ಬೆಂಗಳೂರು: ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ದಿನಗಳಲ್ಲಿ ಒಂದೆನಿಸಿದ, ಅಕ್ಷಯ ತೃತೀಯ ಹೊಸ ಪ್ರಾರಂಭ, ಸಂಪತ್ತು ಮತ್ತು ಉತ್ತಮ ಸಮೃದ್ಧಿ ತರುವ ದಿನವಾಗಿದೆ. ಇದು ಹೊಸ ಪ್ರಯತ್ನಗಳು, ಸಂಪತ್ತು ಮತ್ತು ಕೊನೆಯಿರದ ಆಶೀರ್ವಾದಗಳನ್ನು ಸಂಕೇತಿಸುತ್ತದೆ.
ಈ ವರ್ಷ ಅಕ್ಷಯ ತೃತೀಯವನ್ನು ಮೇ 10, 2024ರಂದು ಆಚರಿಸಲಾಗುತ್ತಿದೆ. ಅಕ್ಷಯ ತೃತೀಯದ ಸುತ್ತಲೂ ಸಂಭ್ರಮಾಚರಣೆ ನಡೆಯುತ್ತಿದ್ದಂತೆ ಶುದ್ಧತೆ ಮತ್ತು ಪವಿತ್ರತೆಯನ್ನು ಸಂಕೇತಿಸುವ `ನೈಜ ಬಿಳುಪು’ ಕೊಳ್ಳುವುದೂ ಮಹತ್ತರ ಅರ್ಥ ಪಡೆದಿದೆ. ಅತ್ಯಂತ ಸೂಕ್ಷ್ಮವಾದ ಬಿಳಿಯೊಂದಿಗೆ ಪ್ಲಾಟಿನಂ ಆಭರಣ ತನ್ನ ಶೇ.95ರಷ್ಟು ಶುದ್ಧತೆ ಮತ್ತು ಸಮಯರಹಿತ ನೋಟದೊಂದಿಗೆ ಈ ಸಂದರ್ಭದ ಸ್ಫೂರ್ತಿಯನ್ನು ಪರಿಪೂರ್ಣವಾಗಿ ಬಿಂಬಿಸುತ್ತದೆ. ಈ ಭೂಗ್ರಹದ ಅತ್ಯಂತ ಅಪರೂಪ ಮತ್ತು ಶುದ್ಧ ಲೋಹಗಳಲ್ಲಿ ಒಂದಾದ ಪ್ಲಾಟಿನಂ ತನ್ನ ನೈಸರ್ಗಿಕ ಬಿಳುಪಿಗೆ ಖ್ಯಾತಿ ಪಡೆದಿದ್ದು ಕಾಲ ಕಳೆದಂತೆ ಕಳೆಗುಂದುವುದಿಲ್ಲ. ಇದರಿಂದ ಈ ಆಭರಣವನ್ನು ಈ ಸಂದರ್ಭದಲ್ಲಿ ಹೆಚ್ಚಾಗಿ ಖರೀದಿಸಲಾಗುತ್ತದೆ.
ಪ್ಲಾಟಿನಂ ಆಭರಣದೊಂದಿಗೆ ಅಕ್ಷಯ ತೃತೀಯ ಸಂಭ್ರಮಿಸಲು ಬಯಸುವವರಿಗೆ ವಿಸ್ತಾರ ಶ್ರೇಣಿಯ ಆಯ್ಕೆಗಳಿವೆ. ಮಹಿಳೆಯರಿಗೆ ಪ್ಲಾಟಿನಂ ಇವಾರಾದ ಸಮಕಾಲೀನ ಆಭರಣಗಳಲ್ಲದೆ ಪುರುಷರಿಗೆ ಮೆನ್ ಆಫ್ ಪ್ಲಾಟಿನಂ ಅಡಿಯಲ್ಲಿಸ ಸ್ಟೇಟ್ಮೆಂಟ್ ಆಭರಣ ಮತ್ತು ದಂಪತಿಗಳಿಗೆ ಸುಂದರವಾಗಿ ರೂಪಿಸಿದ ಪ್ಲಾಟಿನಂ ಲವ್ ಬ್ಯಾಂಡ್ ಗಳು ಇವೆ.
ಪ್ಲಾಟಿನಂ ಆಭರಣವು ಸಂಪ್ರದಾಯ ಮತ್ತು ಆಧುನಿಕತೆಯನ್ನು ಸಂಯೋಜಿಸಿ ಅನಂತ ಸಂಪತ್ತು ಮತ್ತು ತಲೆಮಾರುಗಳ ಸೌಂದರ್ಯ ಸಂಕೇತಿಸುತ್ತದೆ. ಪ್ರತಿ ಆಭರಣದಲ್ಲೂ ಕೆತ್ತಲಾದ “ಪಿಟಿ 950” ಅತ್ಯುನ್ನತ ಶುದ್ಧತೆ ನೀಡು ಮೂಲಕ ಅಕ್ಷಯ ತೃತೀಯ ಸಂಭ್ರಮಾಚರಣೆಗೆ ಸೂಕ್ತ ಆಯ್ಕೆಯಾಗಿಸಿದೆ.
