ಕೋವಿಡ್ ಲಾಕ್ಡೌನ್ ಸಮಯದಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳ ಹೆಚ್ಚಾಗಿ ಜನಪ್ರಿಯತೆಯನ್ನು ಪಡೆದುಕೊಂಡವು. ಲಾಕ್ಡೌನ್ ಸಮಯದಲ್ಲಿ ಬಿಡುಗಡೆಯಾದ ಅನೇಕ ವೆಬ್ ಸೀರಿಸ್ಗಳು ಮತ್ತು ಸಿನಿಮಾಗಳು ಅತ್ಯುತ್ತಮ ದಾಖಲೆಯ ವೀಕ್ಷಣೆಯನ್ನು ಪಡೆದುಕೊಂಡಿದ್ದವು. ವೆಬ್ ಸಿರೀಸ್ನ ಟ್ರೆಂಡ್ ಹೆಚ್ಚಾಗುತ್ತಿದ್ದು, ಕೆಲವು ವೆಬ್ ಸೀರಿಸ್ಗಳ ಸೀಸನ್ ಗಳಿಗಾಗಿ ವೀಕ್ಷಕರು ಕಾಯುತ್ತಿದ್ದಾರೆ. 2023 ರ ಬಹು ನಿರೀಕ್ಷಿತ ಹಿಂದಿ ವೆಬ್ ಸಿರೀಸ್ ಪಟ್ಟಿ ಇಲ್ಲಿದೆ
ಮಿರ್ಜಾಪುರ 3:
ಮಿರ್ಜಾಪುರ 3 ಟಾಪ್ ಒನ್ ವೆಬ್ ಸಿರೀಸ್ ಆಗಿದ್ದು, ಎರಡನೇ ಸೀಸನ್ನ ಬ್ಲಾಕ್ಬಸ್ಟರ್ ಯಶಸ್ಸಿನ ನಂತರ, ಪ್ರೈಮ್ ವಿಡಿಯೋ ಮೂರನೇ ಸೀಸನ್ನ್ನು ಬಿಡುಗಡೆ ಮಾಡುವ ಸೂಚನೆ ನೀಡಿದೆ. ಸೀಸನ್ 2 ರಲ್ಲಿ ಉತ್ತರಿಸಲಾಗದ ಸಾಕಷ್ಟು ಪ್ರಶ್ನೆಗಳಿದ್ದು ವೀಕ್ಷಕರು ಮೂರನೇ ಸೀಸನ್ಗೆ ಕಾಯುತ್ತಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 2023 ರ ಅಂತ್ಯದ ವೇಳೆಗೆ ಮುಂದಿನ ಸೀಸನ್ ಬಿಡುಗಡೆಯಾಗುವ ನಿರೀಕ್ಷೆಗಳಿವೆ.
ದಿ ಫ್ಯಾಮಿಲಿ ಮ್ಯಾನ್ ಸೀಸನ್ 3:
ಅಮೆಜಾನ್ ಪ್ರೈಮ್ ವಿಡಿಯೋದಲದಲ್ಲಿ ಬಿಡುಗಡೆಯಾದ ದಿ ಫ್ಯಾಮಿಲಿ ಮ್ಯಾನ್ನ ಮೊದಲ ಸೀಸನ್ ಸೆಪ್ಟೆಂಬರ್ 2019 ರಲ್ಲಿ ಬಿಡುಗಡೆಯಾಗಿತ್ತು. ರಾಜ್ ನಿಡಿಮೋರು ಮತ್ತು ಕೃಷ್ಣ ಡಿ.ಕೆ ರಚಿಸಿದ ಈ ಸಿರೀಸ್ ನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆಯ ಗುಪ್ತಚರ ಅಧಿಕಾರಿಯಾಗಿ ಕೆಲಸ ಮಾಡುವ ಮಧ್ಯಮ ವರ್ಗದ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಇದೇ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಮೇಡ್ ಇನ್ ಹೆವೆನ್ ಸೀಸನ್ 2:
ಮಾರ್ಚ್ 2019 ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಮೇಡ್ ಇನ್ ಹೆವೆನ್ ದೆಹಲಿಯಲ್ಲಿ ಮೇಡ್ ಇನ್ ಹೆವೆನ್ ಎಂಬ ಏಜೆನ್ಸಿಯನ್ನು ನಡೆಸುತ್ತಿರುವ ಇಬ್ಬರು ವೆಡ್ಡಿಂಗ್ ಪ್ಲಾನರ್ಗಳಾದ ತಾರಾ ಮತ್ತು ಕರಣ್ ಅವರ ಜೀವನವನ್ನು ತೋರಿಸಲಾಗಿದೆ. ಜೋಯಾ ಅಖ್ತರ್ ಎರಡನೇ ಸೀಸನ್ ಬಿಡುಗಡೆಯ ಬಗ್ಗೆ ಸುಳಿವನ್ನು ನೀಡಿದ್ದಾರೆ.
