ಇವುಗಳು ವಿದ್ಯತ್ ಚಾಲಿತ ಸ್ಟೌವ್ಗಳು ಆಗಿದ್ದರಿಂದ ದುಬಾರಿ ಲೈಟ್ ಬಿಲ್ಗಳನ್ನು ಪಾವತಿಸಬೇಕಾಗುತ್ತದೆ. ಇವೆಲ್ಲದರ ನಡುವೆ ಈಗ ಸಿಗಡಿ ಒಲೆಯು ತನ್ನ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡು ಬಂದಿದೆ.ಇಂದಿಗೂ ಬಹಳಷ್ಟು ಮನೆಗಳಲ್ಲಿ, ಹೊಟೇಲ್ ಗಳಲ್ಲಿ ಹಾಗೂ ಸಣ್ಣ ಪುಟ್ಟ ಹೋಂ ಮೇಡ್ ಫುಡ್ ಇಂಡಸ್ಟಿಸ್ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಸಿಗಡಿಯಲ್ಲಿ ಎರಡು ವಿಧಗಳಿವೆ ಒಂದು ಮರದ ಹುಡಿಯನ್ನು ಹಾಕಿ ಒಲೆ ಉರಿಸುವಂತದು ಇನ್ನೊಂದು ಇದ್ದಿಲನ್ನು ಹಾಕಿ ಒಲೆ ಉರಿಸುವಂತದ್ದು.ಒಂದೂವರೆ ಫೀಟ್ ಎತ್ತರವಿರುವ ಕಬ್ಬಿಣದ ವೃತ್ತಾಕಾರದ ಆಕಾರದ ಒಲೆ ಇದಾಗಿದೆ. ಮರದ ಪುಡಿ ಹಾಕಿ ಉಪಯೋಗಿಸುವ ಒಲೆಯಲ್ಲಿ ಎರಡು ಇಂಚಿನ ತೂತು ಇದ್ದು ಮೇಲ್ಭಾಗದಲ್ಲಿ ಪಾತ್ರೆ ಇಡಲು ಮೂರು ಸ್ಟ್ಯಂಡ್ ಗಳು ಇರುತ್ತದೆ. ಆದರೆ ಇದ್ದಿಲು ಹಾಕುವ ಒಲೆಯಲ್ಲಿ ಅಲ್ಲಲ್ಲಿ ಹೊಗೆ ಹೊರಗೆ ಹೋಗಲು ರಂಧ್ರಗಳನ್ನು ಮಾಡಾಲಾಗಿರುತ್ತದೆ.
ಮೂರರಿಂದ ನಾಲ್ಕು ಕೆಜಿ ತೂಕವಿರುವ ಸಿಗಡಿ ಬೇರೆ ಬೇರೆ ಗಾತ್ರದಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ಈ ಸಿಗಡಿಯ ಮತ್ತೊಂದು ಅನುಕೂಲತೆ ಎಂದರೆ ಇದನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸುಭದಲ್ಲಿ ಕೊಂಡೊಯ್ಯ ಬಹುದು..
ಎರಡು ಮರದ ತುಂಡುಗಳಲ್ಲಿ ಒಂದನ್ನು ಸಿಗಡಿಯ ಒಳಗೆ ನೇರವಾಗಿ ಇರಸಬೇಕು. ಇನ್ನೊಂದನ್ನು ಎರಡಿ ಇಂಚಿನ ತೂತಿಗೆ ಮರದ ತಂಡನ್ನು ಅಡ್ಡಲಾಗಿ ಇರಿಸಬೇಕು. ನಂತರ ಮರದ ಹುಡಿಯನ್ನು ಸಿಗಡಿಯ ಒಳಗೆ ಹಾಕಿ ಮೂರನೇ ಮರದ ತುಂಡಿನಿದ ಚೆನ್ನಾಗಿ ಗುದ್ದ ಬೇಕು. ಹೀಗೆ ಗುದ್ದಿ ಗಟ್ಟಿಯಾಗಿ ಸಿಗಡಿಯಲ್ಲಿ ಮರದ ಪುಡಿಯನ್ನು ತುಂಬಿಸಿದ ನಂತರ ಮರದ ಎರಡು ತುಂಡುಗಳನ್ನು ತೆಗೆಯಬೇಕು.
