ಇನ್ನೇನು 31 ಜುಲೈ ಬಂದೇ ಬಿಟ್ಟಿತು. ದೇಶದೆಲ್ಲೆಡೆ ಉದ್ಯೋಗಿಗಳೆಲ್ಲರು ತಮ್ಮ ಆದಾಯ ಹಾಗೂ ವ್ಯಯವನ್ನು ಲೆಕ್ಕ ಹಾಕಿ ಸರ್ಕಾರಕ್ಕೆ ತೆರಿಗೆ ಕಟ್ಟಲೇಬೇಕು.
ಅದರಲ್ಲೂ ತೆರಿಗೆ ರಿಟರನ್ಸ್ ಫೈಲ್ ಮಾಡಿದವರಲ್ಲಿ ಸುಮಾರು 70 ರಷ್ಟು ಜನ ಒಂದು ರೂಪಾಯಿ ತೆರಿಗೆ ಕಟ್ಟುತಿಲ್ಲ. ಜೀರೋ ರಿಟರ್ನ್ಸ್ ಫೈಲ್ ಮಾಡುತ್ತಿದ್ದಾರೆ.
ಆದರೆ 2020ರಲ್ಲಿ 6.48% ಇದ್ದ ತೆರಿಗೆ ಪಾವತಿದಾರರ ಸಂಖ್ಯೆ ಈ ವರ್ಷ 2023ರಲ್ಲಿ 7.40%ಗೆ ಏರಿಕೆಯಾಗಿದೆ. ಮೊದಲನೆ ಸ್ಥಾನದಲ್ಲಿ ಮಹಾರಾಷ್ಟ್ರ, ನಂತರ ಗುಜರಾತ್ ತದನಂತರ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ.
ಈ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ನೀಡಿದ ವರದಿಯ ಅನುಸಾರ ದೇಶದಲ್ಲಿ 7.40 ಕೋಟಿ ರಿಟರ್ನ್ಸ್ ಪಾವತಿದಾರರಲ್ಲಿ 5.16 ಕೋಟಿ ಅಂದರೆ 70% ರಷ್ಟು ಜನ ಜೀರೋ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುತ್ತಿದ್ದಾರೆ.
2022ರ ವರದಿಯ ಪ್ರಕಾರ ತೆರಿಗೆ ರಿಟರ್ನ್ಸ್ ಫೈಲ್ ಮಾಡುವವರು 6.94 ಕೋಟಿ ಜನರಿದ್ದರೆ ಅವರಲ್ಲಿ 5.05 ಕೋಟಿ ಜನ ಜೀರೋ ರಿಟರ್ನ್ಸ್ ಫೈಲ್ ಮಾಡ್ತಾರೆ.
ಐಟಿ ಡಿಪಾರ್ಟ್ ಮೆಂಟ್ ನೀಡಿರುವ ವರದಿಯ ಅನುಸಾರ 2.5 ಲಕ್ಷ ರೂ.ಗು ಅಧಿಕ ಸಂಪಾದನೆ ಇರುವ ಉದ್ಯೋಗಿಗಳು 60-80 ವರ್ಷ ಮೇಲ್ಪಟ್ಟವರಿಗೆ 3 ಲಕ್ಷ ರೂ. ಹಾಗೂ 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂ. ಆದಾಯ ಇರುವವರು ರಿಟರ್ನ್ಸ್ ಫೈಲ್ ಮಾಡಬೇಕಿದೆ.
2019-2020 ರಲ್ಲಿ ಒಟ್ಟು ಶೇ.6.48ರಷ್ಟು ಜನ ತೆರಿಗೆ ರಿಟರ್ನ್ಸ್ ಮಾಡಿದರೆ ಅದರಲ್ಲಿ ಶೇ. 2.90 ಜನ ಜೀರೋ ರಿಟರ್ನ್ಸ್ ಫೈಲ್ ಮಾಡುತ್ತಿದ್ದಾರೆ.
2020-2021 ರಲ್ಲಿ ಒಟ್ಟು ಶೇ.6.72ರಷ್ಟು ಜನ ತೆರಿಗೆ ರಿಟರ್ನ್ಸ್ ಮಾಡಿದರೆ ಅದರಲ್ಲಿ ಶೇ. 4.85 ಜನ ಜೀರೋ ರಿಟರ್ನ್ಸ್ ಫೈಲ್ ಮಾಡುತ್ತಿದ್ದಾರೆ.
2021-2022 ರಲ್ಲಿ ಒಟ್ಟು ಶೇ.6.94ರಷ್ಟು ಜನ ತೆರಿಗೆ ರಿಟರ್ನ್ಸ್ ಮಾಡಿದರೆ ಅದರಲ್ಲಿ ಶೇ. 5.05 ಜನ ಜೀರೋ ರಿಟರ್ನ್ಸ್ ಫೈಲ್ ಮಾಡುತ್ತಿದ್ದಾರೆ.
ಆದರೆ ಈ ವರ್ಷ 2022-2023 ರಲ್ಲಿ ಒಟ್ಟು ಶೇ.7.40ರಷ್ಟು ಜನ ತೆರಿಗೆ ರಿಟರ್ನ್ಸ್ ಮಾಡಿದರೆ ಅದರಲ್ಲಿ ಶೇ. 5.16 ಜನ ಜೀರೋ ರಿಟರ್ನ್ಸ್ ಫೈಲ್ ಮಾಡುತ್ತಿದ್ದಾರೆ.
ಅಂದರೆ ರಿಟರ್ನ್ಸ್ ಫೈಲ್ ಮಾಡುವವರ ಸಂಖ್ಯೆ ಹಚ್ಚಾಗುತ್ತಿರುವ ಹಾಗೆ ಜೀರೋ ರಿಟರ್ನ್ಸ್ ಫೈಲ್ ಮಾಡೋರೋ ಜಾಸ್ತಿ ಆಗಿದ್ದಾರೆ. ಕರ್ನಾಟಕದಲ್ಲಿ 0.43ರಷ್ಟು ಜನ ಅಂದರೆ 43 ಲಕ್ಷ ಜನರಲ್ಲಿ ಶೇ. 0.25ರಷ್ಟು ಜನ ಅಂದರೆ 25 ಲಕ್ಷ ಜನ ಜೀರೋ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ನಿಜಕ್ಕೂ ತೆರಿಗೆ ಕಟ್ಟಿದವರ ಸಂಖ್ಯೆ ಕೇವಲ 18 ಲಕ್ಷ.
ನಮ್ಮ ತೆರಿಗೆ ದುಡ್ಡು ಬಿಟ್ಟಿ ಭಾಗ್ಯಕ್ಕೆ ಹೋಗುತ್ತದೆ ಅನ್ನುವ ಎಷ್ಟೋ ಜನರು ತಮ್ಮ ಆದಾಯಕ್ಕೆ ತೆರಿಗೆಯೇ ಕಟ್ಟುತ್ತಿಲ್ಲ ಅನ್ನೋದು ಗಮನಿಸಬೇಕಾಗಿದೆ.