ಪಿಜಿಐ ಇಂಡಿಯಾದ ಎಂ.ಡಿ. ವೈಶಾಲಿ ಬ್ಯಾನರ್ಜೀ, “ಪ್ಲಾಟಿನಂ ಅಮೂಲ್ಯತೆ ಮತ್ತು ಅಪರೂಪದ ಗುಣವು ಯುವ ಗ್ರಾಹಕರಿಗೆ ಇಷ್ಟವಾಗುತ್ತವೆ. ಹಲವು ವರ್ಷಗಳಿಂದ ಪ್ಲಾಟಿನಂ ಭಾವನಾತ್ಮಕವಾಗಿ ಗಮನಾರ್ಹ ಮೈಲಿಗಲ್ಲುಗಳು, ವಿಶೇಷ ಸಂದರ್ಭಗಳು ಮತ್ತು ಉತ್ಸವಗಳಿಗೆ ಆಯ್ಕೆಯ ಲೋಹವಾಗಿ ಹೊರಹೊಮ್ಮಿದೆ. ಅದು ಕ್ಲಾಸಿನ್ ಡಿಸೈನ್ ಗಳಾಗಿರಲಿ ಅಥವಾ ಆವಿಷ್ಕಾರಕ ಸೃಷ್ಟಿಗಳಾಗಿರಲಿ, ಪ್ಲಾಟಿನಂ ಆಭರಣವು ಅಕ್ಷಯ ತೃತೀಯದ ಅಂತಃಸ್ಸತ್ವವನ್ನು ಬಿಂಬಿಸುತ್ತದೆ” ಎಂದರು.
ಕಲ್ಯಾಣ್ ಜ್ಯೂವೆಲ್ಲರ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಜೇಶ್ ಕಲ್ಯಾಣರಾಮನ್, “ಕಲ್ಯಾಣ್ ಜ್ಯೂವೆಲ್ಲರ್ಸ್ ನಲ್ಲಿ ನಾವು ನಮ್ಮ ಗ್ರಾಹಕರ ವಿಕಾಸಗೊಳ್ಳುತ್ತಿರುವ ಆದ್ಯತೆಗಳನ್ನು ಪೂರೈಸಲು ವಿಸ್ತಾರ ಶ್ರೇಣಿಯ ಆಭರಣ ವಿನ್ಯಾಸಗಳನ್ನು ಒದಗಿಸಲು ಆದ್ಯತೆ ನೀಡುತ್ತಿದ್ದೇವೆ. ಅಕ್ಷಯ ತೃತೀಯದ ವಿಶೇಷ ಸಂದರ್ಭದಲ್ಲಿ ಜನರು ಅಮೂಲ್ಯ ಆಭರಣ ಖರೀದಿಗೆ ಸೂಕ್ತ ಸಮಯ ಎಂದು ಭಾವಿಸುವುದರಿಂದ ಪ್ಲಾಟಿನಂ ಆಭರಣ ಪ್ರಮುಖ ಸ್ಥಾನ ಪಡೆಯುತ್ತದೆ. ಸಕಾರಾತ್ಮಕ ಹೊರನೋಟದಿಂದ ನಾವು ಈ ವರ್ಷವೂ ಗ್ರಾಹಕರು ವಿವಿಧ ಬೆಲೆಗಳ ಆಕರ್ಷಕ ಪ್ಲಾಟಿನಂ ಆಭರಣ ವಿನ್ಯಾಸಗಳನ್ನು ಖರೀದಿಸುತ್ತಾರೆ ಎಂಬ ನಂಬಿಕೆ ನಮ್ಮದು” ಎಂದರು.
ಜಾಯಲುಕ್ಕಾಸ್ ಇಂಡಿಯಾ ಪ್ರೈ.ಲಿ.ಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಅಲುಕ್ಕಾಸ್, “ಸಂಪತ್ತು, ಸಮೃದ್ಧಿ ಮತ್ತು ಶ್ರೀಮಂತಿಕೆಯ ಸಂಕೇತವಾದ ಅಕ್ಷಯ ತೃತೀಯ ಅಮೂಲ್ಯ ಆಭರಣ ಖರೀದಿಗೆ ಪವಿತ್ರ ಸಂದರ್ಭವಾಗಿದೆ. ಈ ಸಂಯೋಜನೆಯು ಪ್ಲಾಟಿನಂನ ನೈಸರ್ಗಿಕ ಬಿಳುಪು ಮತ್ತು ಸೂಕ್ಷ್ಮ ವಿನ್ಯಾಸಗಳ ಸಂಯೋಜನೆಯಾಗಿದ್ದು ಈ ಹಬ್ಬಕ್ಕೆ ಸೂಕ್ತ ಆಯ್ಕೆಯಾಗಿಸಿದೆ. ಗ್ರಾಹಕರು ಈ ಸಂದರ್ಭಕ್ಕೆ ಅಮೂಲ್ಯ ಆಭರಣ ಖರೀದಿ ಮಾಡಲು ಬಯಸುವುದರಿಂದ ಅಪರೂಪ ಮತ್ತು ಅಮೂಲ್ಯವಾದ ಈ ಲೋಹದಿಂದ ರೂಪಿಸಲಾದ ಆಭರಣ ಈ ಉತ್ಸವಕ್ಕೆ ಸೂಕ್ತ ಆಯ್ಕೆಯಾಗಿದೆ” ಎಂದರು.