ಒಲೆಯನ್ನು ಹಚ್ಚಲು ಸಣ್ಣ ಸಣ್ಣ ಮರದ ಚೂರನಿಂದ ಬೆಂಕಿಯನ್ನು ಹಾಕಿ ಸಿಗಡಿಯ ಒಳಗೆ ಹಾಕಬೇಕು ಹಾಗೂ ಕಟ್ಟಿಗೆಯನ್ನು ಇಡಲಾಗುತ್ತದೆ. ಹೀಗೆ ನಿಧಾನಕ್ಕೆ ಸಿಗಡಿ ಉರಿಯಲು ಆರಂಭಿಸಿ ಒಂದು ದಿನದ ಇಡೀ ಅಡುಗೆಯನ್ನು ತಯಾರುಮಾಡಲು ಸಹಾಕಾರಿಯಾಗುತ್ತದೆ. ಮರದ ಮಿಲ್ ಇರುವಲ್ಲಿ ಮರದ ಹುಡಿಯನ್ನು ಗೋಣಿ ಚೀಲದಲ್ಲಿ ದುಡ್ಡು ಕೊಟ್ಟು ತುಂಬಿಸಿ ಕೊಂಡು ತಂದರೆ ಆಯಿತ್ತು. ಒಂದು ಗೋಣಿ ಮರದ ಹುಡಿ ಒಂದರಿದ ಒಂದೂವರೆ ತಿಂಗಳ ವರಗೆ ಬರುತ್ತದೆ. ಒಂದು ಗೋಣಿ ಮರದ ಹುಡಿಗೆ 50 ರೂ ವರಗೆ ವೆಚ್ಚ ತಗಲಬಹುದುದಾಗಿದೆ. ಆದರೆ ಬಳಕೆ ಮೇಲೆ ಅವಲಂಬಿತ ವಾಗಿರುತ್ತದೆ
ಏರುತ್ತಿರುವ ಗ್ಯಾಸ್ ಬೆಲೆಯಿಂದ ತತ್ತರಿಸುವ ಜನರಿಗೆ ಕೊಂಚ ರೀಲ್ ಫ್ ಕೊಟ್ಟಿರುವುದು ಈ ಸಿಗಡಿ. ಸೌತ್ ಕೆನರದಲ್ಲಿಯೇ ಹೆಚ್ಚು ಸಿಗಡಿಯನ್ನು ಬಳಸುತ್ತಾರೆ ಎಂಬ ಅಂಶವನ್ನು ಅಂಗಡಿಯವರೊಬ್ಬರು ಹೇಳುತ್ತಾರೆ. ಹಾಗೂ ಬೇಡಿಕೆ ಹೆಚ್ಚು ಇರುವುದರಿಂದ ಆರ್ಡರ್ ಕೊಟ್ಟು ತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ.
ಇಲ್ಲಿ ಪ್ರಮುಖವಾಗಿ ಗಮನಿಸ ಬೇಕಾದ ಅಂಶ ಅಂದರೆ ಇಲ್ಲಿ ಕಟ್ಟಿಗೆಯ ಒಲೆಯಲ್ಲಿ ಬರುವಷ್ಟು ಹೊಗೆ ಬರುವುದಿಲ್ಲ. ಇದರಿಂದ ಆರೋಗ್ಯದ ಮೇಲೆ ಪ್ರಭಾವ ಬೀರುವುದು ಕಡಿಮೆ. ಕಡಿಮೆ ಖರ್ಚು ಅಧಿಕ ಉಳಿತಾಯ ಮಾಡಬಹದುದಾಗಿದೆ.