ಪಂಚಾಯತ್ ಸೀಸನ್ 3:
ಜಿತೇಂದ್ರ ಕುಮಾರ್, ರಘುವೀರ್ ಯಾದವ್, ಮತ್ತು ನೀನಾ ಗುಪ್ತಾ ನಟಿಸಿರುವ ಪಂಚಾಯತ್ ಎಂಜಿನಿಯರಿಂಗ್ ಪದವೀಧರ ಹಳ್ಳಿಯಲ್ಲಿ ಸರ್ಕಾರಿ ಉದ್ಯೋಗಿಯಾಗಿ ಪಡುವ ಕಷ್ಟಕರ ಪ್ರಯಾಣವನ್ನು ತೋರಿಸುವ ಕಾಮಿಕ್-ಡ್ರಾಮಾ ಸಿರೀಸ್. ಕೌಟುಂಬಿಕ ಮನರಂಜನೆಯನ್ನು ಹೊಂದಿರುವ ಪಂಚಾಯತ್ ಸೀಸನ್ 2 ಅನ್ನು ಪ್ರೈಮ್ ವೀಡಿಯೊದಲ್ಲಿ ಮೇ 20, 2022 ರಂದು ಬಿಡುಗಡೆಯಾಗಿತ್ತು. ಇದೀಗ, ಅಭಿಮಾನಿಗಳು ಪಂಚಾಯತ್ನ ಮೂರನೇ ಸೀಸನ್ಗಾಗಿ ಕಾಯುತ್ತಿದ್ದಾರೆ.
ಆಶ್ರಮ ಸೀಸನ್ 4:
ಭಾರತೀಯ ಓಟಿಟಿ ಹೆಚ್ಚು ವೀಕ್ಷಿಸಲ್ಪಟ್ಟ ಮತ್ತು ವಿವಾದಾತ್ಮಕ ವೆಬ್ ಸಿರೀಸಗಳಲ್ಲಿ ಒಂದಾಗಿದೆ ಆಶ್ರಮ್. ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ಝಾ ಅವರ ನಿರ್ದೇಶನಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ಇದೀಗ ಮುಂದಿನ ಅಧ್ಯಾಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಆರ್ಯ ಸೀಸನ್ 3:
ಹಾಟ್ಸ್ಟಾರ್ನ ಹಿಟ್ ಕ್ರೈಮ್ ಡ್ರಾಮಾ ಸಿರೀಸ್ ಆರ್ಯ ಮೂರನೇ ಸೀಸನ್ 2023 ರಲ್ಲಿ ಬಿಡುಗಡೆಯಾಗಲಿದೆ. ಸುಶ್ಮಿತಾ ಸೇನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ, ಮೂರನೇ ಸೀಸನ್ ಮೊದಲ ಎರಡು ಸೀಸನ್ಗಳಂತೆ ಆರ್ಯ ತನ್ನ ಕುಟುಂಬವನ್ನು ರಕ್ಷಿಸುವ ನಿರೀಕ್ಷೆಯಿದೆ.