ಮಂಗಳೂರು : ಸರ್ಕಾರ ಬಂದು ಒಂದು ವರ್ಷವಾಗಿದೆ.ನಾವು ಏನೇನು ಮಾಡಿದ್ದೇವೆ ಅಂತ ಜನರಿಗೆ ತಿಳಿಸಿದ್ದೇವೆ ಎಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಸುಳ್ಳು ಹೇಳುತ್ತಾರೆ, ನೀವು ಸುಳ್ಳು ಹೇಳುತ್ತೀರಾ ? ನೀರಾವರಿಗೆ 16000 ಕೋಟಿ ರೂ ಇತ್ತು, ಈ ವರ್ಷ 18 ಸಾವಿರ ಕೋಟಿ ಇಟ್ಟಿದ್ದೇವೆ. ಏನು ಮಾಡಿಲ್ಲ ಅಂತ ಅಂದ್ರೆ ಏನು ಹೇಳುವುದು.
ಒಂದು ಲಕ್ಷದ 20 ಸಾವಿರ ಕೋಟಿ ಬಜೆಟ್ ಕೊಟ್ಟಿದ್ದೇವೆ, ಗ್ಯಾರೆಂಟಿಯನ್ನು ಸೇರಿಸಿ. ಬಿಜೆಪಿಯವರು ಬಜೆಟ್ ಓದುವುದಿಲ್ಲ, ಎಕನಾಮಿಕ್ಸ್ ಗೊತ್ತಾಗುವುದಿಲ್ಲ ಅಭಿವೃದ್ಧಿ ಶೂನ್ಯ ಅಭಿವೃದ್ಧಿ ಶೂನ್ಯ ಅಂತಾರೆ. ಬಡವರಿಗೆ ಆರ್ಥಿಕವಾಗಿ ಸಫಲತೆ ಕೊಡುವುದು ಅಭಿವೃದ್ಧಿ ಅಲ್ವಾ.
ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು. ಆರ್ಥಿಕ ಸಾಮಾಜಿಕ ಶಕ್ತಿ ಬಂದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಅಂಬೇಡ್ಕರ್ ಹೀಗೆ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.