ಮಂಗಳೂರು: ಮಂಗಳೂರು ಪೊಲೀಸರಿಂದ “ಆಟಿದ ಕೂಟ” ಆಚರಣೆ. ವಿವಿಧ ಖಾದ್ಯಗಳು – ಸಂಭ್ರಮದಿಂದ ಕೂಡಿದ್ದ ಠಾಣೆ.
ಬಂದರು ಪೊಲೀಸ್ ಠಾಣೆಯಲ್ಲಿ ಅರ್ಥಪೂರ್ಣ ಆಟಿದ ಕೂಟ ಕಾರ್ಯಕ್ರಮ ನಡೆಯಿತು.ಪೊಲೀಸ್ ಸಿಬ್ಬಂದಿಗಳು ತಾವೇ ಮನೆಯಲ್ಲಿ ತಯಾರಿಸಿ ತಂದ 80 ಬಗೆಯ ವಿಶೇಷ ಖಾದ್ಯಗಳನ್ನು ಪ್ರೀತಿಯಿಂದ ಉಣಬಡಿಸುವುದನ್ನು ಕಾಣುವುದೇ ಕಣ್ಣಿಗೆ ಹಬ್ಬವಾಗಿತ್ತು.
ಠಾಣಾಧಿಕಾರಿ ಆಜ್ಮತ್ ಆಲಿ ರವರಿಂದ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಸತತ ಎರಡು ವರ್ಷಗಳಿಂದ ಈ ಆಟಿದ ಕೂಟವನ್ನು ಆಚರಣೆ ಮಾಡುತ್ತಿದ್ದಾರೆ. ಠಾಣೆಯಲ್ಲಿ ಎಲ್ಲಾ ಸಿಬ್ಬಂದಿಗಳು ಸೇರಿದ್ದು, ಸಂಭ್ರಮ ಮನೆಮಾಡಿತ್ತು.