ನಟ ಅಕ್ಷಯ್ ಕುಮಾರ್ ಅಭಿನಯದ ಓಮೈಗಾಡ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, 9 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ.
ಸಿನಿಮಾ ಬಿಡುಗಡೆಯಾದ ಎರಡನೇ ವಾರದಲ್ಲಿ ಕೂಡ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಚಿತ್ರ 8ನೇ ದಿನ 6.03 ಕೋಟಿ ರೂ. ಗಳಿಸಿದ್ದು, 10ನೇ ದಿನ 10.50 ಕೋಟಿ ರೂ. ಬಾಚಿಕೊಂಡಿದೆ. ಈ ಮೂಲಕ 9 ದಿನಗಳಲ್ಲಿ 101.58 ಕೋಟಿ ರೂ. ಗಳಿಸಿದೆ.
ಈ ಚಿತ್ರಕ್ಕೆ ಅಮಿತ್ ರೈ ನಿರ್ದೇಶನ ಮಾಡಿದ್ದು, ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಮತ್ತು ರಾಮಾಯಣ ಖ್ಯಾತಿಯ ಗೋವಿಲ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ನಟಿ ಸನ್ನಿ ಡಿಯೋಲ್ ಅವರ ಗದರ್-2 ಚಿತಯ್ರದೊಂದಿಗೆ ಓಮೈಗಾಡ್ -2 ಕೂಡ ರಿಲೀಸ್ ಆಗಿದ್ದು, ಗದರ್-2 ಕೂಡ ಬಾಕ್ಸ್ ಆಫೀಸ್ ನಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.